Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಬೆಂಗಳೂರು ಅಂತರ್‌ರಾಷ್ಟ್ರೀಯ ...

ಬೆಂಗಳೂರು ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವ ಎಂಬ ಪ್ರಹಸನ

ಮುರಳೀಧರ ಖಜಾನೆಮುರಳೀಧರ ಖಜಾನೆ15 Feb 2023 12:04 PM IST
share
ಬೆಂಗಳೂರು ಅಂತರ್‌ರಾಷ್ಟ್ರೀಯ  ಚಲನಚಿತ್ರೋತ್ಸವ ಎಂಬ ಪ್ರಹಸನ

ಅಂತರ್‌ರಾಷ್ಟ್ರೀಯ ಮನ್ನಣೆಯ ಪ್ರಮುಖ ಷರತ್ತುಗಳಲ್ಲಿ ನಿಗದಿತ ದಿನಾಂಕದಲ್ಲಿ ಚಿತ್ರೋತ್ಸವ ನಡೆಸುವುದೂ ಒಂದು. ಆದರೆ ಹಾಗಾಗುತ್ತಿಲ್ಲ. ಚಿತ್ರೋತ್ಸವ ನಡೆಸುವ ಹೊಣೆಹೊತ್ತಿರುವ ಅಕಾಡಮಿ ತನ್ನ ಸ್ವಾಯತ್ತತೆ ಜತೆ ರಾಜಿ ಮಾಡಿಕೊಂಡಿದೆ, ಎಲ್ಲಕ್ಕೂ ಸರಕಾರ ಮತ್ತು ಮುಖ್ಯಮಂತ್ರಿಯ ಮುಂದೆ ಕೈಚಾಚಿ ಕಾಯುತ್ತಿದೆ. ಆಯವ್ಯಯದಲ್ಲಿ ಚಿತ್ರೋತ್ಸವಕ್ಕೆಂದು ಹಣ ಮೀಸಲಿಟ್ಟಿದ್ದರೂ, ಅದರ ಬಿಡುಗಡೆಗೆ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳ ಕೃಪಾಕಟಾಕ್ಷಕ್ಕಾಗಿ ಕಾಯುವುದು ಹಾಗೂ ಉದ್ಘಾಟನೆ ಹಾಗೂ ಸಮಾರೋಪವನ್ನು ವಿಜೃಂಭಿಸಲು ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಡುವುದೂ ಸೇರಿದಂತೆ ಹತ್ತು-ಹಲವು ತಪ್ಪುಹಾದಿಗಳನ್ನು ಅವಲಂಬಿಸಿರುವುದು, ಬಿಫೆಸ್‌ನ ಇಂದಿನ ಸ್ಥಿತಿಗೆ ಕಾರಣ.

ಬಹುನಿರೀಕ್ಷೆಯ ಹದಿನಾಲ್ಕನೇ ಬೆಂಗಳೂರು ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (ಬಿಫೆಸ್) ‘ಅಂತೂ ಇಂತೂ’ ಕಾಲ ಕೂಡಿಬಂದಿದ್ದು, ಮಾರ್ಚ್ ೨೩ರಿಂದ ೩೦ರವರೆಗೆ ಕರ್ನಾಟಕ ಚಲನಚಿತ್ರ ಅಕಾಡಮಿ, ಕರ್ನಾಟಕ ಸರಕಾರದ ಸಹಕಾರದೊಂದಿಗೆ ನಡೆಸಲು ತೀರ್ಮಾನಿಸಿದೆ. ಸರಕಾರಿ ಅಧಿಕಾರಿಗಳ ಪ್ರಕಾರ ಬಿಫೆಸ್ ಉದ್ಘಾಟನೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆಯಲಿದೆ. ಈ ಚಿತ್ರೋತ್ಸವಕ್ಕಾಗಿ ಸರಕಾರ ನಾಲ್ಕೂವರೆ ಕೋಟಿ ರೂ. ಮೀಸಲಿಟ್ಟಿದೆ.

