ಡೆತ್‍ನೋಟ್ ಬರೆದಿಟ್ಟು ಬೆಸ್ಕಾಂ ಉದ್ಯೋಗಿ ಆತ್ಮಹತ್ಯೆ

ಮಂಡ್ಯ, ಫೆ.14: ಬೆಸ್ಕಾಂ ಉದ್ಯೋಗಿಯೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಸುಭಾಷ್‍ನಗರದ ಕ್ರಿಶ್ಚಿಯನ್ ಕಾಲನಿಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಚನ್ನಪಟ್ಟಣದ ಬೆಸ್ಕಾಂ ಕಚೇರಿಯಲ್ಲಿ ಪ್ರಥಮದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದೀಪಕ್(33) ಎಂಬುವರೇ ಆತ್ಮಹತ್ಯೆ ಮಾಡಿಕೊಂಡವರು. ದೀಪಕ್ ಮೂಲತಃ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕು ಸಿಂಗನಲ್ಲೂರು ಗ್ರಾಮದ ನಿವೃತ್ತ ಪ್ರಾಧ್ಯಾಪಕ ಸುಂದರ್ ಅವರ ಪುತ್ರರಾಗಿದ್ದಾರೆ.
ದೀಪಕ್ ಪತ್ನಿ ಪ್ರಿಯಾ ಕೂಡ ಮಂಡ್ಯದ ಸೆಸ್ಕ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇಬ್ಬರೂ ಕ್ರಿಶ್ಚಿಯನ್ ಕಾಲನಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ದಂಪತಿಗೆ ಮಗು ಇದೆ ಎನ್ನಲಾಗಿದೆ.
ಪತ್ನಿ ಕಿರುಕುಳ ತಾಳಲಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ದೀಪಕ್ ಡೆತ್‍ನೋಟ್ ಬರೆದಿಟ್ಟಿದ್ದಾನೆ ಎಂದು ವರದಿಯಾಗಿದ್ದು, ಈ ಸಂಬಂಧ ಪಶ್ಚಿಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Next Story





