ಗೋಡ್ಸೆ ಸಂತತಿಯ ಸಾಂಕ್ರಾಮಿಕಕ್ಕೆ ತುತ್ತಾಗಿದ್ದೀರಿ: ಅಶ್ವತ್ಥನಾರಾಯಣ ವಿರುದ್ದ ಪ್ರಕಾಶ್ ರಾಥೋಡ್ ವಾಗ್ವಾಳಿ

ಬೆಂಗಳೂರು, ಫೆ. 16: 'ಸನಾತನ ಕೊಲೆಗಡುಕರ ಗುಲಾಮರಾಗಿರುವ ಡಾ.ಅಶ್ವತ್ಥನಾರಾಯಣ ಅವರೇ ನಿಮ್ಮ ನಾಲಗೆ ಬೊಗಳಿದ್ದನ್ನು ನೀವೇ ಮಾಡಲು ಮುಂದಾಗಿ ನೋಡಿ. ನಾಡಿನ ಜನತೆ ನಿಮ್ಮ ನಾಲಗೆ ಸೀಳಿ ನಾಯಿಗಳಿಗೆ ಹಾಕದಿದ್ದರೆ ಕೇಳಿ' ಎಂದು ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, 'ನಾಚಿಕೆ ಆಗಬೇಕು ನಿಮ್ಮ ಜನ್ಮಕ್ಕೆ-ನಿಮ್ಮನ್ನು ಸಾಕಿಕೊಂಡಿರುವ ಸನಾತನಿ ಭಯೋತ್ಪಾದಕ ಸಂಘಿ ಪರಿವಾರಕ್ಕೆ, ಗೋಡ್ಸೆ ಸಂತತಿಯ ಸಾಂಕ್ರಾಮಿಕಕ್ಕೆ ತುತ್ತಾಗಿದ್ದೀರಿ' ಎಂದು ಟೀಕಿಸಿದ್ದಾರೆ.
'ಕೊಲೆಗಡುಕ ಮನಸ್ಥಿತಿಯ ಡಾ. ಅಶ್ವತ್ಥನಾರಾಯಣ , ಸಿದ್ದರಾಮಯ್ಯ ಅವರನ್ನು ಕೊಲ್ಲಲು ಕಂಡವರ ತಾಯಿಯ ಮಕ್ಕಳನ್ನು ಪ್ರಚೋದಿಸಿದ್ದೀರಿ. ನಿಮಗೇನು ನರರೋಗ ಬಂದಿದೆಯಾ? ನಿಮ್ಮ ಸರಕಾರಕ್ಕೆ ಬಂದಿರುವ ನರರೋಗ ನಿಮಗೆ, ನಿಮ್ಮ ಮಕ್ಕಳಿಗೂ ಬಂದಿದೆಯಾ? ನಿಮ್ಮ ಮೆದುಳು-ಹೃದಯ ಸತ್ತೋಗಿ ನಾಲಗೆ ಮಾತ್ರ ಜೀವಂತ ಇದೆಯಾ? ಆರಗ ಜ್ಞಾನೇಂದ್ರ ಅವರೇ ಬದುಕಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ಸಚಿವ ಅಶ್ವತ್ಥನಾರಾಯಣ ಅವರೇ ನಿಮ್ಮೊಳಗೂ ಕೊಲೆಗಡುಗ ಸಿದ್ಧಾಂತದ ಸನಾತನ DNA ಇದೆ ಎಂದು ಸಾಬೀತುಪಡಿಸಿದ್ದೀರಿ. ನಿಮ್ಮ ತೊಡೆಯಲ್ಲಿ ತಾಕತ್ತಿದ್ದರೆ ನೀವೇ ಆ ಕೆಲಸಕ್ಕೆ ಮುಂದಾಗಿ ನೋಡೋಣ. ಕಂಡವರ ಮಕ್ಕಳನ್ನು ಕೊಲೆಗೆ ಪ್ರಚೋದಿಸಿದ್ದೀರಿ. ನಿಮ್ಮ ಮಕ್ಕಳಿಗೇ ಈ ಕೊಲೆಗಡುಕ ಸಿದ್ಧಾಂತ ಹೇಳಿಕೊಟ್ಟು ಪ್ರಚೋದಿಸಬಹುದಲ್ಲವೇ ? ಎಂದು ಪ್ರಕಾಶ್ ರಾಠೋಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ; ನನ್ನ ಹತ್ಯೆಗೆ ಬಹಿರಂಗವಾಗಿ ಕರೆ ನೀಡಿದ ಸಚಿವ ಅಶ್ವತ್ಥನಾರಾಯಣ ವಿರುದ್ಧ ಕ್ರಮ ಏಕಿಲ್ಲ?: ಸಿದ್ದರಾಮಯ್ಯ
ಸನಾತನ ಕೊಲೆಗಡುಕರ ಗುಲಾಮರಾಗಿರುವ @drashwathcn ನಿಮ್ಮ ನಾಲಗೆ ಬೊಗಳಿದ್ದನ್ನು ನೀವೇ ಮಾಡಲು ಮುಂದಾಗಿ ನೋಡಿ. ನಾಡಿನ ಜನತೆ ನಿಮ್ಮ ನಾಲಗೆ ಸೀಳಿ ನಾಯಿಗಳಿಗೆ ಹಾಕದಿದ್ದರೆ ಕೇಳಿ. ನಾಚಿಕೆ ಆಗಬೇಕು ನಿಮ್ಮ ಜನ್ಮಕ್ಕೆ-ನಿಮ್ಮನ್ನು ಸಾಕಿಕೊಂಡಿರುವ ಸನಾತನಿ ಭಯೋತ್ಪಾದಕ ಸಂಘಿ ಪರಿವಾರಕ್ಕೆ. ಗೋಡ್ಸೆ ಸಂತತಿಯ ಸಾಂಕ್ರಾಮಿಕಕ್ಕೆ ತುತ್ತಾಗಿದ್ದೀರಿ 3/3 pic.twitter.com/Pis7kx3lqn
— Prakash Rathod (@PRathod_INC) February 16, 2023
ಕೊಲೆಗಡುಕ ಮನಸ್ಥಿತಿಯ @drashwathcn ಮಾನ್ಯ ಸಿದ್ದರಾಮಯ್ಯ ಅವರನ್ನು ಕೊಲ್ಲಲು ಕಂಡವರ ತಾಯಿಯ ಮಕ್ಕಳನ್ನು ಪ್ರಚೋದಿಸಿದ್ದೀರಿ. ನಿಮಗೇನು ನರರೋಗ ಬಂದಿದೆಯಾ? ನಿಮ್ಮ ಸರ್ಕಾರಕ್ಕೆ ಬಂದಿರುವ ನರರೋಗ ನಿಮಗೆ, ನಿಮ್ಮ ಮಕ್ಕಳಿಗೂ ಬಂದಿದೆಯಾ? ನಿಮ್ಮ ಮೆದುಳು-ಹೃದಯ ಸತ್ತೋಗಿ ನಾಲಗೆ ಮಾತ್ರ ಜೀವಂತ ಇದೆಯಾ? @JnanendraAraga ಬದುಕಿದ್ದೀರಾ? 2/3 pic.twitter.com/JT3wZarIIs
— Prakash Rathod (@PRathod_INC) February 16, 2023