Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ರಾಜ್ಯ ಬಜೆಟ್ 2023: ಯಾರು ಏನು ಹೇಳಿದರು?

ರಾಜ್ಯ ಬಜೆಟ್ 2023: ಯಾರು ಏನು ಹೇಳಿದರು?

17 Feb 2023 5:41 PM IST
share
ರಾಜ್ಯ ಬಜೆಟ್ 2023: ಯಾರು ಏನು ಹೇಳಿದರು?

ಬೆಂಗಳೂರು, ಫೆ.17: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಒಟ್ಟು 3,09,182 ಕೋಟಿ ರೂ ಗಾತ್ರದ ಬಜೆಟ್ ಮಂಡನೆ ಮಾಡಿದ್ದಾರೆ. ಈ ಬಗ್ಗೆ ರಾಜಕೀಯ, ರೈತ ಮುಖಂಡರು ಏನು ಹೇಳಿದರು? ಎನ್ನುವುದು ಇಲ್ಲಿದೆ... 

'ಅಮೃತ ಕಾಲದ ಬಜೆಟ್ ಅಭಿವೃದ್ಧಿಗೆ ಪೂರಕ'

'ಶಿಕ್ಷಣ, ಉದ್ಯೋಗ, ಸಬಲೀಕರಣದ ಮಂತ್ರದೊಂದಿಗೆ ಪರಿಶಿಷ್ಟ ಜಾತಿ, ಪಂಗಡ, ಹಿಂ.ವರ್ಗಗಳು, ಅಲ್ಪಸಂಖ್ಯಾತರು, ಮಹಿಳೆಯರು ಹಾಗೂ ಇತರ ದುರ್ಬಲ ವರ್ಗದವರ ಸ್ವಾಭಿಮಾನದ, ಸ್ವಾವಲಂಬನೆಯ ಬದುಕಿಗೆ ಬೆಂಬಲ ನೀಡುವ ಬಜೆಟ್ ಇದು. ಎಲ್ಲ ವರ್ಗದ, ಎಲ್ಲ ಸಮುದಾಯಗಳ ಜನರಿಗೆ ಒಳಿತುಂಟು ಮಾಡಿ ರಾಜ್ಯದ ತ್ವರಿತ ಪ್ರಗತಿಯನ್ನು ಸಾಧಿಸುವ ನಿಟ್ಟಿನಲ್ಲಿ ಬೊಮ್ಮಾಯಿಯವರು ಮುಂದಡಿ ಇಟ್ಟಿದ್ದಾರೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಆಯವ್ಯಯ ಮಂಡಿಸಿದ್ದು ಜೊತೆಗೆ ಅಮೃತ ಕಾಲದ ಕುರಿತು ಸ್ಪಷ್ಟ ಯೋಜನೆಗಳನ್ನೂ ರೂಪಿಸಿದ್ದಾರೆ’

-ಅರುಣ್ ಸಿಂಗ್ ರಾಜ್ಯ ಬಿಜೆಪಿ ಉಸ್ತುವಾರಿ
.....................
ದೂರದೃಷ್ಟಿ ಮುಂಗಡ ಪತ್ರ: ‘ಬಡವರು, ರೈತರು ಹಾಗೂ ಮಹಿಳೆಯರು ಸೇರಿ ಎಲ್ಲ ವರ್ಗದ ಜನರ ಹಿತಕಾಯುವ ಜನಪರ, ಜನಸ್ನೇಹಿ ಆಯವ್ಯಯ. ಸಾಮಾಜಿಕ ನ್ಯಾಯ ಒದಗಿಸುವ ಬಿಜೆಪಿ ಬದ್ದತೆ, ಅರ್ಥವ್ಯವಸ್ಥೆ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಪ್ರಗತಿಪರ ಬಜೆಟ್ ಇದು. ನೀರಾವರಿ ವಲಯಕ್ಕೆ 25ಸಾವಿರ ಕೋಟಿ ರೂ.ಅನುದಾನ ನೀಡುವ ಮೂಲಕ 1.50ಲಕ್ಷ ಹೆಕ್ಟೇರ್ ನೀರಾವರಿ ಸಾಮಥ್ರ್ಯ  ಹೆಚ್ಚಿಸಲಾಗುವುದು. ಉದ್ಯೋಗ ಸೃಷ್ಟಿ, ಜನರ ಬದುಕಿನಲ್ಲಿ ಗುಣಾತ್ಮಕವಾದ ಬದಲಾವಣೆ ಮತ್ತು ಸಮಗ್ರ ಅಭಿವೃದ್ಧಿ ಚಿಂತನೆಗಳನ್ನು ಪರಿಣಾಮಕಾರಿಯಾಗಿ ವಿನ್ಯಾಸಗೊಳಿಸಿರುವ 2023-24ನೆ ಸಾಲಿನ ದೂರದೃಷ್ಟಿ ಮುಂಗಡ ಪತ್ರ ಇದು’

