ಮಂಗಳೂರು: ಫೆ.18ರಂದು ಇಸ್ಕಾನ್ ರಥಯಾತ್ರೆ

ಮಂಗಳೂರು: ಅಂತರಾಷ್ಟ್ರೀಯ ಕೃಷ್ಣ ಸಂಘ (ಇಸ್ಕಾನ್) ಫೆ.18ರಂದು 21ನೆ ವರ್ಷ ದ ಶ್ರೀ ಕೃಷ್ಣ ಬಲರಾಮ ರಥಯಾತ್ರೆ ನಡೆಸಲಿದೆ ಎಂದು ಪಿವಿಸ್ ಕಲಾಕುಂಜದ ಇಸ್ಕಾನ್ ಘಟಕದ ಅಧ್ಯಕ್ಷ ಗುಣಕರ ರಾಮದಾಸ್ ಸುದ್ದಿ ಗೋಷ್ಠಿಯ ಲ್ಲಿಂದು ತಿಳಿಸಿದ್ದಾರೆ.
ಫೆ.18ರಂದು ಸಂಜೆ 4.30 ಗಂಟೆಗೆ ನಡೆಯುವ ರಥಯಾತ್ರೆ ಸಮಾರಂಭದಲ್ಲಿ ಇಸ್ಕಾನ್ ಬೆಂಗಳೂರು ಸಂಸ್ಥೆಯ ಅಧ್ಯಕ್ಷ ಹಾಗೂ ಅಕ್ಷಯ್ ಪಾತ್ರೆ ಪ್ರತಿಷ್ಠಾನದ ಅಧ್ಯಕ್ಷ ಮಧು ಪಂಡಿತ್ ದಾಸ್,ಉಪಾಧ್ಯಕ್ಷ ಚಂಚಲಾಪತಿ ದಾಸ್, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಮೋಹನ್ ಆಳ್ವ, ಎ.ಕೆ.ಬನ್ಸಾಲ್ ವಾಣಿಜ್ಯ ಸಂಸ್ಥೆಯ ನಿರ್ದೇಶಕ ರಾದ ಸುಷ್ಮಾ ಬನ್ಸಾಲ್ ಭಾಗವಹಿಸಲಿದ್ದಾರೆ. ರಥಯಾತ್ರೆ ನಗರದ ಪ್ರದಕ್ಷಿಣೆ ಯ ಬಳಿಕ ಸಂಜೆ 7.30ಕ್ಕೆ ಸಮಾರೋಪ ಗೊಳ್ಳಲಿದೆ ಎಂದವರು ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಕಾರ್ಯದರ್ಶಿ ಸನಂದನ ದಾಸ್,ಜೊತೆ ಕಾರ್ಯದರ್ಶಿ ರಾಧಾ ವಲ್ಲಭ ದಾಸ್ ಉಪಸ್ಥಿತರಿದ್ದರು.
Next Story