ಉಕ್ರೇನ್ ನಿಂದ ಜರ್ಮನಿಗೆ 1.1 ದಶಲಕ್ಷ ಜನರ ಪಲಾಯನ

ಬರ್ಲಿನ್, ಫೆ.16: ಯುದ್ಧಪೀಡಿತ ಉಕ್ರೇನ್ ನಿಂದ 2022ರಲ್ಲಿ ಸುಮಾರು 1.1 ದಶಲಕ್ಷ ಜನರು ಜರ್ಮನಿಗೆ ಪಲಾಯನ ಮಾಡಿದ್ದು ಇದು 2015ರಲ್ಲಿ ಸಂಭವಿಸಿದ ಮಧ್ಯಪ್ರಾಚ್ಯದಿಂದ ವಲಸಿಗರ ಒಳಹರಿವಿನ ಪ್ರಮಾಣವನ್ನು ಮೀರಿಸಿದೆ ಎಂದು ಜರ್ಮನ್ ಸರಕಾರದ ಅಂಕಿಅಂಶ ಇಲಾಖೆ ಗುರುವಾರ ಮಾಹಿತಿ ನೀಡಿದೆ.
ಇದರಲ್ಲಿ ಮೂರನೇ ಎರಡರಷ್ಟು ವಲಸಿಗರು ಉಕ್ರೇನ್ ಮೇಲಿನ ರಶ್ಯದ ಆಕ್ರಮಣ ಆರಂಭಗೊಂಡ ಪ್ರಥಮ ಮೂರು ತಿಂಗಳಲ್ಲೇ, ಅಂದರೆ 2022ರ ಮಾರ್ಚ್-ಮೇ ನಡುವಿನ ಅವಧಿಯಲ್ಲಿ ಜರ್ಮನಿಗೆ ಆಗಮಿಸಿದ್ದಾರೆ. ಉಕ್ರೇನ್ ಗೆ ಹಿಂದಿರುಗಿದವರನ್ನು ಹೊರತುಪಡಿಸಿ, 2022ರಲ್ಲಿ ಉಕ್ರೇನ್ ನಿಂದ ಜರ್ಮನಿಗೆ 9,62,000 ಜನರು ವಲಸೆ ಬಂದಿದ್ದರೆ, 2014ರಿಂದ 2016ರ ನಡುವಿನ ಅವಧಿಯಲ್ಲಿ ಸಿರಿಯಾ, ಅಫ್ಘಾನಿಸ್ತಾನ ಮತ್ತು ಇರಾಕ್ನಿಂದ 8,34,000 ವಲಸಿಗರು ಜರ್ಮನಿಗೆ ಬಂದಿದ್ದರು ಎಂದು ವರದಿ ಹೇಳಿದೆ.
Next Story