-ಗೋವಿಂದ ಎಂ.ಕಾರಜೋಳ, ಜಲಸಂಪನ್ಮೂಲ ಸಚಿವ
....................


ಸಮೃದ್ಧ ಕರ್ನಾಟಕ ಗುರಿ ಸಾಧನೆಗೆ ಸಹಕಾರಿ: ‘ಐದು ಸಾವಿರ ವಸತಿ ರಹಿತ ಪೌರಕಾರ್ಮಿಕರಿಗೆ 300ಕೋಟಿ ರೂ.ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಲು ಉದ್ದೇಶಿಸಿರುವ ‘ಪೌರ ಆಸರೆ' ಯೋಜನೆಯ ಪ್ರಸ್ತಾವನೆ. ರಾಜ್ಯದ ಜಿಡಿಪಿಯು 1 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಪರಿವರ್ತಿಸುವ ಮಹತ್ವಾಕಾಂಕ್ಷೆ ಭವಿಷ್ಯದ ಮುನ್ನೋಟವಿರುವ, ವಾಸ್ತವದ ಸವಾಲುಗಳನ್ನು ಮೆಟ್ಟಿ, ರಾಜಸ್ವ ಹೆಚ್ಚಳದ ಜೊತೆಗೆ ಸಮೃದ್ಧ ಕರ್ನಾಟಕದ ಗುರಿಯನ್ನು ಸಾಧಿಸುವ ಆಯವ್ಯಯ ಇದಾಗಿದೆ’

-ಎಂಟಿಬಿ ನಾಗರಾಜು, ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಸಚಿವ
................................

ರೈತರಿಗೆ ಅನುಕೂಲಕರ: ‘ಕೃಷಿ ಮತ್ತು ಅದರ ಪೂರಕ ವಲಯಕ್ಕೆ ಆದ್ಯತೆ ನೀಡುವ ರೈತರಿಗೆ ಅನುಕೂಲ ಕಲ್ಪಿಸುವ ಆಯವ್ಯಯ ಇದಾಗಿದ್ದು, ರೈತರಿಗೆ ನೀಡುವ ಬಡ್ಡಿ ರಹಿತ ಅಲ್ಪಾವಧಿ ಸಾಲವನ್ನು 3ಲಕ್ಷ ರೂ.ನಿಂದ 5ಲಕ್ಷ ರೂ.ಗಳಿಗೆ ಏರಿಕೆ ಹಾಗೂ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕೃಷಿ ಉತ್ಪನ್ನಗಳ ಖರೀದಿಗೆ 3,500 ಕೋಟಿ ರೂ.ಆವರ್ತನಿಧಿ ಒದಗಿಸಿರುವುದು ಮಾದರಿ’

