ಫೆ.15: ಸಿಬಿಎಸ್ಇ 10, 12ನೇ ತರಗತಿ ಮಂಡಳಿ ಪರೀಕ್ಷೆ ಆರಂಭ

ಹೊಸದಿಲ್ಲಿ, ಫೆ. 14: ಸಿಬಿಎಸ್ಇ 10 ಹಾಗೂ 12ನೇ ತರಗತಿಯ ಮಂಡಳಿ ಪರೀಕ್ಷೆ-2023 ದೇಶಾದ್ಯಂತ ಫೆ. 15ರಿಂದ ಆರಂಭವಾಗಲಿದೆ.
ಸಿಬಿಎಸ್ಇ ಮಂಡಳಿ ಪರೀಕ್ಷೆ-2023 ಪೆಬ್ರವರಿ 15ರಿಂದ ಎಪ್ರಿಲ್ 5ರ ವರೆಗೆ ನಡೆಯಲಿದೆ. ದೇಶಾದ್ಯಂತ ಹಾಗೂ 26 ವಿದೇಶಗಳಲ್ಲಿ 7250ಕ್ಕೂ ಅಧಿಕ ಕೇಂದ್ರಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಸುಮಾರು 39 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದಾರೆ ಎಂದು ಸಿಬಿಎಸ್ಇ ತಿಳಿಸಿದೆ.
Next Story