ಕಳೆದ ವರ್ಷ ಬಿಫೆಸ್ ಉದ್ಘಾಟನೆ ಸಂದರ್ಭದಲ್ಲಿ, ‘‘ಪ್ರತೀ ವರ್ಷ ಮಾರ್ಚ್ ತಿಂಗಳ ೩ರಂದು ಚಿತ್ರೋತ್ಸವಕ್ಕೆ ತೆರೆ ಏಳುತ್ತದೆ ಎಂದು ಬೊಮ್ಮಾಯಿ ವಾಗ್ದಾನ ಮಾಡಿದ್ದರು. (ಏಕೆಂದರೆ ಕನ್ನಡದ ಪ್ರಥಮ ವಾಕ್ಚಿತ್ರ ‘ಸತಿ ಸುಲೋಚನ ೧೯೩೪ರಲ್ಲಿ ಬಿಡುಗಡೆಯಾದದ್ದು ಮಾರ್ಚ್ ೩ರಂದು. ಆ ದಿನವನ್ನು ‘ವಿಶ್ವ ಕನ್ನಡ ಚಲನಚಿತ್ರ ದಿನ’ವೆಂದು ಘೋಷಣೆ ಮಾಡಲಾಗಿದೆ.) ಆದರೆ ಚುನಾವಣೆ, ಬಜೆಟ್, ಪ್ರಧಾನಿ, ಗೃಹ ಸಚಿವರ ‘ಸತತ’ ರಾಜ್ಯ ಭೇಟಿಯ ದೃಷ್ಟಿಯಿಂದ ಬೊಮ್ಮಾಯಿ ಮಾತು ಉಳಿಸಿಕೊಳ್ಳಲಾಗಿಲ್ಲ ಎನ್ನಿಸುತ್ತದೆ.

ಕೋವಿಡ್ ಕಾರಣದಿಂದ ೨೦೨೧ರಲ್ಲಿ ಬೆಂಗಳೂರು ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿಲ್ಲ. ಮೂರನೇ ಕೋವಿಡ್ ಅಲೆಯಿಂದಾಗಿ ೨೦೨೨ರಲ್ಲೂ ಬಿಫೆಸ್ ನಡೆಯುವುದು ಅನುಮಾನಾಸ್ಪದವಾಗಿತ್ತು. ಆದರೆ ಕರ್ನಾಟಕ ಚಲನಚಿತ್ರ ಅಕಾಡಮಿಯ ‘ತೀವ್ರ ಕಾಳಜಿ’ಯಿಂದಾಗಿ ಕೊನೆಗೂ ಕೋವಿಡ್ ನಿಯಮಪಾಲನೆಯ ಷರತ್ತಿನೊಂದಿಗೆ ಚಲನಚಿತ್ರೋತ್ಸವ ನಡೆಯಿತು ಎಂದಷ್ಟೇ ಹೇಳಬಹುದು.

