ವಿಧೇಯಕ ಅಂಗೀಕಾರ ವೇಳೆ ಆಡಳಿತ ಪಕ್ಷದ ಸದಸ್ಯರೇ ಗೈರು..

ಬೆಂಗಳೂರು, ಫೆ.16: 2022ನೆ ಸಾಲಿನ ಜಿ.ಎಂ.ವಿಶ್ವವಿದ್ಯಾಲಯ ವಿಧೇಯಕವನ್ನು ಅಂಗೀಕರಿಸುವಂತೆ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಗುರುವಾರ ಸಂಜೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದಾಗ ಆಡಳಿತ ಪಕ್ಷದ ಸದಸ್ಯರೇ ಇರಲಿಲ್ಲ. ಕೇವಲ ಸಚಿವರಾದ ಬಿ.ಸಿ.ನಾಗೇಶ್ ಹಾಗೂ ಎಸ್.ಅಂಗಾರ ಮಾತ್ರ ಇದ್ದರು.
ಈ ವೇಳೆ ಕಾಂಗ್ರೆಸ್ ಸದಸ್ಯ ಪ್ರಿಯಾಂಕ್ ಖರ್ಗೆ ಎದ್ದು ನಿಂತು ಒಂದು ವೇಳೆ ನಾವು ವಿಧೇಯಕದ ಅಂಗೀಕಾರ ಪ್ರಸ್ತಾವವನ್ನು ಮತಕ್ಕೆ ಹಾಕುವಂತೆ ಆಗ್ರಹಿಸಿದರೇ ವಿಧೇಯಕಕ್ಕೆ ಹೇಗೆ ಅಂಗೀಕಾರ ಸಿಗುತ್ತದೆ. ವಿಧೇಯಕ ಅಂಗೀಕರಿಸಲು ಅಗತ್ಯವಿರುವ ಸಂಖ್ಯಾಬಲವೆ ಇಲ್ಲವಲ್ಲ ಎಂದು ಆಡಳಿತ ಪಕ್ಷದ ಸದಸ್ಯರನ್ನು ತಿವಿದರು.
ಪರಿಸ್ಥಿತಿಯನ್ನು ಅರ್ಥೈಸಿಕೊಂಡ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸದನದಲ್ಲಿ ಸಂಖ್ಯಾಬಲ ಇಲ್ಲದೆ ಹೋದರೆ ವಿಧೇಯಕದ ಅಂಗೀಕಾರ ಸಾಧ್ಯವಿಲ್ಲ. ಆದುದರಿಂದ, ಈ ಪ್ರಕ್ರಿಯೆಯನ್ನು ಸೋಮವಾರಕ್ಕೆ ಮುಂದೂಡುತ್ತಿರುವುದಾಗಿ ಪ್ರಕಟಿಸಿದರು.
Next Story





