ಹೊಸೂರಿನಲ್ಲಿ 'ಭೀಮ' ಹೊಸ ಮಳಿಗೆ ಉದ್ಘಾಟನೆ

ಬೆಂಗಳೂರು: ಚಿನ್ನ ಮಾರಾಟದ ರಿಟೇಲ್ ವಲಯದಲ್ಲಿ ಅತ್ಯಂತ ವಿಶ್ವಾಸಾರ್ಹ ಬ್ಯಾಂಡ್‌ಗಳಲ್ಲಿ ಒಂದೆನಿಸಿದ ಭೀಮ ಜ್ಯುವೆಲ್ಲರ್ ಫೆಬ್ರವರಿ 10ರಂದು (ಬುಧವಾರ) ಹೊಸೂರಿನಲ್ಲಿ ತನ್ನ ಹೊಸ ಮಳಿಗೆಯನ್ನು ಉದ್ಘಾಟಿಸಿದೆ.
ಹೊಸೂರಿನಲ್ಲಿರುವ ಅದ್ದೂರಿ ಮಳಿಗೆಯು ತಮಿಳುನಾಡಿನ ಭೀಮದ ಎರಡನೇ ಶಾಖೆಯಾಗಿದೆ. ಕಾಲಕ್ರಮೇಣ ನಮ್ಮ ಈ ಬ್ಯಾಂಡ್ ಶುದ್ಧತೆ ಮತ್ತು ನಂಬಿಕೆಗೆ ಸಮಾನಾರ್ಥಕವಾಗಿ ಬೆಳೆದುಬಂದಿದೆ. ಶತಮಾನೋತ್ಸವದ ಸಡಗರದ ಸನಿಹದಲ್ಲಿರುವ ಭೀಮ, ಪರಂಪರೆ ಮತ್ತು ಪ್ರತಿಯೊಂದು ವಿನ್ಯಾಸದಲ್ಲೂ ಹೊಸತನವನ್ನು ಕಾಯ್ದುಕೊಂಡು ಬಂದಿದೆ. ಅತ್ಯಂತ ಬೇಡಿಕೆಯ ಆಭರಣ ಮಳಿಗೆಯಲ್ಲಿ ಒಂದಾಗಿ ಗುರುತಿಸಿಕೊಂಡಿದೆ.
ಹೊಸೂರಿನ ಮಳಿಗೆಯನ್ನು ಭೀಮ್ ಜ್ಯುವೆಲ್ಲರ್ ನಿರ್ದೇಶಕರಾದ ಶ್ರೀಮತಿ ಸಾವಿತ್ರಿ ಕೃಷ್ಣನ್ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವಿಷ್ಣುಶರಣ್ ಕೆ. ಭಟ್ ಉದ್ಘಾಟಿಸಿದರು. ಈ ಹೊಸ ಮಳಿಗೆಯು ಭೀಮ ಹೊಂದಿರುವ ಆಭರಣ ಸಂಗ್ರಹಗಳ ಸಂಪೂರ್ಣ ಶ್ರೇಣಿಯನ್ನು ಪ್ರದರ್ಶಿಸುತ್ತದೆ. ಸರಗಳು, ಬಳೆಗಳು, ವಿವಾಹದ ಆಭರಣಗಳು, ಡಿಸೈನರ್ ಉಡುಗೆಗಳು, ವಜ್ರ ಮತ್ತು ಬೆಳ್ಳಿ ಆಭರಣಗಳಲ್ಲಿ ಸಮಕಾಲೀನ ಮತ್ತು ಸಾಂಪ್ರದಾಯಿಕ ಬಗೆಬಗೆಯ ವಿನ್ಯಾಸಗಳನ್ನು ಗ್ರಾಹಕರು ಇಲ್ಲಿ ನೋಡಬಹುದಾಗಿದೆ. ವ್ಯಾಪಕ ಶ್ರೇಣಿಯ ಸಂಗ್ರಹ ಮತ್ತು ಅದ್ದೂರಿ ವಾತಾವರಣದೊಂದಿಗೆ, ಹೊಸ ಮಳಿಗೆಯು ಗ್ರಾಹಕರಿಗೆ ವಿಶಿಷ್ಟ ಶಾಪಿಂಗ್ ಅನುಭವವನ್ನು ನೀಡುತ್ತದೆ.
ಭೀಮ ಭಟ್ಟರ್ ಅವರ ಸಮರ್ಪಣೆ ಮತ್ತು ಕಠಿಣ ಪರಿಶ್ರಮದಿಂದ 1925ರಲ್ಲಿ ಭೀಮ ತನ್ನ ವಹಿವಾಟು ಪ್ರಯಾಣ ಪ್ರಾರಂಭಿಸಿತು. ಕೇರಳದಲ್ಲಿ ಸಣ್ಣ ಪ್ರಮಾಣದಲ್ಲಿ ಶುರುವಾದ ಭೀಮ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಮಳಿಗೆಗಳನ್ನು ತೆರೆದು ವಹಿವಾಟು ವಿಸ್ತರಣೆ ಮೂಲಕ ಈಗ ದಕ್ಷಿಣ ಭಾರತದಾದ್ಯಂತ ಪ್ರಸಿದ್ಧಿಯಾಗಿದೆ.
ಹೊಸೂರಿನ ಭೀಮ ಮಳಿಗೆಯು ನಯನಮನೋಹರ ಶಾಪಿಂಗ್ ವಾತಾವರಣದ ಜೊತೆಗೆ ವಿವಿಧ ವಿನ್ಯಾಸಗಳಲ್ಲಿ ಪರಿಶುದ್ಧತೆ ಮತ್ತು ಕರಕುಶಲತೆಯ ಭರವಸೆಯೊಂದಿಗೆ ಗ್ರಾಹಕರನ್ನು ಸ್ವಾಗತಿಸಲು ಸಿದ್ಧವಾಗಿದೆ.
“ನಮ್ಮ ಗ್ರಾಹಕರಿಗೆ ಅತ್ಯುತ್ತಮ ಸೇವೆ ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಉದ್ಘಾಟನೆಯ ಸಂದರ್ಭದಲ್ಲಿ ಹೊಸೂರು ನಿವಾಸಿಗಳು ಆಗಮಿಸುವ ಮೂಲಕ ನಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸಿದರು. ಹೊಸೂರಿನ ಜನತೆ ನಮಗೆ ತೋರಿದ ಆತ್ಮೀಯ ಸ್ವಾಗತ ಹಾಗೂ ಅವರು ತೋರಲಿರುವ ನಿರಂತರ ಪ್ರೀತಿ ಮತ್ತು ಬೆಂಬಲಕ್ಕೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ,” ಎಂದು ವಿಷ್ಣುಶರಣ್ ಕೆ. ಭಟ್ ಹೇಳಿದರು.








