ಮುಂಡಗೋಡ: ಮನೆಗೆ ಆಕಸ್ಮಿಕ ಬೆಂಕಿ

ಮುಂಡಗೋಡ: ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗಲಿ ಅಪಾರ ನಷ್ಟವಾದ ಘಟನೆ ಪಟ್ಟಣದ ಹೊಸ ಓಣಿಯಲ್ಲಿ ಗುರುವಾರ ಸಂಭವಿಸಿದೆ.
ಹೊಸ ಓಣಿಯ ರಾಜು ಹಿರೇಮಠ ಎಂಬವರಿಗೆ ಸೇರಿದ ಚಾಳಿನ ಮನೆಯೊಂದರಲ್ಲಿ ವಾಣಿ ಬಾಳಂಬೀಡ ಕುಟುಂಬ ವಾಸವಾಗಿದ್ದು. ಬೆಳಗ್ಗೆ ಮನೆಯವರು ಬೀಗ ಹಾಕಿ ಕೆಲಸ ಕಾರ್ಯಗಳಿಗೆ ಹೋದಾಗ ಬೆಂಕಿ ತಗಲಿ ಮನೆಯಲ್ಲಿದ್ದ ವಸ್ತುಗಳು ಬೆಂಕಿಗಾಹುತಿಯಾಗಿದೆ. ಅಕ್ಕಪಕ್ಕದವರು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಆಗ್ನಿಶಾಮಕ ದಳ ಕಾರ್ಯಚರಣೆಯಿಂದ ಬೆಂಕಿ ನಂದಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದರು.
Next Story





