ಕಾನ್ಪುರ: ಮಹಿಳೆ, ಪುತ್ರಿ ಜೀವಂತ ದಹನ ಪ್ರಕರಣ; ನ್ಯಾಯಾಂಗ ತನಿಖೆಗೆ ಆದೇಶ

ಕಾನ್ಪುರ, ಫೆ. 15: ಕಾನ್ಪುರದಲ್ಲಿ ತಮ್ಮ ಮನೆಯನ್ನು ತೆರವುಗೊಳಿಸುವುದನ್ನು ವಿರೋಧಿಸಿದ ಸಂದರ್ಭ ಮಹಿಳೆ ಹಾಗೂ ಆಕೆಯ ಪುತ್ರಿ ಜೀವಂತ ದಹನವಾದ ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ಆದೇಶಿಸಲಾಗಿದೆ. ಕಾನ್ಪುರ ದೆಹಾತ್ (ಗ್ರಾಮೀಣ) ಜಿಲ್ಲಾ ದಂಡಾಧಿಕಾರಿ ನೇಹಾ ಜೈನ್ ಅವರು ತನಿಖೆಗೆ ಆದೇಶ ನೀಡಿದ್ದಾರೆ.
ಗ್ರಾಮೀಣ ಕಾನ್ಪುರದ ಮಂಡೋಲಿ ಗ್ರಾಮದಲ್ಲಿ ಫೆಬ್ರವರಿ 13ರಂದು ದಂಡಾಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸುತ್ತಿರುವ ಸಂದರ್ಭ ಪ್ರಮೀಳಾ ಹಾಗೂ ಅವರ ಪುತ್ರಿ ನೇಹಾ ದೀಕ್ಷಿತ್ ಜೀವಂತ ದಹನವಾಗಿದ್ದರು.
Next Story