VIDEO- ಟಿಪ್ಪುವನ್ನು ಪ್ರೀತಿಸುವ ಜನರು ಇಲ್ಲಿ ಉಳಿಯಬಾರದು, ಭಾರತ ರಾಮ ಭಕ್ತರಿಗೆ ಮಾತ್ರ: ನಳಿನ್ ಕುಮಾರ್ ಕಟೀಲ್

ಬೆಂಗಳೂರು: ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಸದಾ ಸುದ್ದಿಯಲ್ಲಿರುವ ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇದೀಗ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. 'ಟಿಪ್ಪುವನ್ನು ಪ್ರೀತಿಸುವ ಜನರು ಇಲ್ಲಿ ಈ ಮಣ್ಣಿನಲ್ಲಿ ಉಳಿಯಬಾರದು, ಭಗವಾನ್ ರಾಮನ ಭಜನೆಗಳನ್ನು ಹಾಡುವ ಮತ್ತು ಭಗವಾನ್ ಹನುಮಂತನನ್ನು ಆಚರಿಸುವ ಜನರು ಮಾತ್ರ ಇಲ್ಲಿ ವಾಸಿಸಬೇಕು' ಎಂದು ಹೇಳಿದ್ದಾರೆ.
ಮಂಗಳವಾರ ಕೊಪ್ಪಳ ಜಿಲ್ಲೆಯ ಯಲಬುರ್ಗದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ನಾವು ಶ್ರೀರಾಮ ಮತ್ತು ಹನುಮಾನ್ ಆರಾಧಕರು. ನಾವು ನಮ್ಮ ಧನ್ಯತೆ ಮತ್ತು ಪ್ರಾರ್ಥನೆಯನ್ನು ಹನುಮಂತನಿಗೆ ಸಲ್ಲಿಸುತ್ತೇವೆ. ನಾವು ಟಿಪ್ಪುವಿನ ವಂಶಸ್ಥರಲ್ಲ. ಟಿಪ್ಪು ವಂಶಸ್ಥರನ್ನು ಮನೆಗೆ ಕಳಿಸಬೇಕಾಗಿದೆ" ಎಂದು ಅವರು ಹೇಳಿದರು.
"ನೀವು ಹನುಮಾನ್ ಅಥವಾ ಟಿಪ್ಪುವಿಗೆ ಪ್ರಾರ್ಥನೆ ಸಲ್ಲಿಸುತ್ತೀರಾ? ಎಂದು ನಾನು ಇಲ್ಲಿನ ಜನರನ್ನು ಕೇಳುತ್ತೇನೆ. ಹಾಗಾದರೆ ನೀವು ಟಿಪ್ಪುವಿನ ಕಟ್ಟಾ ಅನುಯಾಯಿಗಳನ್ನು ಕಾಡಿಗೆ ಕಳುಹಿಸುತ್ತೀರಾ? ಯೋಚಿಸಿ. ಈ ರಾಜ್ಯಕ್ಕೆ ಭಗವಾನ್ ಹನುಮಾನ್ ಭಕ್ತರ ಅಗತ್ಯವಿದೆಯೇ? ಅಥವಾ ಟಿಪ್ಪುವಿನ ವಂಶಸ್ಥರ ಅಗತ್ಯವಿದೆಯೇ? ಟಿಪ್ಪುವಿನ ಕಟ್ಟಾ ಅನುಯಾಯಿಗಳಾಗಿರುವವರು ಈ ಫಲವತ್ತಾದ ಮಣ್ಣಿನಲ್ಲಿ ಉಳಿಯಬಾರದು ಎಂದು ನಾನು ಸವಾಲು ಹಾಕುತ್ತೇನೆ" ಎಂದು ನಳಿನ್ ಕುಮಾರ್ ಹೇಳಿದರು.
#Karnataka BJP state president @nalinkateel makes controversial statement saying those who do bhajans of #TippuSultan should be chased away. Those who worship #Hanuman should chase away Tippu lovers to forest #Karnataka #KarnatakaElections2023 pic.twitter.com/HkPMJplYRY
— Imran Khan (@KeypadGuerilla) February 15, 2023