-ಬಿ.ಸಿ.ಪಾಟೀಲ್, ಕೃಷಿ ಸಚಿವ
..............
ನೈಜ ಅನುಷ್ಠಾನದ ಆಯವ್ಯಯ: ‘ರೈತರ, ಕೃಷಿ ಕಾರ್ಮಿಕರ, ದೀನ ದಲಿತರ, ಹಿಂ.ವರ್ಗ ಸೇರಿದಂತೆ ಸರ್ವೋದಯ ಮತ್ತು ಸರ್ವರ ಕ್ಷೇಮ ಮತ್ತು ಅಭಿವೃದ್ಧಿ ದೃಷ್ಠಿಯಲ್ಲಿಟ್ಟುಕೊಂಡ ಬಜೆಟ್ ಇದು. ಅನುಷ್ಠಾನ ಉದ್ದೇಶದ ಆಯವ್ಯಯವೂ ಆಗಿದ್ದು ಮಹತ್ವ ಪಡೆದುಕೊಂಡಿದೆ. ಕೃಷಿ, ಆರೋಗ್ಯ, ಶಿಕ್ಷಣ, ಉದ್ಯೋಗ ಸೃಷ್ಠಿ, ಎಲ್ಲ್ಲ ಸಮಾಜಗಳ ಅಭಿವೃದ್ಧಿಗೆ ಉತ್ತೇಜಿಸುವ ಉದ್ದೇಶದಿಂದ ಸಮಾನತೆಯ ಕಲ್ಪನೆಯನ್ನು ಇಟ್ಟುಕೊಂಡು ನೈಜ ಅನುಷ್ಠಾನದ ಉದ್ದೇಶವನ್ನು ಹೊಂದಿದೆ’

-ಬಿ.ಎ.ಬಸವರಾಜ, ನಗರಾಭಿವೃದ್ಧಿ ಸಚಿವ
...................

ಜನಸ್ನೇಹಿ ಬಜೆಟ್: ‘ಎಸ್‍ಸಿ-ಎಸ್‍ಟಿ ಮಕ್ಕಳಿಗೆ ನಿಗಮಗಳ ಮೂಲಕ ಉದ್ಯೋಗ ಸೃಷ್ಟಿಗೆ ಅನುದಾನ, ನಗರ-ಗ್ರಾಮೀಣ ಪ್ರದೇಶಗಳಿಗೆ ಬೆಂಗಳೂರು ಮತ್ತು ಇತರ ದೊಡ್ಡ ನಗರಗಳಿಗೆ ತಾರತಮ್ಯ ರಹಿತ ಅಭಿವೃದ್ಧಿ ಚಟುವಟಿಕೆಗಳಿಗೆ ಅನುವು ಮಾಡಿಕೊಡಲಾಗಿದೆ. ಮಹಿಳೆಯರಿಗೆ ಗೃಹಿಣಿ ಶಕ್ತಿ, ವಿದ್ಯಾರ್ಥಿನಿಯರಿಗೆ ಉಚಿತ ಬಸ್‍ಪಾಸ್, ನಿರುದ್ಯೋಗಿಗಳಿಗೆ 2 ಸಾವಿರ ರೂ.ನೆರವು ಸಹಿತ ಹಲವು ಯೋಜನೆಗಳು ರೈತರು, ಮಹಿಳೆಯರು ಮತ್ತು ಎಲ್ಲ್ಲ ವರ್ಗದ ಜನರ ಹಿತಕಾಯುವ ಜನಪರ ಜನಸ್ನೇಹಿ ಮುಂಗಡಪತ್ರ ಇದು. 

-ಕೆ.ಗೋಪಾಲಯ್ಯ, ಅಬಕಾರಿ ಸಚಿವ
..............