ಬೆಂಗಳೂರು ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವ ಅಂತರ್‌ರಾಷ್ಟ್ರೀಯ ಮನ್ನಣೆ ಪಡೆದನಂತರ ನಡೆಯುತ್ತಿರುವ ಎರಡನೇ ಚಿತ್ರೋತ್ಸವ ಇದು. ಈ ಮನ್ನಣೆ ಪಡೆಯಲು ಬಿಫೆಸ್ ದಶಕದ ಪ್ರಯತ್ನ ನಡೆಸಬೇಕಾಯಿತು. ಹಲವು ವರ್ಷಗಳ ಪ್ರಯತ್ನದ ನಂತರ ಚಲನಚಿತ್ರ ನಿರ್ಮಾಪಕರ ಸಂಘಗಳ ಅಂತರ್‌ರಾಷ್ಟ್ರೀಯ ಒಕ್ಕೂಟ ಈ ಮನ್ನಣೆ ನೀಡಿದೆ. ವಿಶ್ವದಾದ್ಯಂತ ನಡೆಯುವ ೫,೦೦೦ಕ್ಕೂ ಹೆಚ್ಚು ಚಿತ್ರೋತ್ಸವಗಳ ಪೈಕಿ ಈ ಮಾನ್ಯತೆ ಪಡೆದ ೪೬ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಈಗ ಬಿಫೆಸ್ ಕೂಡ ಒಂದು. ಅಷ್ಟೇ ಅಲ್ಲ. ದೇಶದಲ್ಲಿ ನಡೆಯುವ ಐದು ಮಾನ್ಯತೆ ಪಡೆದ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಈಗ ಬಿಫೆಸ್‌ಗೆ ಕೂಡ ಅಗ್ರ ಸ್ಥಾನ. ವಿಶ್ವದ ಒಂದೊಂದು ಚಿತ್ರೋತ್ಸವಕ್ಕೂ ಒಂದೊಂದು ಪ್ರದೇಶದ ಚಿತ್ರಗಳನ್ನು ಮೀಸಲಿಡಲಾಗುತ್ತದೆ. ಈ ಪ್ರಕಾರದಲ್ಲಿ ಬಿಫೆಸ್ ಅನ್ನು ಏಶ್ಯ ದೇಶಗಳ ಚಿತ್ರಗಳ ವಿಶೇಷ ಅವೃತ್ತಿ ಎಂದು ಗುರುತಿಸಲಾಗಿದೆ.

ವಿಶ್ವದ ನೂರಾರು ದೇಶಗಳ ೨೦೦ಕ್ಕೂ ಹೆಚ್ಚು ಚಿತ್ರಗಳು ಓರಾಯನ್ ಮಾಲ್‌ನಲ್ಲಿರುವ ೧೧ ಪರದೆಗಳಲ್ಲಿ ಪ್ರದರ್ಶನಗೊಳ್ಳಲಿವೆ. ಪ್ರತೀಬಾರಿಯಂತೆ ಈ ಬಾರಿಯೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಚಲನಚಿತ್ರ ನಿರ್ಮಾಪಕರ ಸಂಘ, ಕಲಾವಿದರ ಸಂಘಗಳೂ ಸೇರಿದಂತೆ ಚಿತ್ರರಂಗದ ಎಲ್ಲ ಸಂಘಟನೆಗಳೂ ಕೈಜೋಡಿಸಿವೆ. ಬಿಫೆಸ್‌ನ ೧೩ನೇ ಆವೃತ್ತಿ ಯಶಸ್ವಿಗೊಳಿಸಲೆಂದು ಚಿತ್ರರಂಗದ ಎಲ್ಲ ವಿಭಾಗಗಳ ಪ್ರಾತಿನಿಧ್ಯವಿರುವ ಸಮಿತಿಯೊಂದು ರಚನೆಯಾಗಿದೆ ಎಂದು ಸಂಘಟನಾ ಸಮಿತಿ ಹೇಳಿಕೊಂಡಿದೆ. ‘‘ಸರಕಾರ ಹಣ ಬಿಡುಗಡೆ ಮಾಡಿದ ನಂತರ ಚಿತ್ರೋತ್ಸವದ ಕೆಲಸಗಳು ಆರಂಭವಾಲಿವೆ’’ ಎಂದು ಕರ್ನಾಟಕ ಚಲನಚಿತ್ರ ಅಕಾಡಮಿಯ ಅಧ್ಯಕ್ಷ ಅಶೋಕ್ ಕಶ್ಯಪ್ ಹೇಳಿದ್ದು ಜನವರಿ ೨೬ರಂದು. ಅಂದರೆ ಅದುವರೆಗೆ ಚಿತ್ರೋತ್ಸವಕ್ಕೆ ಸಂಬಂಧಿಸಿದ ಯಾವುದೇ ಕೆಲಸ ವಿಧ್ಯುಕ್ತವಾಗಿ ಆರಂಭವಾಗಿರಲಿಲ್ಲ ಎಂದೇ ಅರ್ಥ. ‘‘ಚಿತ್ರೋತ್ಸವಕ್ಕೆ ಸಂಬಂಧಿಸಿದ ಯಾವುದೇ ಕೆಲಸ ಇನ್ನೂ ಆರಂಭವಾಗಿಲ್ಲ’’ ಎಂದು ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ನರಹರಿರಾವ್ ಆಗಲೇ ಒಪ್ಪಿಕೊಂಡಿದ್ದರು. ಈಗ ಚಿತ್ರೋತ್ಸವ ಸಮಯದೊಂದಿಗೆ ಸ್ಪರ್ಧೆಗೆ ಇಳಿದಿದೆ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದು. ಹೀಗಾದಾಗ ಚಿತ್ರೋತ್ಸವದ ಗುಣಮಟ್ಟದ ಬಗ್ಗೆ ಅನುಮಾನ ಹುಟ್ಟುವುದಂತೂ ಖಚಿತ. ಈ ಕುರಿತು ಕೇಳುವ ಯಾವ ಪ್ರಶ್ನೆಗೂ, ಚಿತ್ರೋತ್ಸವದ ಸಂಘಟನಾ ಸಮಿತಿಯ ಅಧ್ಯಕ್ಷ ಹಾಗೂ ಕಂದಾಯ ಸಚಿವ ಆರ್. ಅಶೋಕ್ ಅವರಿಂದ ಉತ್ತರ ದೊರಕುವುದಿಲ್ಲ. ‘‘ಕಲಾತ್ಮಕ ನಿರ್ದೇಶಕರು ಹಾಗೂ ಅವರ ತಂಡದ ಶಕ್ತಿಯ ಬಗ್ಗೆ ನನಗೆ ನಂಬಿಕೆಯಿದೆ’’ ಎಂದಷ್ಟೆ ಹೇಳಿ ಕಶ್ಯಪ್ ಕೈ ತೊಳೆದುಕೊಂಡಿದ್ದಾರೆ.

