ಗುಬ್ಬಿ: ಚಿಕ್ಕಕೊಡಿಗೇಹಳ್ಳಿ ಬಳಿ ಸೇತುವೆಯಡಿ ಹುಲಿ ಮೃತದೇಹ ಪತ್ತೆ

ತುಮಕೂರು: ಜಿಲ್ಲೆಯ ಗುಬ್ಬಿ ತಾಲೂಕು ಅಂಕಸಂದ್ರದ ಅರಣ್ಯ ಪ್ರದೇಶದಲ್ಲಿ ಸತ್ತ ಸ್ಥಿತಿಯಲ್ಲಿ ಹುಲಿಯ ದೇಹ ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ತುಮಕೂರಿನ ದೇವರಾಯನ ದುರ್ಗದಲ್ಲಿ ಹುಲಿಯ ಓಡಾಟ ಕಂಡುಬಂದಿದ್ದು, ಹುಲಿಯ ಹೆಜ್ಜೆಗುರುತುಗಳನ್ನು ಪತ್ತೆಹಚ್ಚಲಾಗಿತ್ತು. ಈಗ ಅಂಕಸಂದ್ರದ ಅರಣ್ಯ ಪ್ರದೇಶದಲ್ಲಿರುವ ರಸ್ತೆಗೆ ನಿರ್ಮಿಸಲಾದ ಸೇತುವೆಯಡಿ ಹುಲಿಯ ಮೃತದೇಹ ಕಂಡುಬಂದಿರುವುದು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಭಯ ಮತ್ತು ಕುತೂಹಲಕ್ಕೆ ಕಾರಣವಾಗಿದೆ.
ಮೈಸೂರಿನಿಂದ ಹುಲಿ ತಜ್ಞರು ಬರುವವರೆಗೂ ಸತ್ತಂತಿರುವ ಹುಲಿಯ ಮೃತದೇಹವನ್ನು ಯಾರೂ ಮುಟ್ಟದೆ ಅಂತರವನ್ನು ಕಾಯ್ದುಕೊಳ್ಳಲಾಗಿದೆ.
ಹುಲಿ ಸಾವಿಗೆ ಖಚಿತ ಕಾರಣ ತಿಳಿದುಬಂದಿಲ್ಲ. ಯಾರಾದರು ಹುಲಿಯನ್ನು ಸಾಯಿಸಿ ಇಲ್ಲಿಗೆ ಹಾಕಿದ್ದಾರೆ. ಆಹಾರದ ಕೊರತೆಯಿಂದ ಹುಲಿ ಮೃತಪಟ್ಟಿದೆಯೋ ಗೊತ್ತಿಲ್ಲ. ಮೈಸೂರಿನಿಂದ ತಜ್ಞರು ಬಂದ ನಂತರವೇ ಹುಲಿಯ ಸಾವಿಗೆ ಕಾರಣವೇನು ಎಂಬುದು ತಿಳಿಯಲಿದೆ
Next Story