ಅಭಿವೃದ್ಧಿಗೆ ಪೂರಕ: ‘ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣದ ಮಂತ್ರದ ಜತೆಗೆ ಎಸ್‍ಸಿ-ಎಸ್‍ಟಿ, ಹಿಂ.ವರ್ಗಗಳು, ಅಲ್ಪಸಂಖ್ಯಾತರು, ಮಹಿಳೆಯರು ಸಹಿತ ದುರ್ಬಲ ವರ್ಗದ ಜನರ ಸ್ವಾವಲಂಬಿ ಬದುಕಿಗೆ ಬೆಂಬಲ ನೀಡುವ ಬಜೆಟ್ ಇದು. ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಬೊಮ್ಮಾಯಿ ಮಹತ್ವದ ಹೆಜ್ಜೆಯನ್ನಿಟ್ಟಿದ್ದಾರೆ. ಆದರೆ, ವಿಪಕ್ಷದವರು ‘ಒಲ್ಲದ ಗಂಡನಿಗೆ ಮೊಸರಿನಲ್ಲಿ ಕಲ್ಲು’ ಎಂಬಂತೆ ಟೀಕಿಸುವ ಕಾರ್ಯ ಮುಂದುವರಿಸಿದ್ದಾರೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪೂರಕ ಈ ಬಜೆಟ್’

-ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ
................
ಜನರ ಕಿವಿ ಮೇಲೆ ಹೂವಿಡುವ ಪ್ರಯತ್ನ: ‘ಹಿಂದಿನ ಬಜೆಟ್‍ನ ಪ್ರಗತಿ ಶೇ.50ರಷ್ಟನ್ನು ದಾಟಿಲ್ಲ. ಇಂದಿನ ಬಜೆಟ್ ಟೀಕಾಫ್ ಆಗುವುದೇ ಇಲ್ಲ. ಚುನಾವಣೆಗಾಗಿ ಬಣ್ಣ ಬಣ್ಣದ ಘೋಷಣೆ ಮಾಡಿ ರಾಜ್ಯದ ‘ಜನರ ಕಿವಿ ಮೇಲೆ ಹೂವಿಡುವ ಪ್ರಯತ್ನ’ ನಡೆಸಿದ್ದಾರೆ ಅಷ್ಟೇ. ಯಾವುದೇ ಯೋಜನೆ ಬಗ್ಗೆ ಕೇಳಿದರೂ ಅನುದಾನವಿಲ್ಲ ಎನ್ನುವವರ ಬಜೆಟ್‍ನಿಂದ ನಿರೀಕ್ಷೆ ಇಟ್ಟುಕೊಳ್ಳುವುದು ಮೂರ್ಖತನ. ಈ ಆಯವ್ಯಯ ಯಾರ ಕಣ್ಣಿಗೂ ಕಾಣದು, ಕೈಗೂ ಸಿಗದು ಬಿಸಿಲು ಕುದುರೆಯಂತಹ ಬಜೆಟ್. ಬಿಜೆಪಿಯವರ ಡಬಲ್ ಇಂಜಿನ್ ಕೆಟ್ಟು ನಿಂತು ಹೊಗೆ ಬರುತ್ತಿದೆ. ತಾವೂ ಬಜೆಟ್ ಮಂಡಿಸಿದ್ದೇವೆಂದು ಹೇಳಿಕೊಳ್ಳಲು ಇದನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು ಅಷ್ಟೇ. ಅದನ್ನು ಜಾತ್ರೆಯ ಕನ್ನಡಕ ಹಾಕಿಕೊಂಡು ನೋಡಬೇಕು’

-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
--------------------------------------------
'ಚುನಾವಣೆ ಪೂರ್ವದ ಈ ಬಜೆಟ್ ಗೆ ಯಾವುದೇ ಮಹತ್ವ ಇಲ್ಲ. ಮುಂದಿನ ಮೇ ತಿಂಗಳಲ್ಲಿ ಚುನಾವಣೆ ಇದೆ‌. ಮುಂದೆ ಬರುವ ಸರ್ಕಾರ ಮತ್ತೊಂದು ಬಜೆಟ್ ಘೋಷಣೆ ಮಾಡುತ್ತೆ. ನಾನು ಈಗಾಗಲೇ ರಾಜ್ಯದ 70 ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದೇನೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಪ್ರಶ್ನೆಯೇ ಇಲ್ಲ. ಚುನಾವಣೆ ಇರುವರಿಂದ ಜನರನ್ನು ಮೆಚ್ಚಿಸಲು ಆದರೂ ಜನಪ್ರಿಯ ಘೋಷಣೆ ಮಾಡುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ ಅವರ ಮಂತ್ರಿಗಳು, ಶಾಸಕರುಗಳಿಗೆ ಇದು ನೀರಸ ಬಜೆಟ್ ಅನಿಸಿದೆಯಂತೆ'