೧೯೮೦ರಲ್ಲಿ ಬೆಂಗಳೂರಿನಲ್ಲಿ ಮೊದಲ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಿತು. ಆನಂತರ ಮತ್ತೊಂದು ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲು ೧೨ ವರ್ಷ ಹಿಡಿಯಿತು. ಬೆಂಗಳೂರಿನಲ್ಲಿ ಪ್ರತಿವರ್ಷ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವ ನಡೆಸುವ ಹೊಣೆ ಹೊತ್ತದ್ದು ಈಗ ೫೦ ವರ್ಷ ಪುರಾತನವಾದ ಸುಚಿತ್ರ ಚಿತ್ರ ಸಮಾಜ. ೨೦೦೬ರಲ್ಲಿ ನಡೆದ ಮೊದಲ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕರ್ನಾಟಕ ಸರಕಾರ ಕೂಡ ಆರ್ಥಿಕ ನೆರವು ನೀಡಿತು. ಸಿನೆಮಾ, ವಿಶ್ವ ಸಿನೆಮಾದ ಪರಿಚಯ, ವ್ಯಾಪ್ತಿ ಗೊತ್ತಿದ್ದ ಸುಚಿತ್ರ ಫಿಲಂ ಸೊಸೈಟಿಯ ಎಚ್. ಎನ್ ನರಹರಿರಾವ್ ಹಾಗೂ ಎನ್. ವಿದ್ಯಾಶಂಕರ ಜಗತ್ತಿನ ಸಿನೆಮಾ ತಯಾರಿಸುವ ನೂರಾರು ದೇಶಗಳೊಂದಿಗೆ ಸಂವಹನ ನಡೆಸಿ ಅಲ್ಲಿನ ಗಟ್ಟಿ ಕಾಳುಗಳಂಥ ಚಿತ್ರಗಳನ್ನು ಆಯ್ಕೆ ಮಾಡಿ ಸಿನೆಮಾ ಪ್ರೀತಿಸುವ, ಅಧ್ಯಯನ ಮಾಡಬಯಸುವವರ, ಅಸಕ್ತರ ನೆರವಿಗೆ ನಿಂತರು.

