ಅದ್ಭುತ ಕ್ಯಾಚ್ ಪಡೆದು ಉಸ್ಮಾನ್ ಖ್ವಾಜಾಗೆ ಪೆವಿಲಿಯನ್ ಹಾದಿ ತೋರಿಸಿದ ಕೆ.ಎಲ್. ರಾಹುಲ್

ಹೊಸದಿಲ್ಲಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಶುಕ್ರವಾರ ಆರಂಭವಾದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಕೆ.ಎಲ್. ರಾಹುಲ್ ಅದ್ಭುತ ಕ್ಯಾಚ್ ಪಡೆದು ಉಸ್ಮಾನ್ ಖ್ವಾಜಾ ಅವರನ್ನು ಪೆವಿಲಿಯನ್ ಗೆ ಕಳುಹಿಸಿದರು.
ತಮ್ಮ ಅರ್ಧಶತಕವನ್ನು ಮುಗಿಸಿದ ನಂತರ ಖ್ವಾಜಾ ಸಂಪೂರ್ಣವಾಗಿ ನಿರಾಳವಾಗಿದ್ದಂತೆ ಕಂಡುಬಂದರು. ಆಸ್ಟ್ರೇಲಿಯದ ಆರಂಭಿಕ ಆಟಗಾರ ಸಾಹಸಮಯ ರಿವರ್ಸ್ ಸ್ವೀಪ್ ಮಾಡಲು ಮುಂದಾದರು. ಆಗ ಕೆ.ಎಲ್. ರಾಹುಲ್ ಡೈವ್ ಮಾಡಿ ಒಂದೇ ಕೈಯಿಂದ ಕ್ಯಾಚ್ ಅನ್ನು ಪೂರ್ಣಗೊಳಿಸಿದರು. ಇದನ್ನು ನೋಡಿ ಸ್ವತಃ ಖ್ವಾಜಾ ಅಚ್ಚರಿಗೊಂಡರು.
ಖ್ವಾಜಾ 125 ಎಸೆತಗಳಲ್ಲಿ 14 ಬೌಂಡರಿ, 1 ಸಿಕ್ಸರ್ ಸಹಿತ 81 ರನ್ ಗಳಿಸಿ ಜಡೇಜರ ಬೌಲಿಂಗ್ ನಲ್ಲಿ ರಾಹುಲ್ ಅವರ ಅಮೋಘ ಕ್ಯಾಚ್ ಗೆ ವಿಕೆಟ್ ಒಪ್ಪಿಸಿದರು.
ನಾಯಕ ಪ್ಯಾಟ್ ಕಮಿನ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ನಂತರ ಖ್ವಾಜಾ ಹಾಗೂ ಡೇವಿಡ್ ವಾರ್ನರ್ (15) ಮೊದಲ ವಿಕೆಟಿಗೆ 50 ರನ್ ಸೇರಿಸಿದರು.
ಆಸ್ಟ್ರೇಲಿಯ ಟೀ ವಿರಾಮದ ವೇಳೆಗೆ 56 ಓವರ್ ಗಳಲ್ಲಿ 199 ರನ್ ಗೆ ಆರು ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಖ್ವಾಜಾ ಸರ್ವಾಧಿಕ ಸ್ಕೋರ್ ಗಳಿಸಿದರು.
ICYMI - WHAT. A. CATCH
— BCCI (@BCCI) February 17, 2023
WOW. A one-handed stunner from @klrahul to end Usman Khawaja’s enterprising stay!#INDvAUS pic.twitter.com/ODnHQ2BPIK