ಜಿದ್ದಾ: ಮಲೆನಾಡು ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ನಿಂದ 'ಮಲೆನಾಡ ಸಂಗಮ'
ಸೌದಿ ಅರಬಿಯ, ಫೆ.14: ಮಲೆನಾಡು ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ 'ಮಲೆನಾಡ ಸಂಗಮ' ಕಾರ್ಯಕ್ರಮವು ಫೆ.10ರಂದು ಜಿದ್ದಾದಲ್ಲಿ ನಡೆಯಿತು.
ಅದ್ನಾನ್ ಕಿರಾಅತ್ ನೊಂದಿಗೆ ಆರಂಭಗೊಂಡ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯಕ್ರಮದ ರೂವಾರಿ, ಎಂಜಿಟಿ ಪಶ್ಚಿಮ ವಲಯದ ಅಧ್ಯಕ್ಷ ಮುಷ್ತಾಕ್ ಗಬ್ಗಲ್ ವಹಿಸಿದ್ದರು.
ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಬಶೀರ್ ಬಾಳ್ಳುಪೇಟೆ ಸಮಿತಿಯ ಆಗುಹೋಗುಗಳನ್ನು ವಿವರಿಸಿದರು. ಕೇಂದ್ರ ಸಮಿತಿಯ ಗೌರವಾಧ್ಯಕ್ಷ ಶರೀಫ್ ಕಳಸ ಸಂಸ್ಥೆಯ ಏಳಿಗೆಯನ್ನು ಪ್ರಶಂಸಿಸಿದರು.
ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಇರ್ಷಾದ್ ಚಕ್ಕಮಕ್ಕಿ ನಮ್ಮ ಸಮಿತಿಯ ಸಾಧನೆಗಳನ್ನು ವಿವರಿಸಿದರು. ಕೇಂದ್ರ ಸಮಿತಿಯ ಅಧ್ಯಕ್ಷ ಅಬ್ದುಲ್ ಸತ್ತಾರ್ ಜಯಪುರ ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು.
ಕೇಂದ್ರ ಸಮಿತಿಯ ಹಿರಿಯ ಸಲಹೆಗಾರರಾದ ಫಾರೂಖ್ (ಅರಬ್ ಎನರ್ಜಿ), ಸಿರಾಜ್ ಚಕ್ಕಮಕ್ಕಿ, ರಿಯಾದ್ ವಲಯ ಅಧ್ಯಕ್ಷ ನಝೀರ್ ಮಡತ್ತಿಲ್, ಕೆಸಿಎಫ್ ಶರಫಿಯ ಸೆಕ್ಟರ್ ಅಧ್ಯಕ್ಷ ಅಬ್ದುಲ್ ರಹಿಮಾನ್ ತಂಙಳ್ ಉಚ್ಚಿಲ, ಹಿದಾಯ ಫೌಂಡೇಷನ್ ಅಧ್ಯಕ್ಷ ಹಮೀದ್ ಮಠ, ಜಮೀಯತುಲ್ ಫಲಾಹ್ ಅಧ್ಯಕ್ಷ ಅನ್ಸಾರ್ ಶೇಖ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆರೋಗ್ಯ ವಿಭಾಗದ ಅಧ್ಯಕ್ಷ ಜುನೈದ್ ಚಕ್ಕಮಕ್ಕಿ ಉಪಸ್ಥಿತರಿದ್ದರು.
