ಸುಳ್ಯದ ವಿವಿಧ ಮುಸ್ಲಿಮ್ ಸಂಘಟನೆ, ಮುಸ್ಲಿಮ್ ಮುಖಂಡರಿಂದ ಕೆ.ಎಸ್.ಮುಹಮ್ಮದ್ ಮಸೂದ್ ರಿಗೆ ಸನ್ಮಾನ

ಮಂಗಳೂರು, ಫೆ.17: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯನ್ನೊಳಗೊಂಡ ದಿ ಮುಸ್ಲಿಮ್ ಸೆಂಟ್ರಲ್ ಕಮಿಟಿಯ ನೂತನ ಅಧ್ಯಕ್ಷರಾಗಿ ಇತ್ತೀಚೆಗೆ ಪುನಾಯ್ಕೆಯಾಗಿರುವ ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್ ರನ್ನು ಸುಳ್ಯ ತಾಲೂಕಿನ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸುಳ್ಯದ ಮುಸ್ಲಿಮ್ ಮುಖಂಡರು ಮಂಗಳೂರಿನ ಸೆಂಟ್ರಲ್ ಕಮಿಟಿ ಕಚೇರಿಯಲ್ಲಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್, ಸುಳ್ಯದ ಕಳಂಜದಲ್ಲಿ ಹತ್ಯೆಗೀಡಾದ ಮಸೂದ್ ಕುಟುಂಬಕ್ಕೆ ಮುಸ್ಲಿಮ್ ಸೆಂಟ್ರಲ್ ಕಮಿಟಿ ವತಿಯಿಂದ ಈಗಾಗಲೇ 30 ಲಕ್ಷ ರೂ. ಧನಸಹಾಯ ನೀಡಲಾಗಿದೆ. ಅದೇರೀತಿ ಕಿಡ್ನಿ ವೈಫಲ್ಯ ದಿಂದ ಸಂಕಷ್ಟದಲ್ಲಿರುವ ಕಡಬದ ನಾಸಿರ್ ಎಂಬ ಯುವಕನಿಗೆ 50 ಸಾವಿರ ರೂ. ಧನಸಹಾಯವನ್ನು ನೀಡಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ನಮ್ಮ ಈ ಸೇವಾ ಕಾರ್ಯಕ್ರಮಗಳನ್ನು ವಿಸ್ತರಿಸಲಾಗುವುದು ಎಂದು ಹೇಳಿದರು.
ಮುಸ್ಲಿಂ ಸೆಂಟ್ರಲ್ ಕಮಿಟಿಯ ಸಂಘಟನಾ ಕಾರ್ಯದರ್ಶಿ ಎಸ್.ಸಂಶುದ್ದೀನ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಈ ಸಂದರ್ಭದಲ್ಲಿ ಜಾವಗಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಹಾಜಿ ಪಿ.ಇಸಾಕ್ ಸಾಹೇಬ್ ಪಾಜಪಲ್ಲ, ಜಿಲ್ಲಾ ಎಐಕೆಎಂಸಿಸಿ ಖಜಾಂಚಿ ಇಬ್ರಾಹೀಂ ಹಾಜಿ ಖತರ್ ಮಂಡೆಕೋಲು, ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮಾಜಿ ಮೇಯರ್ ಅಶ್ರಫ್, ಸುಳ್ಯ ಮುಸ್ಲಿಮ್ ಒಕ್ಕೂಟದ ಸಂಚಾಲಕ ಇಕ್ಬಾಲ್ ಎಲಿಮಲೆ, ಸುಳ್ಯ ನಗರ ಪಂಚಾಯತ್ ಸದಸ್ಯ ಕೆ.ಎಸ್.ಉಮರ್, ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯ ಮಾಜಿ ಅಧ್ಯಕ್ಷ ಪಿ.ಎ.ಮುಹಮ್ಮದ್, ಸೆಂಟ್ರಲ್ ಕಮಿಟಿಯ ಪದಾಧಿಕಾರಿಗಳಾದ ನೂರುದ್ದೀನ್ ಸಾಲ್ಮರ, ಇಬ್ರಾಹೀಂ ಕೋಡಿಜಾಲ್, ಸಿ.ಎಂ.ಮುಸ್ತಫ, ಎಣ್ಮೂರು ಜಮಾಅತ್ ಅಧ್ಯಕ್ಷ ಅಬ್ದುಲ್ ಗಫೂರ್ ಕಲ್ಮಡ್ಕ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಸ್ಮಾಯೀಲ್ ಪಡ್ಪಿನಂಗಡಿ, ಆರ್ ಟಿಐ ಕಾರ್ಯಕರ್ತ ಹನೀಫ್ ಪಾಜಪಲ್ಲ, ಅನ್ಸಾರ್ ಮುಸ್ಲಿಮ್ ಆಸೋಸಿಯೇಶನ್ ನಿರ್ದೇಶಕ ಕೆ.ಬಿ. ಇಬ್ರಾಹೀಂ ಮೊದಲಾದವರು ಉಪಸ್ಥಿತರಿದ್ದರು.







