ಬಜೆಟ್ ಮಂಡನೆ | ಕಿವಿಗೆ ಹೂ ಇಟ್ಟು ಬಂದ ಕಾಂಗ್ರೆಸ್ ಸದಸ್ಯರು!

ಬೆಂಗಳೂರು: ವಿಧಾನಸಭೆಯಲ್ಲಿ ಬಜೆಟ್ ಮಂಡನೆ ವೇಳೆ ಸಿದ್ದರಾಮಯ್ಯ ಮತ್ತು ಇತರ ಕಾಂಗ್ರೆಸ್ ನಾಯಕರು ಕಿವಿಗೆ ಹೂವು ಹಾಕಿಕೊಂಡು ಹಿಂದಿನ ಬಜೆಟ್ ಮತ್ತು 2018 ರ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸದೇ ಬಿಜೆಪಿ ಸರ್ಕಾರ ಜನರನ್ನು ವಂಚಿಸಿದೆ ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ ಅವರು, ವಿರೋಧ ಪಕ್ಷದ ನಾಯಕರು ಇಷ್ಟು ದಿನ ಜನರ ಕಿವಿ ಮೇಲೆ ಹೂ ಇಟ್ಟಿದ್ದರು. ಈ ಬಾರಿ ಜನ ಅವರ ಕಿವಿ ಮೇಲೆ ಹೂ ಇಡಲಿದ್ದಾರೆ ಎಂದು ಕುಟುಕಿದರು. ಈ ಸಂದರ್ಭದಲ್ಲಿ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ಕೆಲಕಾಲ ವಾಕ್ಸಮರ ನಡೆಯಿತು. ಸ್ಪೀಕರ್ ಕಾಗೇರಿ ಅವರ ಮಧ್ಯ ಪ್ರವೇಶದ ಬಳಿಕ ಸಿಎಂ ಬೊಮ್ಮಾಯಿ ಬಜೆಟ್ ಭಾಷಣ ಆರಂಭಿಸಿದರು.
Next Story





