ಪ್ರತ್ಯೇಕ ಪ್ರಕರಣ: ಇಬ್ಬರು ಆತ್ಮಹತ್ಯೆ

ಶಿರ್ವ: ವಿಪರೀತವಾಗಿ ಕುಡಿತದ ಚಟ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ಪೆರ್ಣಂಕಿಲ ನಿವಾಸಿ ಪ್ರಕಾಶ್ ಬಂಗೇರ (57) ಎಂಬವರು ಮಾನಸಿಕವಾಗಿ ನೊಂದು ಫೆ.14ರಂದು ಶಿರ್ವ ಗ್ರಾಮದ ಕೋಡು ಕಂಚಿಕಂಡ ಎಂಬಲ್ಲಿರುವ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲ್ಪೆ: ಜಾಂಡಿಸ್ ಖಾಯಿಲೆಯಿಂದ ಬಳಲುತ್ತಿದ್ದ ಕಡೆಕಾರ್ ನಿವಾಸಿ ಮುರಳಿ(54) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಫೆ.14ರಂದು ಮಧ್ಯಾಹ್ನ ಮನೆ ಸಮೀಪದ ಕಡೆಕಾರು ಗ್ರಾಮ ಪಂಚಾಯತ್‌ಗೆ ಸೇರಿದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story