ಹೀಗೆ ಬೆಂಗಳೂರಿನಲ್ಲಿ ನೆಲೆ ನಿಂತ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವ ೨೦೦೯ರಲ್ಲಿ ಕರ್ನಾಟಕ ಚಲನಚಿತ್ರ ಅಕಾಡಮಿ ಸ್ಥಾಪನೆಯಾದ ನಂತರ ನಿಜ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವದ ಸ್ಥಾನಮಾನ ಪಡೆಯಿತು. ಅಕಾಡಮಿಯ ಮೊದಲ ಅಧ್ಯಕ್ಷರಾದ ಟಿ. ಎಸ್. ನಾಗಾಭರಣ ತಮ್ಮ ದಶಕಗಳ ಸಿನೆಮಾ ಅನುಭವ ಧಾರೆಯೆರೆದು ವಿಶ್ವ ಮಟ್ಟಕ್ಕೆ ತೆಗೆದುಕೊಂಡು ಹೋದರು. ಅಷ್ಟೇ ಅಲ್ಲದೆ ಅಕಾಡಮಿಗೆ ನಿಜವಾದ ಅಕಾಡಮಿಕ್ ಸ್ಥಾನ-ಘನತೆ ತಂದುಕೊಟ್ಟರು. ಸಿನೆಮಾ ಆಸಕ್ತರು ಪ್ರತೀವರ್ಷ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವಕ್ಕಾಗಿ ಕಾಯುವಂತೆ ಮಾಡಿದರು. ಆನಂತರ ಅಕಾಡಮಿಯ ಅಧ್ಯಕ್ಷ ಸ್ಥಾನದಲ್ಲಿ ಕುಳಿತ ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ತಾರಾ ಅನುರಾಧ ಹಾಗೂ ನಾಗತಿಹಳ್ಳಿ ಚಂದ್ರಶೇಖರ್, ಇದ್ದ ವ್ಯವಸ್ಥೆಯನ್ನು ಕೆಡಿಸದೆ ಚಲನಚಿತ್ರೋತ್ಸವವನ್ನು ಸಂಘಟಿಸುವಲ್ಲಿ ಯಶಸ್ವಿಯಾದರು. ಹಾಗೆಂದು ಅದುವರೆಗೆ ನಡೆದ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವಗಳು ಸುವ್ಯವಸ್ಥಿತವಾಗಿ ನಡೆದವೆಂದು ಅರ್ಥವಲ್ಲ. ಅವುಗಳಲ್ಲೂ ಸಣ್ಣಪುಟ್ಟ ತೊಡಕುಗಳಿದ್ದವು. ಆದರೆ, ಅವು ಮಕ್ಕಳಿಗೆ ‘ಹಾಲು ಹಲ್ಲು’ ಬರುವ ಸಂದರ್ಭದ ನೋವಿನಂಥದ್ದು. ಇದಕ್ಕೆಲ್ಲ ಸರಕಾರವನ್ನು ಅವಲಂಬಿಸಿದ್ದು ಹಾಗೂ ಸಿನೆಮಾ ಗೊತ್ತಿಲ್ಲದ, ಅದರ ಗಂಧ-ಗಾಳಿ ಇಲ್ಲದ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ನಿರ್ಣಾಯಕರಾಗಿದ್ದು. ಈ ಎಲ್ಲ ತೊಂದರೆಗಳ ನಡುವೆಯೂ ಚಿತ್ರೋತ್ಸವ ತನ್ನ ಗುಣಮಟ್ಟದ ಜೊತೆ ರಾಜಿ ಮಾಡಿಕೊಳ್ಳಲಿಲ್ಲ. ಇದಕ್ಕೆ ಕಲಾತ್ಮಕ ನಿರ್ದೇಶಕರಾಗಿ ದುಡಿದ ಎನ್. ವಿದ್ಯಾಶಂಕರ್ ಅವರು ಕಲಿಸಿದ ಹುಡುಗರ ತಂಡ.

ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವಗಳು ಸುವ್ಯವಸ್ಥಿತವಾಗಿ ನಡೆಯಬೇಕೆಂದರೆ ಅದಕ್ಕಾಗಿ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವದ ನಿರ್ದೇಶನಾಲಯವೊಂದು ವರ್ಷವಿಡೀ ಕಾರ್ಯಶೀಲವಾಗಿರಬೇಕು. ಜಗತ್ತಿನಾದ್ಯಂತ ನಡೆಯುವ ನೂರಾರು ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಳ್ಳುವ ಗುಣಾತ್ಮಕ ಚಿತ್ರಗಳ ಮೇಲೆ ಕಣ್ಣಿಟ್ಟು ಅವುಗಳನ್ನು ನಿರ್ಮಿಸಿದ ನಿರ್ದೇಶಕ-ನಿರ್ಮಾಪಕರನ್ನು ಸಂಪರ್ಕಿಸಿ ಸಂಬಂಧಿತ ಚಿತ್ರವನ್ನು ಪ್ರದರ್ಶಿಸಲು ಅನುಮತಿ ಪಡೆಯುವ ಪ್ರಯತ್ನ ಮಾಡಬೇಕು. ಇದರ ಜೊತೆಜೊತೆಗೆ ಭಾರತದ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಳ್ಳುವ ಸಿನೆಮಾಗಳು ಹಾಗೂ ಪನೋರಮ ವಿಭಾಗಗಳಲ್ಲಿ ತೋರಿಸುವ ಚಿತ್ರಗಳನ್ನು ಗಮನಿಸಿ ಆಯ್ಕೆ ಮಾಡಿಟ್ಟುಕೊಳ್ಳಬೇಕು. ಹಾಗೆಯೇ ಚಿತ್ರೋತ್ಸವದಲ್ಲಿ ಸ್ಪರ್ಧಾ ವಿಭಾಗಗಳಲ್ಲಿ ಭಾಗವಹಿಸುವ ಚಿತ್ರಗಳ ಆಯ್ಕೆ ಮಾಡುವ ತೀರ್ಪುಗಾರರನ್ನು (ಜ್ಯೂರಿಗಳು) ನಿಷ್ಕರ್ಷೆ ಮಾಡಬೇಕು. ಅಲ್ಲದೆ, ಚಿತ್ರೋತ್ಸವದ ಪುನರವಲೋಕನ ವಿಭಾಗ, ಮಾಸ್ಟರ್ ಕ್ಲಾಸ್‌ಗಳಲ್ಲಿ ಬಿಂಬಿಸಬಹುದಾದ ಚಿತ್ರ ಜಗತ್ತಿನ ಆಗು-ಹೋಗುಗಳ ವಿಷಯಗಳನ್ನು ಅಧ್ಯಯನ ಮಾಡಿ ತೀರ್ಮಾನಿಸಿಡಬೇಕು. ಇವೆಲ್ಲವೂ ಶಿಸ್ತುಬದ್ಧವಾಗಿ-ಕ್ರಮಬದ್ಧವಾಗಿ ನಡೆಯಬೇಕೆಂದರೆ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವದ ನಿರ್ದೇಶನಾಲಯವೊಂದು ವರ್ಷವಿಡೀ ಕಾರ್ಯಶೀಲವಾಗಿರಬೇಕು. ಈ ಶಿಸ್ತುಬದ್ಧ ಕ್ರಮ ಬಿಫೆಸ್‌ನಲ್ಲಿ ಇರಬೇಕೆಂದು ಹತ್ತು ವರ್ಷಗಳಿಂದ ಒತ್ತಾಯಿಸಿದ್ದರೂ ಯಾವುದೇ ಪರಿಣಾಮವಾಗಿಲ್ಲ.

