ಮಂಗಳೂರು: ಮಾದಕ ವಸ್ತು ಸೇವಿಸಿದ ಆರೋಪ; ಯುವಕ ಸೆರೆ

ಮಂಗಳೂರು: ನಗರದ ಕೆಪಿಟಿ ಜಂಕ್ಷನ್ ಬಳಿಯ ಬಸ್ ತಂಗುದಾಣದಲ್ಲಿ ಮಾದಕ ವಸ್ತು ಸೇವನೆ ಮಾಡಿದ ಆರೋಪಿ ಯುವಕನನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.
ಬಿಕರ್ನಕಟ್ಟೆಯ ಪದವು ಚೌಟ ಹೌಸ್ ನಿವಾಸಿ ಚರಣ್ (23) ಬಂಧಿತ ಆರೋಪಿ.
ಈತನು ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರಲ್ಲದೆ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆಗೊಳಪಡಿಸಿದಾಗ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ ಎನ್ನಲಾಗಿದೆ. ಆರೋಪಿಯ ವಿರುದ್ಧ ಮಾದಕ ದ್ರವ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
Next Story