ಬಜೆಟ್: ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಿಎಂ ಬೊಮ್ಮಾಯಿ

ಬೆಂಗಳೂರು ಫೆ.17: ಪ್ರಸಕ್ತ (2023-24ನೇ) ಸಾಲಿನ ಬಜೆಟ್ ಮಂಡನೆಗೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನ ಆರ್.ಟಿ.ನಗರದ ಮುತ್ತಪ್ಪ ಬ್ಲಾಕ್ ನ ಶ್ರೀ ಕಂಠೇಶ್ವರ ದೇವಸ್ಥಾನ ಹಾಗೂ ಬಾಲಬ್ರುಯಿ ಬಳಿ ಇರುವ ಮಾರುತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಸಮಸ್ತ ಕರ್ನಾಟಕದ ಮಹಾಜನತೆಯ ಹೆಸರಿನಲ್ಲಿ ಅರ್ಚನೆ ಮಾಡಿಸಿ ಮಾಧ್ಯಮದರೊಂದಿಗೆ ಮಾತನಾಡಿದರು.
ಇದಕ್ಕೂ ಮೊದಲು 2023-24ನೇ ಸಾಲಿನ ಬಜೆಟ್ ಪ್ರತಿಯನ್ನು ಹಣಕಾಸು ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಹಸ್ತಾಂತರಿಸಿದರು.
ಹಣಕಾಸು ಇಲಾಖೆ ಅಧಿಕಾರಿಗಳಾದ ಐ.ಎಸ್.ಎನ್.ಪ್ರಸಾದ್, ಏಕರೂಪ್ ಕೌರ್, ಜಾಫರ್ ಹಾಗೂ ಮತ್ತಿತರ ಅಧಿಕಾರಿಗಳು ಹಾಜರಿದ್ದರು.