ದಶಕದ ಇತಿಹಾಸವಿರುವ ಬೆಂಗಳೂರು ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (ಬಿಫೆಸ್) ದಕ್ಕಿದ ಅಂತರ್‌ರಾಷ್ಟ್ರೀಯ ಮನ್ನಣೆಯ ಘನತೆಯನ್ನು ಎತ್ತಿ ಹಿಡಿಯುವ ದೊಡ್ಡ ಹೊಣೆಗಾರಿಕೆ ಕರ್ನಾಟಕ ಸರಕಾರ ಹಾಗೂ ಕರ್ನಾಟಕ ಚಲನಚಿತ್ರ ಅಕಾಡಮಿಯ ಮೇಲಿದೆ. ಆದರೆ ಕಳೆದೆರಡು ಬಿಫೆಸ್ ಆವೃತ್ತಿಗಳು ನಡೆದ ರೀತಿಯನ್ನು ಗಮನಿಸಿದರೆ, ಕರ್ನಾಟಕ ಸರಕಾರ ಹಾಗೂ ಕರ್ನಾಟಕ ಚಲನಚಿತ್ರ ಅಕಾಡಮಿ ಎರಡೂ ತಮ್ಮ ಹೊಣೆಗಾರಿಕೆಯನ್ನು ಮರೆತಂತೆ ಕಾಣುತ್ತಿದೆ.

ಇಂತಹ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವದ ನಿಜವಾದ ಲಾಭ ಪಡೆದುಕೊಳ್ಳಬೇಕಾದದ್ದು ಕನ್ನಡ ಚಿತ್ರರಂಗ. ಆದರೆ ನಿಜ ಅರ್ಥದಲ್ಲಿ ಚಿತ್ರರಂಗ ಬಿಫೆಸ್ ನಲ್ಲಿ ಪಾಲ್ಗೊಂಡೇ ಇಲ್ಲ ಎನ್ನುವುದು ವಿಷಾದದ ಸಂಗತಿ.     

ಬಿಫೆಸ್ ಸಂಘಟಿಸುವಲ್ಲಿ ಇತ್ತೀಚಿನ ವರ್ಷಗಳಲ್ಲಿ ಒಂದು ರೀತಿಯ ಅವ್ಯವಸ್ಥೆ ಕಾಣಿಸುತ್ತಿದೆ. ಈ ವಿದ್ಯಮಾನಕ್ಕೆ ಕಾರಣ; ಬಿಫೆಸ್ ಕೇವಲ ಒಂದು ಪ್ರತಿಷ್ಠೆಯ ಉತ್ಸವವೇ ಹೊರತು, ಸಿನೆಮಾ ಸಂಸ್ಕೃತಿಯನ್ನು ಕಾಪಾಡುವುದಂತೂ ಅಲ್ಲ ಎಂಬುದು ಸರಕಾರ ಮತ್ತು ಅಕಾಡೆಮಿ ನಡೆದುಕೊಳ್ಳುತ್ತಿರುವ ರೀತಿಯಿಂದಲೇ ಮನವರಿಕೆಯಾಗುತ್ತದೆ.