ಪಶ್ಚಿಮ ವಲಯ ಎಂಜಿಟಿ ಸಮಿತಿಯ ಖಜಾಂಚಿ ಹಾರಿಸ್ ಬಿಳಗುಳ, ಉಪಾಧ್ಯಕ್ಷ ಇಸ್ಮಾಯೀಲ್ ಹೈದ್ರೋಸ್, ಗೌರವಾಧ್ಯಕ್ಷ ಸಿದ್ದೀಕ್ ಬಾಳೇಹೊನ್ನೂರು, ಸಹ ಕಾರ್ಯದರ್ಶಿ ಝೀಶಾನ್ ಬಾಳೆಹೊನ್ನೂರು, ಹಸನ್ (ಲಿಜೆಂಡ್ ತ್ವೈಬಾ), ಝಕರಿಯಾ ನೆಲ್ಯಾಡಿ, ನಾಸಿರ್ ಬಾಳೆಹೊನ್ನೂರು, ಹಾರಿಸ್ ಉಪ್ಪಳ್ಳಿ, ಬಾತಿಷ್, ಹಾಶಿರ್ ತಲಗೂರು, ಹಾರೂನ್ ತಾಜ್ ಇಸ್ಮಾಯೀಲ್ (ಹಾನ್ಬಾಲ್ ಮುನ್ನಾ ಬಾಯಿ), ಜುನೈದ್ ತಲಗೂರು, ಸೈಫುದ್ದೀನ್, ಫಹಾದ್, ಫವಾಝ್, ಸಮೀರ್, ಆಸಿಫ್ ಬಾಳೆಹೊನ್ನೂರು, ಜಸೀಮ್ ಜೆ.ಕೆ,. ರಝಾಕ್, ಸಅದ್ ಬಾಳೆಹೊನ್ನೂರು, ಮಸೂದ್ ಚಕ್ಕಮಕ್ಕಿ, ಹೈದರ್ ಯಾಂಬು (ಮೂಡಿಗೆರೆ), ಇರ್ಫಾನ್ ಬಾಳೇಹೊನ್ನೂರು, ಇರ್ಫಾನ್ RNB, ಬಾವಾಕ, ಅಮಾನ್, ಅಬ್ದುಲ್ ಅಝೀಝ್, ಅಯಾಝ್ ಮತ್ತು ನೂರ್ ಮುಹಮ್ಮದ್ ಭದ್ರಾವತಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಶಾಕಿರ್ ಹಕ್ ನೆಲ್ಯಾಡಿ, ಶರೀಫ್ ಬಾಷಾ ಅರಾಫತ್ ಮೂಡಿಗೆರೆ ಅವರು ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಿಕೊಟ್ಟರು.
ಎಂಜಿಟಿ ಘಟಕಗಳಾದ ಜುಬೈಲ್, ದಮ್ಮಾಮ್, ರಿಯಾದ್ ಸೇರಿದಂತೆ ಸೌದಿ ಅರೇಬಿಯಾದ ವಿವಿಧೆಡೆಗಳಿಂದ ಸಸಸ್ಯರು ಕುಟುಂಬ ಸಮೇತ ಭಾಗವಹಿಸಿದ್ದರು. ಮಡಿಕೆ ಒಡೆಯುವುದು, ಹಗ್ಗಜಗ್ಗಾಟ, ವಾಲಿಬಾಲ್ , ಅಲ್ಲದೇ ಮಕ್ಕಳಿಗೆ ಮತ್ತು ಮಹಿಳೆಯರಿಗೆ ರಸಪ್ರಶ್ನೆ ಸ್ಪರ್ಧೆ, ವಿಷಲ್ ಚೇರ್ ಮುಂತಾದ ಜನಾಕರ್ಷಕ ಸ್ಪರ್ಧೆಗಳಿದ್ದವು.
ಇದೇವೇಳೆ ಈ ಕಾರ್ಯಕ್ರಮದ ಡಿಸೈಗ್ನಿಂಗ್ ಮಾಡಿಕೊಟ್ಟ ಆ್ಯಂಟೋನಿ ಜೆ. ಫುರ್ಟಾಡೋ (ಸ್ಟಾನಿ) ಜೋಗ್ ಫಾಲ್ಸ್ ಅವರನ್ನು ಎಂಜಿಟಿ ವತಿಯಿಂದ ಸನ್ಮಾನಿಸಲಾಯಿತು.
ಜಲಾಲ್ ಬೇಗ್ ಕಾರ್ಯಕ್ರಮ ನಿರೂಪಿಸಿದರು. ಪಶ್ಚಿಮ ವಲಯದ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ಗಬ್ಗಲ್ ಸ್ವಾಗತಿಸಿದರು. ಕಾರ್ಯಕ್ರಮದ ನಿರ್ವಾಹಕ ರಿಯಾಝ್ ಗಬ್ಗಲ್ ವಂದಿಸಿದರು.