- ಎಚ್.ಡಿ ಕುಮಾರಸ್ವಾಮಿ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರು

--------------------------------------------
ದೂರದೃಷ್ಟಿ ಇಲ್ಲದ ಬಜೆಟ್:

‘ಕೃಷಿಕರ ಪರವಿಲ್ಲದ ಹಾಗೂ ದೂರದೃಷ್ಟಿಯೂ ಇಲ್ಲ ಬಜೆಟ್ ಇದಾಗಿದೆ. ಇದರಲ್ಲಿ ಯಾವುದೇ ತಿರುಳು ಇಲ್ಲ. ಏಕೆಂದರೆ, ರೈತರ ಆದಾಯ ಹೆಚ್ಚಿಸುವ ಕಾರ್ಯಕ್ರಮಗಳಿಲ್ಲ. ಕೃಷಿ ಉತ್ಪನ್ನಗಳ ಖರೀದಿಗೆ ಆವರ್ತ ನಿಧಿ ಮೀಸಲಿಟ್ಟಿಲ್ಲ. ಬಡ್ಡಿ ರಹಿತ ಸಾಲದ ಮೊತ್ತ 5 ಲಕ್ಷ ರೂ. ಏರಿಸಿರುವುದು ಸ್ವಾಗತಾರ್ಹ. ಆದರೆ, ಇದು ಕರ್ನಾಟಕದಲ್ಲಿರುವ ಶೇ.87ರಷ್ಟು ಸಣ್ಣ ಹಿಡುವಳಿದಾರರಿಗೆ ಉಪಯೋಗ ಆಗುವುದಿಲ್ಲ. ನೀರಾವರಿಗೆ ಶೇ.6.5ರಷ್ಟು ಮೀಸಲಿಟ್ಟಿದ್ದು, ನೆರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಇದು ಬಹಳ ಕಡಿಮೆ. ಆಯವ್ಯಯದಲ್ಲಿ ಸರಕಾರ ನೀಡಿರುವ ಅಂಕಿ-ಅಂಶಗಳನ್ನು ಗಮನಿಸಿದರೆ ಈ ಬಜೆಟ್ ಕೃಷಿಕರ ಪರವಾಗಿಲ್ಲ ಎಂಬುದು ಸ್ಪಷ್ಟ. ಕೃಷಿಕರನ್ನು ಸಾಲದ ಹೊರೆಯಿಂದ ಹೊರತರಲು ಯಾವುದೇ ಯೋಜನೆಗಳಿಲ್ಲ’

