ಫೆ.18ರಂದು ಶಬೇ ಮಿಹ್ರಾಜ್, ಸುನ್ನಿ ಸಮ್ಮೇಳನ: ಪ್ರಚಾರ ಜಾಥಾಕ್ಕೆ ಉಳ್ಳಾಲ ದರ್ಗಾದಲ್ಲಿ ಚಾಲನೆ

ಉಳ್ಳಾಲ: ದಕ್ಷಿಣ ಭಾರತದ ಅತ್ಯುನ್ನತ ವಿದ್ಯಾ ಕೇಂದ್ರ ಜಾಮಿಅ ದಾರುಸ್ಸಲಾಂ ನಂದಿ ಇದರ 47ನೇ ವಾರ್ಷಿಕ ಹಾಗೂ 15ನೇ ಸನದು ದಾನ ಮಹಾಸಮ್ಮೇಳವು ಫೆ. 24,25,26ರಂದು ʼಶಾಂತಿಯು ಧರ್ಮವಾಗಿದೆ ಸಂಘರ್ಷವು ಅಧರ್ಮವಾಗಿದೆʼ ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯಲಿದೆ.
ಇದರ ಪ್ರಚಾರಾರ್ಥ ಮಾಣಿ ಜನಪ್ರಿಯ ಮೈದಾನದಲ್ಲಿ ಫೆಬ್ರವರಿ 18ರಂದು ನಡೆಯಲಿರುವ ವಿಶೇಷ ಶಬೆ ಮಿಹ್ರಾಜ್ ಮಜ್ಲಿಸ್ ಹಾಗೂ ಬೃಹತ್ ಸುನ್ನೀ ಸಮಾವೇಶದ ಪ್ರಯುಕ್ತ ಉಳ್ಳಾಲ ತಾಲೂಕು ದಾರಿಮೀಸ್ ವತಿಯಿಂದ ನಡೆದ ವಾಹನ ಪ್ರಚಾರ ಜಾಥಾಕ್ಕೆ ಉಳ್ಳಾಲ ಸಯ್ಯಿದ್ ಮದನಿ ತಂಙಳ್ ದರ್ಗಾ ವಠಾರದಲ್ಲಿ ಜಾಥಾ ಕ್ಯಾಪ್ಟನ್ ತಬೂಕ್ ದಾರಿಮಿ ಉಸ್ತಾದರಿಗೆ ದರ್ಗಾ ಅಧ್ಯಕ್ಷ ರಶೀದ್ ಹಾಜಿ ದ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿಲಾಯಿತು.
ಉಳ್ಳಾಲ ತಾಲೂಕುಗಳ ಪ್ರಮುಖ ಕೇಂದ್ರಗಳಾದ ಕೆಸಿ ರೋಡ್ ಕಿನ್ಯ, ಮಂಜನಾಡಿ, ಮುಡಿಪು, ಪಜೀರ್, ಗ್ರಾಮಚಾವಡಿ, ಮಳಾರ್, ಮದಕ, ಕುತ್ತಾರ್, ದೇರಳಕಟ್ಟೆ ಮುಂತಾದ ಹಲವು ಕಡೆಗಳಲ್ಲಿ ಪ್ರಚಾರ ನಡೆಸಿ ಮಂಗಳ ನಗರ ಶಂಸುಲ್ ಉಲಮಾ ಮೆಮೋರಿಯಲ್ ದಾರುಸ್ಸಲಾಂ ಅಕಾಡೆಮಿ ಸಭಾಂಗಣದಲ್ಲಿ ಸಮಾರೋಪ ಸಮಾರಂಭ ನಡೆಯಿತು.
ಈ ಸಂದರ್ಭದಲ್ಲಿ ದರ್ಗಾ ಸಮಿತಿ ಕಾರ್ಯದರ್ಶಿ ನೌಷಾದ್ ಹಾಜಿ, ಮುಸ್ತಫ ಅಬ್ದುಲ್ಲ, ಫಾರೂಕ್ ಉಳ್ಳಾಲ, ಇಬ್ರಾಹಿಂ ಕೊಣಾಜೆ, ಹನೀಪ್ ದಾರಿಮಿ ಹೈದರ್ ದಾರಿಮಿ, ಫಾರೂಕ್ ದಾರಿಮಿ ಗ್ರಾಮಚಾವಡಿ, ಲತೀಫ್ ದಾರಿಮಿ ರೆಂಜಲಾಡಿ, ಮಜೀದ್ ದಾರಿಮಿ ಕಿನ್ಯ ಮುಂತಾದ ಹಲವಾರು ಉಲಮಾ ಉಮರಾ ನೇತಾರರು ಭಾಗವಹಿಸಿದ್ದರು. ದರ್ಗಾ ಝಿಯಾರತ್ತಿಗೆ ಖತೀಬ್ ಅನ್ವರ್ ಅಲಿ ದಾರಿಮಿ ನೇತೃತ್ವ ವಹಿಸಿದ್ದರು.