ಮಂಗಳೂರು: ಮಾರ್ಚ್ 5ರಂದು ಉದ್ಯೋಗ ಮೇಳ, ಬ್ಯಾರಿ ಪ್ರತಿಭಾ ಪ್ರದರ್ಶನ ಮೇಳ
ಮಂಗಳೂರು, ಫೆ. 14: ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ ಇದರ ವತಿಯಿಂದ ಮಾರ್ಚ್ 3ರಿಂದ 5ರವರೆಗೆ ಮೂರು ದಿನಗಳ ಕಾಲ ಬಹಳ ಸಡಗರದ ಬ್ಯಾರಿ ಮೇಳ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ.
ಮಾರ್ಚ್ 3ರಂದು 4:30ಕ್ಕೆ ಇದರ ಉದ್ಘಾಟನಾ ಸಮಾರಂಭ ನೆರವೇರಲಿದೆ ಮತ್ತು ಕೊನೆಯ ದಿನವಾಗಿರುವ ಭಾನುವಾರದಂದು ಅಪರಾಹ್ನ 2:00 ರಿಂದ ಬ್ಯಾರಿ ಸಮುದಾಯದಲ್ಲಿರುವ ವಿವಿಧ ಕಲಾವಿದ ಪ್ರತಿಭೆಗಳಿಗೆ 'ಬೋಲ್ ಬ್ಯಾರಿ ಬೋಲ್' ಎಂಬ ಹೆಸರಿನಲ್ಲಿ ತಮ್ಮ ಪ್ರತಿಭಾ ಪ್ರದರ್ಶನ ನೀಡುವ ಅವಕಾಶವನ್ನು ಒದಗಿಸಿದ್ದು ಇದರ ನೋಂದಾವಣೆ ಈಗಾಗಲೇ ಆರಂಭಗೊಂಡಿದೆ. ಅದೇ ದಿನದಂದು ಬೆಳಗ್ಗೆ 10ರಿಂದ ಉದ್ಯೋಗ ಮೇಳ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದರಲ್ಲಿಯೂ ಉದ್ಯೋಗಾಂಕ್ಷಿಗಳಿಗಾಗಿ ದೇಶ- ವಿದೇಶಗಳಲ್ಲಿನ ವಿವಿಧ ವಾಣಿಜ್ಯ ಸಂಸ್ಥೆಗಳಲ್ಲಿ ಅರ್ಹತೆಯ ಆಧಾರದಲ್ಲಿ ಅಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಇದರಲ್ಲಿಯೂ ಆಸಕ್ತ ಅಭ್ಯರ್ಥಿಗಳು ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ ಇದರ ಕಛೇರಿಯ ದೂರವಾಣಿ 0824-4262323 ಅಥವಾ ಮೊಬೈಲ್ 9535563897 ಗೆ ಕರೆ ಮಾಡಿ ಅಥವಾ ಉದ್ಯೋಗಾಕಾಂಕ್ಷಿಗಳು ತಮ್ಮ ಹೆಸರನ್ನು ಬಿ.ಸಿ.ಸಿ.ಐ. ಕಚೇರಿಯನ್ನು ಸಂಪರ್ಕಿಸಿ, ಅಲ್ಲಿ ನೀಡುವ ಫಾರ್ಮ್ ಭರ್ತಿ ಮಾಡಿ ನೀಡುವಂತೆ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ ಪತ್ರಿಕಾ ಪ್ರಕಟನೆ ತಿಳಿಸಿದೆ.