-ಬಡಗಲಪುರ ನಾಗೇಂದ್ರ, ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ 
..................
ಹಾಸ್ಯಸ್ಪದ: ‘ಸಾಲದ ಪ್ರಮಾಣ 2ಲಕ್ಷ ಕೋಟಿ ರೂ.ನಿಂದ 5ಲಕ್ಷ ಕೋಟಿ ರೂ.ಗೆ ಏರಿಸಿರುವ ಬಿಜೆಪಿಗರು 4ವರ್ಷ ಅವಧಿಯಲ್ಲಿ ಆಪರೇಷನ್ ಕಮಲ, ಶೇ.40 ಕಮಿಷನ್, ನೇಮಕಾತಿ ಹಗರಣ, ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಕೊಡದೆ ವಂಚಿಸಿದ್ದರ ಜೊತೆಗೆ ರಸಗೊಬ್ಬರದ ಬೆಲೆ ಏರಿಕೆ ಮಾಡಿ ರೈತರ ಬದುಕಿನಲ್ಲಿ ಚೆಲ್ಲಾಟವಾಡಿದ್ದಾರೆ. ಸಾಲದು ಎಂಬಂತೆ ಅಡುಗೆ ಸಿಲಿಂಡರ್ ಬೆಲೆ 1,150 ರೂ.ಗೆ ಏರಿಸಿರುವ ಇವರು ಸಾಮಾನ್ಯ ಜನ ಬದುಕಲೇ ಬಾರದು ಎಂಬಂತಹ ಪರಿಸ್ಥಿತಿ ಸೃಷ್ಟಿ ಮಾಡಿದ್ದಾರೆ. ಇನ್ನು ಹಿಂದಿನ 3 ಬಜೆಟ್‍ನಲ್ಲಿ ಮಂಡಿಸಿದ ಹಲವು ಭರವಸೆಗಳ ಪೈಕಿ ಶೇ.30ರಷ್ಟು ಭರವಸೆಗಳನ್ನೂ ಈಡೇರಿಸದ ಇವರು ಚುನಾವಣೆ ಇದೆ ಎಂಬ ಕಾರಣ ಪ್ರಚಾರ ಪಡೆಯಲು ಹುರುಳಿಲ್ಲದೆ ಘೋಷಣೆಗಳನ್ನು ಓದುತ್ತಿರುವುದು ಹಾಸ್ಯಾಸ್ಪದ’

-ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಸಚಿವ
..................
ದೂರದೃಷ್ಟಿಯ ಬಜೆಟ್:

‘ರೈತರ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡಿದೆ. ಎಲ್ಲ್ಲ ವರ್ಗದ ಜನತೆಯ ಹಿತ ಕಾಯುವ ಜನಪರ ಬಜೆಟ್ ಇದಾಗಿದೆ. ರೈತರಿಗೆ ಬಡ್ಡಿ ರಹಿತ ಅಲ್ಪಾವಧಿ ಸಾಲದ ಮಿತಿ 5ಲಕ್ಷ ರೂ.ಗೆ ಹೆಚ್ಚಿಸುವ ಮೂಲಕ ರೈತರ ಕಲ್ಯಾಣಕ್ಕೆ ಒತ್ತು ನೀಡಲಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ ‘ಭೂಸಿರಿ' ಎಂಬ ನೂತನ ಯೋಜನೆ. ರೈತರು, ಮಹಿಳೆಯರು ಮತ್ತು ಎಲ್ಲ ವರ್ಗದ ಜನರ ಹಿತ ಕಾಯುವ ಬಜೆಟ್ ಇದಾಗಿದೆ. ದೂರದೃಷ್ಟಿಯ, ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಬಜೆಟ್ ಇದಾಗಿದೆ’

-ಎಸ್.ಟಿ.ಸೋಮಶೇಖರ್, ಸಹಕಾರ ಸಚಿವ
..................

[ಬಿಎಸ್ ವೈ ಜೊತೆ ಸಮಾಲೋಚನೆ ನಡೆಸುತ್ತಿರುವ ಸಿಎಂ]

