Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಅಮೆರಿಕದಿಂದಲೂ ಚೀನಾದ...

ಅಮೆರಿಕದಿಂದಲೂ ಚೀನಾದ ವಾಯುಕ್ಷೇತ್ರದಲ್ಲಿ ಬಲೂನುಗಳ ಹಾರಾಟ: ಚೀನಾದ ಪ್ರತ್ಯಾರೋಪ

14 Feb 2023 11:12 PM IST
share
ಅಮೆರಿಕದಿಂದಲೂ  ಚೀನಾದ ವಾಯುಕ್ಷೇತ್ರದಲ್ಲಿ ಬಲೂನುಗಳ ಹಾರಾಟ: ಚೀನಾದ ಪ್ರತ್ಯಾರೋಪ

ಬೀಜಿಂಗ್,ಫೆ.13:  ತನ್ನ ಅನುಮತಿಯಿಲ್ಲದೆ ಕಳೆದ ವರ್ಷ ತನ್ನ ವಾಯುಸೀಮೆಯನ್ನು  ಉಲ್ಲಂಘಿಸಿ, ಅಮೆರಿಕದ 10 ಬಲೂನುಗಳು ಹಾರಾಟ ನಡೆಸಿರುವುದಾಗಿ ಚೀನಾ ಸೋಮವಾರ ತಿಳಿಸಿದೆ. ಜಗತ್ತಿನಾದ್ಯಂತ ಚೀನಾದ ಬೇಹುಗಾರಿಕೆ ಬಲೂನುಗಳು ಕಾರ್ಯನಿರ್ವಹಿಸುತ್ತಿವೆಯೆಂದು ಆಮೆರಿಕದ ಆಪಾದಿಸಿರುವ ಬೆನ್ನಲ್ಲೇ ಬೀಜಿಂಗ್ ಈ ಪ್ರತ್ಯಾರೋಪ ಮಾಡಿದೆ.

ಚೀನಾದ ವಿದೇಶಾಂಗ  ಇಲಾಖೆಯ ವಕ್ತಾರ ವಾಂಗ್‌ವೆನ್ ಬಿನ್ ಸೋಮವಾರ ಬೀಜಿಂಗ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ‘‘ಇತರ ದೇಶಗಳ ವಾಯುಕ್ಷೇತ್ರವನ್ನು ಅಮೆರಿಕದ ಬಲೂನುಗಳು ಅಕ್ರಮವಾಗಿ ಪ್ರವೇಶಿಸುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ . ಕಳೆದ ವರ್ಷದಿಂದೀಚೆಗೆ ಅಮೆರಿಕದ ದೀರ್ಘ ಎತ್ತರಹಾರಾಟ ಸಾಮರ್ಥ್ಯದ ಬಲೂನುಗಳು ಚೀನಾದ ವಾಯು ಕ್ಷೇತ್ರವನ್ನು ಅನುಮತಿಯಿಲ್ಲದೆ 10 ಸಲ ಪ್ರವೇಶಿಸಿತ್ತು’’ ಎಂದು ಆರೋಪಿಸಿದ್ದಾರೆ.

ಆದರೆ ತಥಾಕಥಿತ ಅಮೆರಿಕದ ಬಲೂನುಗಳ ಬಗ್ಗೆ ಚೀನಾವು ಯಾವ ಕ್ರಮವನ್ನು ಕೈಗೊಂಡಿದೆ ಅಥವಾ ಅವುಗಳಿಗೆ ಸರಕಾರಿ ಅಥವಾ ಸೇನಾ ನಂಟುಗಳಿವೆಯೇ ಎಂಬ ಆರೋಪಗಳ ಬಗ್ಗೆ ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ವಾಂಗ್‌ವೆನ್ ಬಿನ್ ಯಾವುದೇ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ.

 ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್‌ಬಿನ್ ಯಾವುದೇ ವಿವರಗಳನ್ನು ನೀಡಿಲ್ಲ.

ಅಲಾಸ್ಕದಿಂದ ದಕ್ಷಿಣ ಕರೋಲಿನಾ ಕರಾವಳಿಗೆ ಹಾದು ಬಂದ ಚೀನಾದ ಶಂಕಿತ ಬೇಹುಗಾರಿಕಾ ಬಲೂನನ್ನು ಅಮೆರಿಕ ಹೊಡೆದುರುಳಿಸಿತ್ತು. ಆದರೆ ಚೀನಾವು ಈ ಬಲೂನನ್ನು ಹವಾಮಾನ  ಸಂಶೋಧನೆಯ ಉದ್ದೇಶಗಳಿಗಾಗಿ ಹಾರಿಸಿರುವುದಾಗಿ ಹೇಳಿಕೊಂಡಿತ್ತು.

