Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಬಡ್ಡಿ, ಚಕ್ರಬಡ್ಡಿ ಕೊಟ್ಟರೂ ತೀರದ ಸಾಲದ...

ಬಡ್ಡಿ, ಚಕ್ರಬಡ್ಡಿ ಕೊಟ್ಟರೂ ತೀರದ ಸಾಲದ ಚಕ್ರವ್ಯೂಹ; ಸಾಲ ಕೊಟ್ಟು ಮೊಬೈಲ್ ಮಾಹಿತಿಗೆ ಕನ್ನ ಹಾಕುವ ಆ್ಯಪ್ ಗಳು

ಎಚ್ಚರ ತಪ್ಪಿದರೆ ಬ್ಲ್ಯಾಕ್ ಮೇಲ್ ಗೆ ಬಲಿಯಾಗ್ತೀರಿ! ಹುಷಾರ್

17 Feb 2023 10:46 PM IST
share
ಬಡ್ಡಿ, ಚಕ್ರಬಡ್ಡಿ ಕೊಟ್ಟರೂ ತೀರದ ಸಾಲದ ಚಕ್ರವ್ಯೂಹ; ಸಾಲ ಕೊಟ್ಟು ಮೊಬೈಲ್ ಮಾಹಿತಿಗೆ ಕನ್ನ ಹಾಕುವ ಆ್ಯಪ್ ಗಳು
ಎಚ್ಚರ ತಪ್ಪಿದರೆ ಬ್ಲ್ಯಾಕ್ ಮೇಲ್ ಗೆ ಬಲಿಯಾಗ್ತೀರಿ! ಹುಷಾರ್

​ಆ ಯುವಕನಿಗೆ ಹಣದ ತುರ್ತು ಅವಶ್ಯಕತೆಯಿತ್ತು. ಸ್ನೇಹಿತರು  ಸಂಬಂಧಿಕರ ಬಳಿ ಈ ಹಿಂದೆಯೂ ಕೇಳಿದ್ದಾನೆ. ಮತ್ತೆ ಕೇಳಿ ಮುಜುಗರಕ್ಕೆ  ಒಳಗಾಗುವುದು ಇಷ್ಟವಿಲ್ಲ. ಏನು ಮಾಡುವುದು ಎಂದು ತಲೆಬಿಸಿಯಲ್ಲಿದ್ದವನಿಗೆ ಮೊಬೈಲ್ ನಲ್ಲಿ  ಆಪತ್ ಬಾಂಧವನಂತೆ ಕಂಡಿದ್ದು ಸುಲಭವಾಗಿ ಸಾಲ ಕೊಡ್ತೇವೆ ಎನ್ನುವ ಯಾವುದೋ ಒಂದು​ ಬಣ್ಣ ಬಣ್ಣದ​ ಆ್ಯಪ್. 

ಕೂಡಲೇ ಆ್ಯಪ್ ಇನ್ಸ್ಟಾಲ್ ಮಾಡಿ ಸಂಪರ್ಕಿಸಿದ. ಅವರು ಕೇಳಿದ ಎಲ್ಲ ಮಾಹಿತಿ, ದಾಖಲೆಗಳ ಪ್ರತಿಗಳನ್ನು ಕಳಿಸಿದ. ಅವರು ಕೇಳಿದ್ದಕ್ಕೆಲ್ಲ ಎಸ್ ಎಸ್ ಎಂದ. ಕೇಳಿದ ಒಟಿಪಿಗಳನ್ನು ಕೊಟ್ಟ. ತುರ್ತಾಗಿ ಬೇಕಾಗಿದ್ದ 2000 ಸಾಲ ಆ್ಯಪ್ ಮೂಲಕ ಅವನ ಖಾತೆಗೆ ಬಂತು. ಯಾರಲ್ಲೂ ಗೋಗರೆಯುವ ಗೋಜಿಲ್ಲದೆ ಕೂತಲ್ಲಿಗೆ ದುಡ್ಡು ಬಂತು ಅಂತ ನೆಮ್ಮದಿ ಆತನಿಗೆ ಆ ಖುಷಿ ಹೆಚ್ಚು ದಿನ ಇರಲೇ ಇಲ್ಲ. 

ಒಂದೇ ವಾರದಲ್ಲಿ ಬಡ್ಡಿ ಮಾತ್ರವಲ್ಲ ಚಕ್ರ ಬಡ್ಡಿ ಸಹಿತ ಹಣ ವಾಪಸಿಗೆ ಕಿರುಕುಳ ಶುರುವಾಯಿತು. 2000 ತೆಗೊಂಡಿದ್ದಕ್ಕೆ ೬೦೦೦ ರೂಪಾಯಿ ಮರಳಿಸಬೇಕು ಎಂಬ ಬೇಡಿಕೆ. ಅಷ್ಟೆಲ್ಲ ಕೊಡೋದಿಲ್ಲ ಅಂದಿದ್ದಕ್ಕೆ ಶುರುವಾಯಿತು ಅಸಲಿ ಆಟ. ಅದು  ಬ್ಲ್ಯಾಕ್ಮೇಲ್.

