ಕೋವಿಡ್ ಯೋಧರಾಗಿ ಸೇವೆ ಸಲ್ಲಿಸಿದ ಡಾ.ವಿದ್ಯಾರಿಗೆ ರೋಟರಿ ಪ್ರಶಸ್ತಿ ಪ್ರದಾನ

ಮಂಗಳೂರು : ರೋಟರಿ ಮಂಗಳೂರು ಮೆಟ್ರೋ ಕ್ಲಬ್ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಕೋವಿಡ್ ಯೋಧರಾಗಿ ತನ್ನ ಸಮರ್ಪಿತ ಮತ್ತು ನಿಸ್ವಾರ್ಥ ಸೇವೆಗಾಗಿ ಡಾ ವಿದ್ಯಾ ರೋಟರಿ (ವೊಕೇಶನಲ್ ಎಕ್ಸಲೆನ್ಸಿ) ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿದ ಪಿಡಿಜಿ ರಂಗನಾಥ್ ಮಾತನಾಡುತ್ತಾ,ಡಾ ವಿದ್ಯಾ ಅವರು ಹಲವಾರು ತಿಂಗಳುಗಳ ಕಾಲ ಕರ್ನಾಟಕ-ಕೇರಳ ಗಡಿಯಲ್ಲಿ ಜನರನ್ನು ತಪಾಸಣೆ ಮತ್ತು ಗುರುತಿಸುವಲ್ಲಿ ಪಟ್ಟುಬಿಡದೆ ಕೆಲಸ ಮಾಡಿದರು ಮತ್ತು ಸೋಂಕಿತರನ್ನು ಗುರುತಿಸಲು ಮನೆ ಮನೆಗೆ ಭೇಟಿ, ಆಸ್ಪತ್ರೆ ಭೇಟಿ ನಡೆಸಿದರು. ವಿದ್ಯಾರಂತಹ ವೈದ್ಯರಿಂದಾಗಿಯೇ ನಾವು ಸುರಕ್ಷಿತವಾಗಿ, ಆರೋಗ್ಯವಾಗಿದ್ದೆವು ಎಂದರು. ಸಮಾರಂಭದಲ್ಲಿ ಡಾ.ವಿದ್ಯಾ ರನ್ನು ಅವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ರೋಟರಿ ಮಂಗಳೂರು ಮೆಟ್ರೋ ಕ್ಲಬ್ ಅಧ್ಯಕ್ಷ ರೊ. ನರೇಂದ್ರ ಪ್ರಭು,ಕಾರ್ಯದರ್ಶಿ ರೊ. ಅಶ್ವಿನಿ ಕಾಮತ್, ರೊ.ರಂಗನಾಥ ಭಟ್,ರೊ. ಸುರೇಶ್ ಕಾಮತ್,ರೊ.ಲತಾ ರಾಜೇಶ್ ಉಪಸ್ಥಿತರಿದ್ದರು.
Next Story