ಮೈದಾನದೊಳಗೆ ನುಗ್ಗಿದ ಕ್ರಿಕೆಟ್ ಅಭಿಮಾನಿ; ಎಲ್ಲರ ಮನ ಗೆದ್ದ ಮುಹಮ್ಮದ್ ಶಮಿ

ಹೊಸದಿಲ್ಲಿ, ಫೆ.17: ಭಾರತದಲ್ಲಿ ಕ್ರಿಕೆಟ್‌ನ ಕ್ರೇಝ್ ಎಷ್ಟಿದೆಯೆಂದರೆ ಮೈದಾನದಲ್ಲಿ ತಮ್ಮ ನೆಚ್ಚಿನ ಆಟಗಾರನನ್ನು ನೋಡಲು ಅಭಿಮಾನಿಗಳು ಕೆಲವೊಮ್ಮೆ ಮಿತಿ ಮೀರಿ ವರ್ತಿಸುತ್ತಾರೆ. ಭಾರತ ಹಾಗೂ ಆಸ್ಟ್ರೇಲಿಯ ನಡುವೆ ಶುಕ್ರವಾರ ಆರಂಭವಾದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಅಭಿಮಾನಿಯೊಬ್ಬ ಮೈದಾನದೊಳಗೆ ನುಸುಳಿದ್ದಾನೆ. ಆಗ ತಕ್ಷಣವೇ ಎಚ್ಚೆತ್ತ ಭದ್ರತಾ ಅಧಿಕಾರಿಗಳು ಆತನನ್ನು ಹಿಡಿದರು. ಈ ವೇಳೆ ಭಾರತದ ವೇಗಿ ಮುಹಮ್ಮದ್ ಶಮಿ ಅವರ ವರ್ತನೆಯು ಸಾಮಾಜಿಕ ಮಾಧ್ಯಮದಲ್ಲಿ ಹಾಗೂ ದಿಲ್ಲಿಯ ಅರುಣ್ ಜೇಟ್ಲಿ ಸ್ಟೇಡಿಯಮ್‌ನಲ್ಲಿ ಹಾಜರಿದ್ದ ಅಭಿಮಾನಿಗಳ ಹೃದಯವನ್ನು ಗೆದ್ದಿದೆ.
ರಾಷ್ಟ್ರ ರಾಜಧಾನಿಯಲ್ಲಿ 5ಕ್ಕೂ ಅಧಿಕ ವರ್ಷಗಳ ನಂತರ ನಡೆದ ಪಂದ್ಯದ ಮೊದಲ ದಿನ ಅಭಿಮಾನಿಯೊಬ್ಬ ಮೈದಾನದೊಳಗೆ ನುಗ್ಗಿ ಕ್ರಿಕೆಟಿಗನತ್ತ ತೆರಳುವ ಮೊದಲೇ ಭದ್ರತಾ ಅಧಿಕಾರಿಗಳು ಆತನನ್ನು ಹಿಡಿದರು. ಆಗ ಆತ ಮೈದಾನದಲ್ಲಿ ಕುಳಿತುಕೊಳ್ಳಲು ಯತ್ನಿಸಿದಾಗ ಆತನನ್ನು ಎಳೆಯಲು ಆರಂಭಿಸಿದರು. ಇದನ್ನು ನೋಡಿದ ಶಮಿ ಭದ್ರತಾ ಸಿಬ್ಬಂದಿಯ ಹತ್ತಿರ ತೆರಳಿ ಏನೋ ಹೇಳಿದರು. ಮೈದಾನದೊಳಗೆ ನುಸುಳಿರುವ ಅಭಿಮಾನಿಯೊಂದಿಗೆ ಸ್ವಲ್ಪ ಮೃದುವಾಗಿ ವರ್ತಿಸುವಂತೆ ಶಮಿ ಸಲಹೆ ನೀಡಿರಬಹುದು ಎನ್ನಲಾಗಿದೆ.
ಪಂದ್ಯ ಸ್ವಲ್ಪ ಹೊತ್ತು ಸ್ಥಗಿತವಾದ ನಂತರ ಪುನರಾರಂಭವಾಯಿತು.
The guard thrashed the fan who entered the ground, then Shami showed his big heart#Shami #CricketTwitter #Cricket #INDvsAUS #BGT2023 #2ndTest pic.twitter.com/p8fhAgzd0h
— Sports Nest (@sportsnestbuzz) February 17, 2023
shami heart winning gesture.#Shami #INDvsAUSTest #BorderGavaskarTrophy #sehwag #ViratKohli pic.twitter.com/27VyDYB1HK
— Kshitiz Bhardwaj (@saurabh92273146) February 17, 2023