ಅದಾನಿ ಗ್ರೂಪ್ ವಿರುದ್ಧ ತನಿಖೆಗೆ ಒತ್ತಾಯಿಸಿ ಆರ್ ಬಿಐ, ಸೆಬಿಗೆ ಪತ್ರ ಬರೆದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್

ಹೊಸದಿಲ್ಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿ ದಾಸ್ ಹಾಗೂ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿಐ) ಅಧ್ಯಕ್ಷ ಮಾಧಾಬಿ ಪುರಿ ಬುಚ್ ಅವರಿಗೆ ಎರಡು ಪ್ರತ್ಯೇಕ ಪತ್ರ ಬರೆದಿರುವ ಹಿರಿಯ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ (Jairam Ramesh ) ಹಿಂಡನ್ ಬರ್ಗ್ ರಿಸರ್ಚ್, ಅದಾನಿ ಗ್ರೂಪ್ ವಿರುದ್ಧದ ಮಾಡಿರುವ ಗಂಭೀರ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಅತ್ಯಂತ ದೊಡ್ಡ ಸಮೂಹವಾಗಿರುವ ಅದಾನಿ ಗ್ರೂಪ್ ವಿರುದ್ಧ "ನ್ಯಾಯಯುತ ಹಾಗೂ ಪರಿಪೂರ್ಣ, ನಿಷ್ಪಕ್ಷಪಾತ ತನಿಖೆ ನಡೆಸಬೇಕು'' ಎಂದು ಸೆಬಿ ಮುಖ್ಯಸ್ಥರಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.
"ಇದರಲ್ಲಿ ಆಗುವ ಯಾವುದೇ ವೈಫಲ್ಯವು ಭಾರತೀಯ ಕಾರ್ಪೊರೇಟ್ ಆಡಳಿತ ಹಾಗೂ ಭಾರತದ ಹಣಕಾಸು ನಿಯಂತ್ರಕರ ಮೇಲೆ ಹಾಗೂ ಜಾಗತಿಕವಾಗಿ ಹಣವನ್ನು ಸಂಗ್ರಹಿಸುವ ನಮ್ಮ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು" ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಅದಾನಿ ಗುಂಪಿನ ವಿರುದ್ಧದ ಹಲವಾರು ಆರೋಪಗಳ ಮೇಲೆ ಪೂರ್ಣ ಪ್ರಮಾಣದ ಸ್ವತಂತ್ರ ತನಿಖೆಯನ್ನು ನಡೆಸಬೇಕು ಎಂದು ರಮೇಶ್ ಪುನರುಚ್ಚರಿಸಿದರು.