ರಾಷ್ಟ್ರ ಮಟ್ಟದ ಶಾಟ್‌ಪುಟ್ ಸ್ಪರ್ಧೆ: ಉಡುಪಿಯ ಅನುರಾಗ್‌ಗೆ ಚಿನ್ನ

ಉಡುಪಿ: ಬಿಹಾರದ ಪಾಟ್ನಾದಲ್ಲಿ ಫೆ.12ರವರೆಗೆ ನಡೆದ ರಾಷ್ಟ್ರೀಯ ಅಂತರ ಜಿಲ್ಲಾ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನ ಶಾಟ್‌ಪುಟ್ ಸ್ಪರ್ಧೆಯಲ್ಲಿ ಉಡುಪಿಯ ಅನುರಾಗ ಜಿ. ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಶಾಟ್‌ಪುಟ್ ಸ್ಪರ್ಧೆಯ ೧೬ ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಗುಂಡನ್ನು 15.31ಮೀ. ದೂರ ಎಸೆದು ಪ್ರಥಮ ಸ್ಥಾನಿಯಾದ ಅನುರಾಗ್ ಜಿ. ಅಲೆವೂರಿನ ಕೇಂದ್ರೀಯ ವಿದ್ಯಾಲಯದ 9ನೇ ತರಗತಿಯ ವಿದ್ಯಾರ್ಥಿ.
ಇವರು ಕಾರ್ಕಳದಲ್ಲಿ ಬಿಎಸ್‌ಎನ್‌ಎಲ್ ಉದ್ಯೋಗಿ ಗುರುರಾಜ ಮತ್ತು ಉಡುಪಿ ಜಿಲ್ಲಾ ಅಸ್ಪತ್ರೆಯ ನರ್ಸಿಂಗ್ ಅಧಿಕಾರಿ ರಮಣಿ ದಂಪತಿಗಳ ಪುತ್ರ. ಅನುರಾಗ್ ಅಂತಾರಾಷ್ಟ್ರೀಯ ಕ್ರೀಡಾಪಟು ಶಾಲಿನಿರಾಜೇಶ್ ಶೆಟ್ಟಿ ಇವರಿಂದ ತರಬೇತಿ ಪಡೆಯುತ್ತಿದ್ದಾರೆ.
Next Story