ಜನರೇ ಅವರ ಕಿವಿಗೆ ಹೂ ಇಡುವರು: ‘ನವ ಕರ್ನಾಟಕದ ನಿರ್ಮಾಣದ ಗುರಿಯೊಂದಿಗೆ ಇದು ಸರ್ವವ್ಯಾಪಿ, ಸರ್ವಸ್ಪರ್ಶಿ ಬಜೆಟ್. ಮಹಿಳೆಯರಿಗೆ ವರ್ಷಕ್ಕೆ 6ಸಾವಿರ ರೂ.ನೀಡುವುದು ಐತಿಹಾಸಿಕ. ಬಜೆಟ್ ಗಾತ್ರ 3ಲಕ್ಷ ಕೋಟಿ ರೂ.ಮೀರಿರುವುದು ದಾಖಲೆ. ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ಮಾಡುತ್ತಾರೆಂಬ ನಂಬಿಕೆ ಹುಸಿಯಾಗಿದೆ. ಬಜೆಟ್ ಮಂಡನೆ ಆರಂಭಕ್ಕೆ ಮುನ್ನವೇ ಕಿವಿಗೆ ಹೂವು ಇಟ್ಟುಕೊಂಡು ಬಂದವರಿಗೆ ನೈತಿಕತೆ ಇಲ್ಲ. ಪೂರ್ವಗ್ರಹಪೀಡಿತರಾದ ಸಿದ್ದರಾಮಯ್ಯ ಸಿಎಂ ಆಗಿ ಬಜೆಟ್ ಮಂಡಿಸುವ ವೇಳೆ ಯಾವುದಾದರೂ ವಿಪಕ್ಷ ಹೀಗೆ ನಡೆದುಕೊಂಡಿತ್ತೇ? ಹೀಗೆ ವರ್ತಿಸುವುದು ಔಚಿತ್ಯವೇ? ಇವರು ಹೊಸ ಪರಂಪರೆಗೆ ನಾಂದಿ ಹಾಡಿದ್ದು, ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ. ಬಜೆಟ್‍ನ ಪರಂಪರೆಯನ್ನು ಕಾಂಗ್ರೆಸ್‍ನವರು ಹಾಳು ಮಾಡಿದ್ದು, ಜನರೇ ಅವರ ಕಿವಿಗೆ ಹೂ ಇಡಲಿದ್ದಾರೆ’

-ಡಾ.ಕೆ.ಸುಧಾಕರ್, ಆರೋಗ್ಯ ಸಚಿವ
....................................
ಕಣ್ಕಟ್ಟಿನ ಬಜೆಟ್: ‘

ಅನುಷ್ಠಾನ ಯೋಗ್ಯವಲ್ಲದ, ಕಣ್ಕಟ್ಟಿನ ಘೋಷಣೆಗಳ ಪಟ್ಟಿಯ ಬಜೆಟ್ ಇದಾಗಿದ್ದು, ಬಿಜೆಪಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಬೊಮ್ಮಾಯಿಯವರಿಗೆ ಗೊತ್ತಿದೆ. ಹೀಗಾಗಿ ಕಾಟಾಚಾರದ ಘೋಷಣೆಗಳೊಂದಿಗೆ ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್‍ನಲ್ಲಿ ಎಲ್ಲಿಯೂ ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕ ದೂರದೃಷ್ಟಿಯ ಯೋಜನೆಗಳು ಕಾಣಿಸುವುದಿಲ್ಲ. ಎಲ್ಲ ಜನರಿಗೂ ಸಾಮಾಜಿಕ ನ್ಯಾಯ ಒದಗಿಸುವ ಪ್ರಯತ್ನವೂ ಬಜೆಟ್‍ನಲ್ಲಿ ಇಲ್ಲ. ಸಂಪ್ರದಾಯದಂತೆ ಬಸವರಾಜ ಬೊಮ್ಮಾಯಿ ವಿದಾಯ ಭಾಷಣ ಬಜೆಟ್ ರೂಪದಲ್ಲಿ ಮಂಡಿಸಿದ್ದಾರೆ. ಜನರನ್ನು ವಂಚಿಸುವ ಪ್ರಯತ್ನದಲ್ಲಿ ಬೊಮ್ಮಾಯಿ ಸರಕಾರ ಮತ್ತು ಬಿಜೆಪಿಗೆ ಯಶಸ್ಸು ದೊರೆಯದು’

-ಬಿ.ಕೆ.ಹರಿಪ್ರಸಾದ್, ವಿಧಾನ ಪರಿಷತ್ ವಿಪಕ್ಷ ನಾಯಕ

share
Next Story
X