ರಾಜಕಾರಣಿ ಫಹದ್ ಅಹ್ಮದ್‌ರನ್ನು ವಿವಾಹವಾದ ನಟಿ, ಸಾಮಾಜಿಕ ಕಾರ್ಯಕರ್ತೆ ಸ್ವರಾ ಭಾಸ್ಕರ್

ಹೊಸದಿಲ್ಲಿ: ನಟಿ, ಹೋರಾಟಗಾರ್ತಿ ಸ್ವರಾ ಭಾಸ್ಕರ್ ಅವರು ತಮ್ಮ ವಿವಾಹದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ರಾಜಕೀಯ ಕಾರ್ಯಕರ್ತ ಮತ್ತು ಸಮಾಜವಾದಿ ಮುಖಂಡ ಫಹದ್ ಅಹ್ಮದ್ ರೊಂದಿಗೆ ತಮ್ಮ ವಿವಾಹ ನಡೆದಿದೆ ಎಂದು ಘೋಷಿಸಿದ್ದಾರೆ.
ವಿಶೇಷ ವಿವಾಹ ಕಾಯಿದೆಯಡಿ ಜನವರಿ 6, 2023 ರಂದು ತಮ್ಮ ವಿವಾಹವನ್ನು ನ್ಯಾಯಾಲಯದಲ್ಲಿ ನೋಂದಾಯಿಸಿರುವುದಾಗಿ ಸ್ವರಾ ಭಾಸ್ಕರ್ ತಿಳಿಸಿದ್ದಾರೆ.
ಪ್ರತಿಭಟನೆಯೊಂದರಲ್ಲಿ ತಮ್ಮ ಮೊದಲ ಭೇಟಿಯಾಗಿದೆ ಎಂದು ತಿಳಿಸಿದ ಅವರು, “ಕೆಲವೊಮ್ಮೆ ನಿಮ್ಮ ಪಕ್ಕದಲ್ಲೇ ಇರುವುದನ್ನು, ನೀವು ದೂರದಲ್ಲೆಲ್ಲೋ ವ್ಯಾಪಕವಾಗಿ ಹುಡುಕುತ್ತೀರಿ. ನಾವು ಪ್ರೀತಿಯನ್ನು ಹುಡುಕುತ್ತಿದ್ದೆವು, ಆದರೆ ನಾವು ಮೊದಲು ಸ್ನೇಹವನ್ನು ಕಂಡುಕೊಂಡೆವು. ನಂತರ ನಾವು ಒಬ್ಬರನ್ನೊಬ್ಬರು ಕಂಡುಕೊಂಡೆವು” ಎಂದು ಸ್ವರಾ ಭಾಸ್ಕರ್ ಟ್ವೀಟ್ ಮಾಡಿದ್ದಾರೆ.
ತನ್ನ ಹೃದಯಕ್ಕೆ ಫಹದ್ ರನ್ನು ಸ್ವಾಗತಿಸಿದ ಸ್ವರಾ, “ನನ್ನ ಹೃದಯಕ್ಕೆ ಸ್ವಾಗತ ಫಹದ್, ಇದು (ಹೃದಯ) ಗೊಂದಲಮಯ, ಆದರೂ ಅದು ನಿನ್ನದೇ!” ಎಂದು ಟ್ವೀಟ್ ಮಾಡಿದ್ದಾರೆ.
ಸ್ವರಾ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಫಹದ್, “ಗೊಂದಲಮಯ ತುಂಬಾ ಸುಂದರವಾಗಿರುತ್ತದೆ ಎಂದು ನನಗೆ ತಿಳಿದಿರಲಿಲ್ಲ. ನನ್ನ ಪ್ರೀತಿಯ ಕೈ ಹಿಡಿದಿದ್ದಕ್ಕಾಗಿ ಧನ್ಯವಾದಗಳು ಸ್ವರಾ” ಎಂದು ಟ್ವೀಟ್ ಮಾಡಿದ್ದಾರೆ.
ತಮ್ಮ ಟ್ವೀಟ್‌ನೊಂದಿಗೆ ಸ್ವರಾ ಒಂದು ವಿಡಿಯೋ ತುಣುಕನ್ನೂ ಹಂಚಿಕೊಂಡಿದ್ದು, ತಮ್ಮಿಬ್ಬರ ಭೇಟಿ, ಗೆಳೆತನ, ಪ್ರೀತಿ, ಹಾಗೂ ಮದುವೆಯ ಕೆಲವು ಚಿತ್ರಗಳು ಅದರಲ್ಲಿದೆ.
I never knew chaos can be so beautiful
— Fahad Ahmad (@FahadZirarAhmad) February 16, 2023
Thank you for holding my hand love @ReallySwara