ಉಕ್ರೇನ್ ಮೇಲೆ 36 ಕ್ಷಿಪಣಿ ಪ್ರಯೋಗಿಸಿದ ರಶ್ಯ

ಕೀವ್, ಫೆ.16: ಗುರುವಾರ ರಶ್ಯವು ಉಕ್ರೇನ್ನ ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿಕೊಂಡು 36 ಕ್ಷಿಪಣಿಗಳನ್ನು ಪ್ರಯೋಗಿಸಿದ್ದು ಇದರಲ್ಲಿ 16 ಕ್ಷಿಪಣಿಗಳನ್ನು ಉಕ್ರೇನ್ ನ ವಾಯುರಕ್ಷಣಾ ವ್ಯವಸ್ಥೆಯು ಹೊಡೆದುರುಳಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸರಣಿ ಕ್ಷಿಪಣಿ ದಾಳಿಯಲ್ಲಿ 79 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದು ಕನಿಷ್ಟ 7 ಮಂದಿ ಗಾಯಗೊಂಡಿದ್ದಾರೆ. ರಶ್ಯದ ಪಡೆಗಳು ತಮ್ಮ ಕಾರ್ಯತಂತ್ರವನ್ನು ಬದಲಾಯಿಸಿದ್ದು ಎರಡು ದಿಕ್ಕಿನಿಂದ ಏಕಕಾಲಕ್ಕೆ ದಾಳಿ ಆರಂಭಿಸಿದ್ದಾರೆ ಎಂದು ಉಕ್ರೇನ್ ನ ಅಧ್ಯಕ್ಷೀಯ ಕಚೇರಿಯ ಮುಖ್ಯಸ್ಥ ಆಂಡ್ರಿಯ್ ಯೆರ್ಮಾಕ್ ಹೇಳಿದ್ದಾರೆ.
7 ಮನೆಗಳು ನಾಶಗೊಂಡಿವೆ, ಇತರ 30 ಮನೆಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Next Story





