ಆಂಧ್ರಪ್ರದೇಶದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಹಾನಿ

ಹೈದರಾಬಾದ್, ಫೆ. 16: ಆಂಧ್ರಪ್ರದೇಶದ ನಂದ್ಯಾಲ್ ಜಿಲ್ಲೆಯ ಬೊಮ್ಮಲಸತ್ರಮ್ ಗ್ರಾಮದಲ್ಲಿ ಸೋಮವಾರ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್(Dr. B.R. Ambedkar) ರ ಪ್ರತಿಮೆಯ ಮೇಲೆ ದಾಳಿ ನಡೆಸಲಾಗಿದೆ. ಪ್ರತಿಮೆಯ ಬೆರಳುಗಳು ಮತ್ತು ಮೂಗಿಗೆ ಹಾನಿ ಮಾಡಲಾಗಿದೆ.
ಕೋಲ ಕಲ್ಯಾಣದ ಮಾದಿಗ ರಿಸರ್ವೇಶನ್ ಪೋರಾಟ ಸಮಿತಿ (MRPS)ಯ ನಾಯಕರೊಬ್ಬರು ನಂದ್ಯಾಲ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ದೂರೊಂದು ದಾಖಲಾಗಿದೆ ಎಂದು ಪೊಲೀಸರ ಪತ್ರಿಕಾ ಪ್ರಕಟನೆಯೊಂದು ತಿಳಿಸಿದೆ.
ಆದರೆ, ಯಾವ ವಿಧಿಗಳಡಿ ಮೊಕದ್ದಮೆ ದಾಖಲಿಸಲಾಗಿದೆ ಎನ್ನುವ ವಿವರಗಳನ್ನು ನೀಡಲು ಠಾಣೆಯ ಸಬ್ಇನ್ಸ್ಪೆಕ್ಟರ್ ನಿರಾಕರಿಸಿದರು ಎಂದು ಟಿಎನ್ಎಮ್ ವರದಿ ಮಾಡಿದೆ.
ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಲಾಗಿದ್ದು ಆರೋಪಿಯನ್ನು ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದರು. ಆರೋಪಿಯನ್ನು ಬಂಧಿಸಲು ತಂಡಗಳನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದರು.
Next Story





