ಫೆ.17ರಿಂದ ಪಣಿಯೂರು ಮಲಂಗೋಳಿ ಉರೂಸ್

ಕಾಪು: ಪಣಿಯೂರಿನ ಮಲಂಗೋಳಿ ಅರಫಾ ಮಸೀದಿಗೆ ಒಳಪಟ್ಟ ದರ್ಗಾದಲ್ಲಿ 25ನೇ ಉರೂಸ್ ಸಮಾರಂಭದ ಅಂಗವಾಗಿ ವಾರ್ಷಿಕ ಸ್ವಲಾತ್ ಹಾಗೂ ಸಾಮೂಹಿಕ ವಿವಾಹ ಸಮಾರಂಭ ಫೆ. 17 ಮತ್ತು 18ಕ್ಕೆ ನಡೆಯಲಿದೆ.
ಈ ಬಗ್ಗೆ ಗುರುವಾರ ಕಾಪು ಸುದ್ದಿಗೋಷ್ಠಿಯಲ್ಲಿ ಅಬ್ದುಲ್ ರಶೀದ್ ಸಖಾಫಿ ಮಾಹಿತಿ ನೀಡಿದರು.
ಈ ಮೊದಲು ಫೆಬ್ರವರಿ 18 ಮತ್ತು 19ರಂದು ಉರೂಸ್ ನಡೆಸಲು ತೀರ್ಮಾಣಿಸಲಾಗಿತ್ತು. ಆದರೆ ಮಿಹ್ರಾಜ್ ಕಾರಣದಿಂದ ದಿನಾಂಕವನ್ನು ಬದಲಾವಣೆ ಮಾಡಲಾಗಿದೆ.
17ರಂದು ಅಸರ್ ನಮಾಜಿನ ಬವಳಿಕ ಸಂದಲ್ ಮೆರವಣಿಗೆ, ಮಗ್ರಿಬ್ ನಮಾಝಿನ ಬಳಿಕ ಸ್ವಲಾತ್ ವಾರ್ಷಿಕ ಹಾಗೂ ಧಾರ್ಮಿಕ ಉಪನ್ಯಾಸ ನಡೆಯಲಿದೆ. ಸ್ವಲಾತ್ ನೇತೃತ್ವವನ್ನು ಕೆ.ಪಿ.ಸಯ್ಯದ್ ಆಬಿದೀನ್ ಜಮಾಲುಲೈಲು ಕಾಜೂರು ವಹಿಸಲಿದ್ದು. ಬೆಳಪು ಬದ್ರಿಯಾ ಜುಮಾ ಮಸೀದಿಯ ಖತೀಬ್ ಅಬ್ದುಲ್ ರಶೀದ್ ಸಖಾಫಿ ಉದ್ಘಾಟಿಸಲಿದ್ದಾರೆ. ಅತಾವುಲ್ಲಾ ಹಿಮಾಮಿ ಸಖಾಫಿ ಕುಪ್ಪೆಟ್ಟು ಮುಖ್ಯಪ್ರಭಾಷಣ ಮಾಡಲಿದ್ದಾರೆ.
18 ರಂದು ಸಾಮೂಹಿಕ ವಿವಾಹ ಹಾಗೂ ಮೌಲೂದ್ ಪಾರಾಯಣ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಕೆ.ಪಿ.ಸಯ್ಯದ್ ಆಬಿದೀನ್ ಜಮಾಲುಲೈಲು ಕಾಜೂರು ನೇತೃತ್ವ ವಹಿಸಲಿದ್ದಾರೆ.
ಮಜೂರು ಜುಮಾ ಮಸೀದಿ ಖತೀಬ್ ಅಬ್ದುಲ್ ರಶೀದ್ ಸಖಾಫಿ ಉದ್ಘಾಟಿಸಲಿದ್ದು, ವಕ್ಫ್ ಮಂಡಳಿಯ ಅಧ್ಯಕ್ಷ ಶಾಫಿ ಸಅದಿ, ನೌಫಾಲ್ ಕಳಸ ಹಾಗೂ ಇನ್ನಿತರ ಧಾರ್ಮಿಕ, ರಾಜಕೀಯ, ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ.
ಮಲಂಗೋಳಿ ಜುಮ್ಮಾ ಮಸೀದಿ ಖತೀಬ್ ಅಬ್ದುಲ್ ಮಜೀದ್ ಹನೀಫಿ, ಅರಫಾ ಮಸೀದಿ ಅಧ್ಯಕ್ಷ ಹಮೀದ್ ಮೂಸಾ, ಉರೂಸ್ ಸಮಿತಿಯ ಅಧ್ಯಕ್ಷ ಮುಹಮ್ಮದ್ ಅಶ್ರಫ್, ಅರಫ ಯಂಗ್‍ಮೆನ್ಸ್ ಅಧ್ಯಕ್ಷ ಮುಹಮ್ಮದ್ ಹನೀಫ್ ಯೂಸುಫ್, ಮುಹಮ್ಮದ್ ಇಸ್ಮಾಯಿಲ್, ಅಬ್ದುಲ್ ರಶೀದ್ ಉಪಸ್ಥಿತರಿದ್ದರು.