ಆಸ್ಟ್ರೇಲಿಯಾದಲ್ಲಿ ಮತ್ತೊಂದು ಹಿಂದೂ ದೇವಾಲಯಕ್ಕೆ ಬೆದರಿಕೆ

ಸಿಡ್ನಿ, ಫೆ.16: ಆಸ್ಟ್ರೇಲಿಯಾದಲ್ಲಿ ಮತ್ತೊಂದು ಹಿಂದು ದೇವಾಲಯಕ್ಕೆ ಖಲಿಸ್ತಾನ್ ಪರ ಸಂಘಟನೆಯಿಂದ ಬೆದರಿಕೆ ಕರೆ ಬಂದಿದೆ ಎಂದು ಮೆಲ್ಬೋರ್ನ್ ನ (Melbourn ) ಕಾಳಿಮಾತಾ ದೇವಾಲಯದ ಅರ್ಚಕರು ಗುರುವಾರ ಪೊಲೀಸರಿಗೆ ದೂರು ನೀಡಿದ್ದಾರೆ.
ದೇವಸ್ಥಾನದಲ್ಲಿ ನಡೆಯುವ ಭಜನೆಗಳನ್ನು ನಿಲ್ಲಿಸಬೇಕು, ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪಂಜಾಬಿ ಭಾಷೆಯಲ್ಲಿ ವ್ಯಕ್ತಿಯೊಬ್ಬ ಫೋನಿನಲ್ಲಿ ಬೆದರಿಕೆ ಒಡ್ಡಿದ್ದಾನೆ . ಮಾರ್ಚ್ 4ರಂದು ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಭಜನೆ ಹಾಡಲಿರುವ ವ್ಯಕ್ತಿ ಕಟ್ಟಾ ಹಿಂದು ಆಗಿರುವುದರಿಂದ ಆ ಕಾರ್ಯಕ್ರಮ ರದ್ದಾಗಬೇಕು ಎಂದಾತ ಎಚ್ಚರಿಸಿದ್ದಾನೆ ಎಂದು ಅರ್ಚಕರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಜನವರಿ 12ರಂದು ಮೆಲ್ಬೋರ್ನ್ ನ ಸ್ವಾಮಿ ನಾರಾಯಣ ದೇವಸ್ಥಾನದ ಗೋಡೆಯ ಮೇಲೆ ಭಾರತ ವಿರೋಧಿ ಘೋಷಣೆ ಬರೆಯಲಾಗಿತ್ತು.
ಇದನ್ನು ಓದಿ: ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಬಿಸಿನೆಸ್ ಸ್ಕೂಲ್‌ನಲ್ಲಿ ಉಪನ್ಯಾಸ ನೀಡಲು ರಾಹುಲ್ ಗಾಂಧಿಗೆ ಆಹ್ವಾನ
Next Story