ಚಿತ್ರೋತ್ಸವದ ಸಿದ್ಧತೆ ಕನಿಷ್ಠ ಜುಲೈನಲ್ಲಿ ಆರಂಭವಾಗಬೇಕು. ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರತೀವರ್ಷ ನಿಗದಿತ ದಿನಾಂಕದಲ್ಲಿ ನಡೆದು, ಜಗತ್ತಿನಾದ್ಯಂತ ಇದೇ ದಿನಾಂಕದಲ್ಲಿ ನಡೆಯುತ್ತದೆ ಎಂಬ ಸ್ಪಷ್ಟತೆ ಇದೆ. ಇದು ಬಿಫೆಸ್‌ಗೂ ಇರಬೇಕು. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ದಿನಾಂಕಗಳು ಏರುಪೇರಾಗುತ್ತಿದೆ. ಅಂತರ್‌ರಾಷ್ಟ್ರೀಯ ಮನ್ನಣೆಯ ಪ್ರಮುಖ ಷರತ್ತುಗಳಲ್ಲಿ ನಿಗದಿತ ದಿನಾಂಕದಲ್ಲಿ ಚಿತ್ರೋತ್ಸವ ನಡೆಸುವುದೂ ಒಂದು. ಆದರೆ ಹಾಗಾಗುತ್ತಿಲ್ಲ. ಚಿತ್ರೋತ್ಸವ ನಡೆಸುವ ಹೊಣೆಹೊತ್ತಿರುವ ಅಕಾಡಮಿ ತನ್ನ ಸ್ವಾಯತ್ತತೆ ಜತೆ ರಾಜಿ ಮಾಡಿಕೊಂಡಿದೆ, ಎಲ್ಲಕ್ಕೂ ಸರಕಾರ ಮತ್ತು ಮುಖ್ಯಮಂತ್ರಿಯ ಮುಂದೆ ಕೈಚಾಚಿ ಕಾಯುತ್ತಿದೆ. ಆಯವ್ಯಯದಲ್ಲಿ ಚಿತ್ರೋತ್ಸವಕ್ಕೆಂದು ಹಣ ಮೀಸಲಿಟ್ಟಿದ್ದರೂ, ಅದರ ಬಿಡುಗಡೆಗೆ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳ ಕೃಪಾಕಟಾಕ್ಷಕ್ಕಾಗಿ ಕಾಯುವುದು ಹಾಗೂ ಉದ್ಘಾಟನೆ ಹಾಗೂ ಸಮಾರೋಪವನ್ನು ವಿಜೃಂಭಿಸಲು ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಡುವುದೂ ಸೇರಿದಂತೆ ಹತ್ತು-ಹಲವು ತಪ್ಪುಹಾದಿಗಳನ್ನು ಅವಲಂಬಿಸಿರುವುದು, ಬಿಫೆಸ್‌ನ ಇಂದಿನ ಸ್ಥಿತಿಗೆ ಕಾರಣ.

ಈ ಲೇಖನ ಬರೆಯುತ್ತಿರುವ ವೇಳೆಯವರೆಗೂ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುವ ಚಿತ್ರಗಳು, ವಿಶ್ವ ಸಿನೆಮಾ ಪುನರಾವಲೋಕನ ಚಿತ್ರಗಳ ಬಗ್ಗೆ ಯಾವುದೇ ಮಾಹಿತಿಯನ್ನು ಚಿತ್ರೋತ್ಸವ ಸಂಘಟಕರು ಬಹಿರಂಗಪಡಿಸಿಲ್ಲ.

ಒಟ್ಟಿನಲ್ಲಿ ಬಹು ನಿರೀಕ್ಷಿತ ಚಿತ್ರೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಉಳಿದಿರುವುದು ಇನ್ನು ಕೇವಲ ಒಂದು ತಿಂಗಳು ಮಾತ್ರ. ೧೪ನೇ ಅವೃತ್ತಿ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವದ ಗುಣಮಟ್ಟ, ಘನತೆ ಕಾಪಾಡಿಕೊಂಡರೆ, ಅದು ಕನ್ನಡಿಗರ, ಕನ್ನಡದ ಅಸ್ಮಿತೆಗೆ ದಕ್ಕುವ ಗೌರವ.

share
ಮುರಳೀಧರ ಖಜಾನೆ
ಮುರಳೀಧರ ಖಜಾನೆ
Next Story
X