ಮಂಗಳೂರು ವಿಮಾನ ನಿಲ್ದಾಣದಲ್ಲಿ 2ಡಿ ಬಾರ್‌ಕೋಡ್ ರೀಡರ್ ವ್ಯವಸ್ಥೆ

ಮಂಗಳೂರು: ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ (ಎಂಐಎ) ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಬಿಲ್ಡಿಂಗ್ (ಎನ್‌ಐಟಿಬಿ) ನ ಪ್ರವೇಶ ದ್ವಾರದಲ್ಲಿ ಪ್ರಯಾಣಿಕರಿಗೆ ಮುಕ್ತ ಪ್ರಯಾಣಕ್ಕಾಗಿ 2ಡಿ ಬಾರ್‌ಕೋಡ್ ರೀಡರ್‌ನ್ನು ಅಳವಡಿಸಲಾಗಿದೆ.
ಎಂಐಎ ಟರ್ಮಿನಲ್ ಪ್ರವೇಶ ಗೇಟ್‌ಗಳನ್ನು ನಿರ್ವಹಿಸುವ ಸಿಐಎಸ್‌ಎಫ್ ಅಧಿಕಾರಿಗಳು ವಿಮಾನ ಟಿಕೆಟ್‌ಗಳನ್ನು ಕೈಯಲ್ಲಿ ಪರಿಶೀಲಿಸುವ ಬದಲು ಬಾರ್‌ಕೋಡ್‌ಗಳನ್ನು ಸ್ಕ್ಯಾನ್ ಮಾಡುತ್ತಾರೆ. ಈ ವಿಧಾನನವು ಪ್ರವೇಶ ದ್ವಾರದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ತಡೆಯಲು ಸಹಕಾರಿಯಾಗಲಿದೆ.
2ಡಿ ಬಾರ್‌ಕೋಡ್ ಸ್ಕ್ಯಾನರ್ ಅಳವಡಿಕೆಯಿಂದಾಗಿ ನಕಲಿ ಅಥವಾ ರದ್ದಾದ ವಿಮಾನ ಟಿಕೆಟ್‌ಗಳನ್ನು ಬಳಸಿಕೊಂಡು ಪ್ರಯಾಣಿಕರು ಟರ್ಮಿನಲ್‌ಗಳನ್ನು ಪ್ರವೇಶಿಸುವುದಕ್ಕೆ ಕಡಿವಾಣ ಬೀಳಲಿದೆ ಎಂದು ಮೂಲಗಳು ತಿಳಿಸಿವೆ.
Next Story





