ಮಾರುತಿ ಟ್ರೋಫಿ ಕ್ರಿಕೆಟ್ ಪಂದ್ಯಾಟದ ಉದ್ಘಾಟನೆ

ಮಂಗಳೂರು: ಉಳ್ಳಾಲ ಮಾರುತಿ ಯುವಕ ಮಂಡಲ(ರಿ) ಉಳ್ಳಾಲ ಮತ್ತು ಮಾರುತಿ ಕ್ರಿಕೆಟರ್ಸ್ (ರಿ) ಉಳ್ಳಾಲ ಇವುಗಳ ಆಶ್ರಯದಲ್ಲಿ ರಾಷ್ಟ್ರ ಮಟ್ಟದ ಹಾಗೂ ಮೊಗವೀರ ಪ್ರೀಮಿಯರ್ ಲೀಗ್ ಮಾರುತಿ ಟ್ರೋಫಿ -೨೦೨೩ ಕ್ರಿಕೆಟ್ ಟೂರ್ನಮೆಂಟ್ ಏಕಕಾಲದಲ್ಲಿ ಮಂಗಳೂರಿನ ನೆಹರೂ ಮೈದಾನದಲ್ಲಿ ಬುಧವಾರ ಸಂಜೆ ಉದ್ಘಾಟನೆಗೊಂಡಿತು.
೧೯ರ ತನಕ ನಡೆಯಲಿರುವ ಮೊಗವೀರ ಪ್ರೀಮಿಯರ್ ಲೀಗ್ ಪಂದ್ಯಾಟದ ಉದ್ಘಾಟನೆಯನ್ನು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕರ ನಾಡೋಜ ಡಾ.ಜಿ ಶಂಕರ್ ಉದ್ಘಾಟಿಸಿದರು. ಅಂತರ್‌ರಾಷ್ಟ್ರೀಯ ಪಂದ್ಯಾಟದ ವ್ಯವಸ್ಥೆಗೆ ಏನೂ ಕಡಿಮೆ ಇಲ್ಲದ ರೀತಿಯಲ್ಲಿ ತಯಾರಿ ನಡೆದಿದೆ ಎಂದು ಜಿ.ಶಂಕರ್ ಶ್ಲಾಘಿಸಿದರು.
ಮಂಗಳೂರು ಯಾಂತ್ರಿಕ ಮೀನುಗಾರ ಸಹಕಾರಿ ಸಂಘದ ಅಧ್ಯಕ್ಷ ಉಮೇಶ್ ಟಿ. ಕರ್ಕೇರ ಹಾಗೂ ಕಾಂಚನ ಹುಂಡೈ ಶೋರೂಂ ಮಾಲಕ ಪ್ರಸಾದ್ ರಾಜ್ ಕಾಂಚನ್ ಶುಭಹಾರೈಸಿದರು. ದ.ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ದ.ಕ ಮೊಗವೀರ ಸಂಯುಕ್ತ ಸಭೆ ಹಾಗೂ ವ್ಯವಸ್ಥಾಪಕ ಮಂಡಳಿ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ್, ಮಂಗಳೂರು ಟ್ರಾಲ್ ಬೋಟು ಸೊಸೈಟಿ ಅಧ್ಯಕ್ಷ ನಿತಿನ್ ಬೋಳಾರ್, ಟ್ರಾಲ್ ಬೋಟ್ ಯೂನಿಯನ್ ಅಧ್ಯಕ್ಷ ಚೇತನ್ ಬೆಂಗ್ರೆ, ಉದ್ಯಮಿಗಳಾದ ಮೋಹನ್ ಬೆಂಗರೆ, ಸಿಂಧೂರಾಂ, ವಿನಯ್ ಉಡುಪಿ, ವಿಜಯ ಬೆಂಗ್ರೆ, ಮನೋಜ್ ಸಾಲ್ಯಾನ್, ರಾಜೇಶ್ ಪುತ್ರನ್, ಸದಾನಂದ ಬಂಗೇರ, ಮತ್ತು ಸಂಸ್ಥೆಯ ಅಧ್ಯಕ್ಷ ವರದ್ ರಾಜ್ ಬಂಗೇರ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕ್ರೀಡಾ ಪಟುಗಳಾದ ವಿಶ್ವನಾಥ್ ಪುತ್ರನ್, ಸಂದೇಶ್ ತಿಂಗಳಾಯ, ದಿಯಾ , ದಿಶಾ ಮತ್ತು ಶಿಭಾ ಮತ್ತಿರರನ್ನು ಸನ್ಮಾನಿಸಲಾಯಿತು. ವಸಂತ್ ತಣ್ಣೀರುಬಾವಿ, ಸುಧೀರ್ ಅಮೀನ್, ಮಹೇಶ್ ಸಾಲ್ಯಾನ್, ಸಂದೀಪ್ ಪುತ್ರನ್ ಕಾರ್ಯಕ್ರಮ ನಿರ್ವಹಿಸಿದರು