ದ.ಕ. ಜಿಲ್ಲೆಯ 2 ವಿಧಾನ ಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಗೌಡ ಸಮುದಾಯದ ಅಭ್ಯರ್ಥಿಗಳಿಗೆ ಅವಕಾಶ ನೀಡಲು ಅಗ್ರಹ

ಮಂಗಳೂರು: ಮುಂಬರುವ ೨೦೨೩ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಒಕ್ಕಲಿಗ ಗೌಡ ಸಮುದಾಯಕ್ಕೆ ಎರಡು ಸ್ಥಾನ ನೀಡಬೇಕು. ಕನಿಷ್ಟ ಪಕ್ಷ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಗೌಡ ಜನಾಂಗಕ್ಕೆ ಅವಕಾಶ ನೀಡಲೇಬೇಕು ಎಂದು ದ.ಕ ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘದ ಅಧ್ಯಕ್ಷ ಲೋಕಯ್ಯ ಗೌಡ ಕೆ ಸುದ್ದಿಗೋಷ್ಠಿಯಲ್ಲಿಂದು ಅಗ್ರಹಿಸಿದರು.
ಯಾವುದೇ ಪಕ್ಷದಲ್ಲೂ ಗೌಡ ಸಮುದಾಯದ ಅಭ್ಯರ್ಥಿಗೆ ಅವಕಾಶ ನೀಡಿದರೆ ಅವರನ್ನು ಗೌಡ ಸಮುದಾಯ ಬೆಂಬಲಿಸುತ್ತದೆ. ಆದುದರಿಂದ ಗೌಡ ಸಮುದಾಯದ ಅಭ್ಯರ್ಥಿಗಳಿಗೆ ಈ ಬಾರಿ ಅವಕಾಶ ನೀಡಬೇಕು. ಏಕೆಂದರೆ ಜಿಲ್ಲೆಯಲ್ಲಿ ಗೌಡರ ಸಂಖ್ಯೆ ಅಧಿಕವಾಗಿದೆ. ರಾಜಕೀಯ ಪ್ರಾತಿನಿಧ್ಯದ ವಿಚಾರದಲ್ಲಿ ಗೌಡ ಸಮುದಾಯದವರನ್ನು ಇತ್ತೀಚಿಗೆ ತೀರಾ ಕಡೆಗಣಿಸಲಾಗಿದೆ ಎಂದು ಲೋಕಯ್ಯ ಗೌಡ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ದ.ಕ ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘದ ಉಪಾಧ್ಯಕ್ಷ ಸದಾನಂದ ಗೌಡ, ದ.ಕ ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘದ ಸದಸ್ಯರಾದ ಪದ್ಮನಾಭ ಗೌಡ ದೇವಸ್ಯ, ಸದಸ್ಯ ರಾದ ಕೆ ರಾಮಣ್ಣ ಗೌಡ ಹಾಗೂ ಗುರುದೇವ್ ಉಪಸ್ಥಿತರಿದ್ದರು.