ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನಕ್ಕೇರಿದ ಭಾರತ ಕ್ರಿಕೆಟ್ ತಂಡ
ಎಲ್ಲ 3 ಪ್ರಕಾರದ ಪಂದ್ಯಗಳಲ್ಲಿ ನಂ.1 ಸ್ಥಾನ ಅಲಂಕರಿಸಿದ ರೋಹಿತ್ ಬಳಗ

ಎಲ್ಲ 3 ಪ್ರಕಾರದ ಪಂದ್ಯಗಳಲ್ಲಿ ನಂ.1 ಸ್ಥಾನ ಅಲಂಕರಿಸಿದ ರೋಹಿತ್ ಬಳಗ
ಹೊಸದಿಲ್ಲಿ: ನಾಗ್ಪುರದಲ್ಲಿ ಆಸ್ಟ್ರೇಲಿಯ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿರುವ ಭಾರತ ಹೊಸ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.
ಆಸ್ಟ್ರೇಲಿಯ ವಿರುದ್ದ ಭರ್ಜರಿ ಜಯ ಸಾಧಿಸಿರುವ ರೋಹಿತ್ ಶರ್ಮಾ ಬಳಗ ಪ್ರಸ್ತುತ 115 ಅಂಕಗಳನ್ನು ಹೊಂದಿದೆ. ಎರಡನೇ ಸ್ಥಾನದಲ್ಲಿರುವ ಆಸೀಸ್‌ಗಿಂತ 4 ಅಂಕ ಮುಂದಿದೆ.
ಮೂರನೇ ಸ್ಥಾನದಲ್ಲಿರುವ ಇಂಗ್ಲೆಂಡ್ ಪ್ರಸ್ತುತ 106 ಅಂಕಗಳನ್ನು ಹೊಂದಿದೆ. ಆದರೆ ಫೆಬ್ರವರಿ 16 ರಿಂದ ಆರಂಭವಾಗುವ ಟೆಸ್ಟ್ ಸರಣಿಯಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಆಡುವ ಮೂಲಕ ತಮ್ಮ ಸ್ಥಾನವನ್ನು ಸುಧಾರಿಸಲು ಅದಕ್ಕೆ ಅವಕಾಶವಿದೆ.
ನಂ.1 ಟೆಸ್ಟ್ ತಂಡ ಎನಿಸಿಕೊಳ್ಳುವ ಮೂಲಕ ಭಾರತ ಕ್ರಿಕೆಟ್ ತಂಡವು ಇದೀಗ ಕ್ರೀಡೆಯ ಎಲ್ಲಾ ಮೂರು ಸ್ವರೂಪಗಳ ಕ್ರಿಕೆಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದೆ.
Next Story