ರಶ್ಯ: ಆಸ್ಟ್ರಿಯಾದ ರಾಜತಾಂತ್ರಿಕರ ಉಚ್ಛಾಟನೆ

ಮಾಸ್ಕೊ, ಫೆ.16: ಮಾಸ್ಕೋದಲ್ಲಿರುವ ಆಸ್ಟ್ರಿಯಾ ರಾಯಭಾರಿ ಕಚೇರಿಯ 4 ಸಿಬಂದಿಗಳನ್ನು ಉಚ್ಛಾಟಿಸಲಾಗಿದ್ದು ಫೆಬ್ರವರಿ 24ರೊಳಗೆ ದೇಶ ಬಿಟ್ಟು ತೆರಳುವಂತೆ ಸೂಚಿಸಲಾಗಿದೆ ಎಂದು ರಶ್ಯದ ವಿದೇಶಾಂಗ ಇಲಾಖೆ ಹೇಳಿದೆ.
ಆಸ್ಟ್ರಿಯಾವು ರಶ್ಯದ ವಿದೇಶಾಂಗ ನಿಯೋಗದ 4 ಸಿಬಂದಿಗಳನ್ನು ಉಚ್ಛಾಟಿಸಿದ್ದಕ್ಕೆ ಪ್ರತಿಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ತನ್ನ ರಾಜತಾಂತ್ರಿಕರ ಉಚ್ಛಾಟನೆಯು ಸ್ನೇಹಪರವಲ್ಲದ ಮತ್ತು ಅನ್ಯಾಯದ ಕ್ರಮವಾಗಿದ್ದು, ಇದು ಆಸ್ಟ್ರಿಯಾದ ಕ್ರಮದಿಂದ ಈಗಾಗಲೇ ಬಿಕ್ಕಟ್ಟಿಗೆ ಸಿಲುಕಿರುವ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಹದಗೆಡಿಸಲಿದೆ.
ರಶ್ಯದಲ್ಲಿರುವ ಆಸ್ಟ್ರಿಯಾದ ರಾಯಭಾರಿಯನ್ನು ಕರೆಸಿಕೊಂಡು ಮಾಹಿತಿ ರವಾನಿಸಲಾಗಿದೆ ಎಂದು ರಶ್ಯದ ವಿದೇಶಾಂಗ ಇಲಾಖೆ ಹೇಳಿಕೆ ನೀಡಿದೆ.
Next Story