ಚೀನಾದ ಶಂಕಿತ ಬೇಹುಗಾರಿಕಾ ಬಲೂನು ಪತ್ತೆಯಾದ ಘಟನೆಯ ಬಳಿಕ ಅಮೆರಿಕ-ಚೀನಾ ಬಾಂಧವ್ಯ ಇನ್ನಷ್ಟು ಹದಗೆಟ್ಟಿದೆ. ಈ ಘಟನೆಯ ಆನಂತರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಅವರು ತನ್ನ ಯೋಜಿತ ಬೀಜಿಂಗ್ ಪ್ರವಾಸವನ್ನು ರದ್ದುಪಡಿಸಿದ್ದರು.

ಚೀನಾದ  ಬಲೂನಿನ ಸೆನ್ಸರ್‌ಗಳನ್ನು ಪತ್ತೆಹಚ್ಚಿದ ಅಮೆರಿಕ ಸೇನೆ

ದಕ್ಷಿಣ ಕರೋಲಿನಾದ ಸಾಗರಪ್ರದೇಶದಲ್ಲಿ ಫೆಬ್ರವರಿ 4ರಂದು  ತಾನು ಹೊಡೆದುರುಳಿಸಿರುವ ಶಂಕಿತ ಚೀನಿ ಬೇಹುಗಾರಿಕಾ ಬಲೂನಿನಿಂದ ನಿರ್ಣಾಯಕವಾದ ಇಲೆಕ್ಟ್ರಾನಿಕ್ ಸೆನ್ಸರ್‌ಗಳನ್ನು ತಾನು ಪತ್ತೆಹಚ್ಚಿರುವುದಾಗಿ ಅಮೆರಿಕ ಸೇನೆಯು ಸೋಮವಾರ ತಿಳಿಸಿದೆ. ಈ ಸೆನ್ಸರ್‌ಗಳನ್ನು  ಬೇಹುಗಾರಿಕಾ ಮಾಹಿತಿ ಸಂಗ್ರಹಕ್ಕಾಗಿ ಬಳಸಿರುವ ಸಾಧ್ಯತೆಯಿದೆಯೆಂದು   ಅದು ಹೇಳಿದೆ.

ಈ ಬಲೂನನ್ನು ಅಮೆರಿಕ ಸೇನೆಯು  ಫೈಟರ್ ಜೆಟ್ ಮೂಲಕ ದಕ್ಷಿಣ ಕರೋಲಿನಾದ ಸಮುದ್ರಪ್ರದೇಶದಲ್ಲಿ ಹೊಡೆದುರುಳಿಸಿತ್ತು.

‘‘ ಬಲೂನು ಪತನಗೊಂಡ ಸಮುದ್ರಪ್ರದೇಶದಿಂದ ಕೆಲವು ಮಹತ್ವದ ಅವಶೇಷಗಳನ್ನು ಪತ್ತೆಹಚ್ಚಲು  ನಾವಿಕ ಸಿಬ್ಬಂದಿ ಸಫಲರಾಗಿದ್ದಾರೆ. ಈ ಬಲೂನಿನಲ್ಲಿದ್ದ  ಪ್ರಮುಖ ಸೆನ್ಸರ್ ಹಾಗೂ ಇಲೆಕ್ಟ್ರಾನಿಕ್ಸ್ ಉಪಕರಣಗಳ ತುಣುಕುಗಳನ್ನು ಗುರುತಿಸಲಾಗಿದೆ’’ ಎಂದು ಅಮೆರಿಕ ಸೇನೆಯ ಉತ್ತರ ಕಮಾಂಡ್ ಸೋಮವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಚೀನಾದ  ಈ ಬಲೂನು ಅಮೆರಿಕ ಹಾಗೂ ಕೆನಡದಲ್ಲಿ  ಸುಮಾರು ಒಂದು ವಾರದವರೆಗೆ ಹಾರಾಟ ನಡೆಸಿತ್ತು. ಆನಂತರ ಅಮೆರಿಕ ಅಧ್ಯಕ್ಷ ಜೋಬೈಡೆನ್, ಅದನ್ನು  ಹೊಡೆದುರುಳಿಸುವಂತೆ ಅಮೆರಿಕ ಸೇನೆಗೆ ಆದೇಶ ನೀಡಿದ್ದರು.

share
Next Story
X