ಅವನ ಆಧಾರ್ ಕಾರ್ಡ್ ನಲ್ಲಿದ್ದ  ಚಿತ್ರವನ್ನು  ಅಶ್ಲೀಲ ಚಿತ್ರಗಳೊಂದಿಗೆ ಸೇರಿಸಿ, ಅವನ ಮೊಬೈಲ್ ನ ಕಾಂಟ್ಯಾಕ್ಟ್ ಲ್ಲಿರುವವರಿಗೆ ಕಳಿಸಲಾಯಿತು. ಎಲ್ಲರೂ ಇದೇನಪ್ಪ... ನಿನ್ನ ಇಂತ ಫೋಟೋಗಳೆಲ್ಲ ಬರ್ತಾ ಇವೆ ಅಂತ ಕೇಳೋರು.ಮಿತ್ರರು, ಬಂಧುಗಳ ಎದುರು ಮುಖ ತೋರಿಸಲಾಗದ ಸ್ಥಿತಿ. 

ತುರ್ತು ಅಗತ್ಯಕ್ಕೆ ಬೇಕಾದ ಬರೀ 2000 ರೂ. ಸಾಲಕ್ಕಾಗಿ ದೊಡ್ಡ ಆಪತ್ತಿನ ಸುಳಿಯಲ್ಲಿ ಸಿಲುಕಿ ಒದ್ದಾಡಬೇಕಾದ ಸಂಕಷ್ಟದ ಸ್ಥಿತಿ.ಇದು ಇಂದು ಆ ಒಬ್ಬ ಯುವಕನ ಕಥೆಯಲ್ಲ.ಸುಲಭ ಸಾಲದ ಆಸೆ ತೋರಿಸಿ, ಸಾಲ ಪಡೆದ ಬಳಿಕ, ಅವರು ಕೇಳಿದಷ್ಟು ಬಡ್ಡಿಯೊಂದಿಗೆ ಸಾಲ ವಾಪಸ್ ಮಾಡದಿದ್ದರೆ. ಹೀಗೆ ಮಾನ ಕಳೆಯುವ ಫೇಕ್ ಲೋನ್ ಆ್ಯಪ್ಗಳ ಬಹುದೊಡ್ಡ ಜಾಲವೇ ಇದೆ. 

ಅವು ಕೊಡುವುದು ಅತ್ಯಂತ ಸಣ್ಣ ಸಾಲ. ಆದರೆ ವಾಪಸ್ ಪಡೆಯುವುದು ಮಾತ್ರ ಕೊಟ್ಟದ್ದರ ದುಪ್ಪಟ್ಟಿಗಿಂತ ಹೆಚ್ಚು ಹಣ. 
ಅಷ್ಟೇ ಅಲ್ಲ, ಸಾಲ ಪಡೆದವರ ಮೊಬೈಲ್ ನಲ್ಲಿರುವ ಮಾಹಿತಿಗಳಿಗೇ ಕನ್ನ ಹಾಕ್ತಾರೆ.  ಕೇಳಿದಷ್ಟು ದುಡ್ಡು ಕೊಡದೇ ಹೋದರೆ ಸಾಲಗಾರರ  ಮಾನ ಕಳೆಯುವಂಥಮೆಸೇಜ್, ಅಶ್ಲೀಲ ಚಿತ್ರಗಳನ್ನು ಮೊಬೈಲ್ ಕಾಂಟ್ಯಾಕ್ಟ್ ನಲ್ಲಿ ಇರುವವರಿಗೆ  ಕಳಿಸಿ ಅನಾಹುತ ಮಾಡ್ತಾರೆ.  

ಎಷ್ಟೋ ಜನರು ಇಂಥ ಸ್ಥಿತಿಯನ್ನೆದುರಿಸಿದಾಗ ಮಾನಕ್ಕಂಜಿ, ದಿಕ್ಕು ತೋಚದೆ , ಇತರರಿಗೂ ಹೇಳಲಾಗದೆ
ಸ್ನೇಹಿತರು, ಸಂಬಂಧಿಗಳಿಗೆ ಮುಖ ತೋರಿಸಲಾರದೆ ​ಅನಾಹುತ ಮಾಡಿಕೊಂಡಿದ್ದೂ ಇದೆ. ತಕ್ಷಣ ಸಾಲ ಸಿಗುತ್ತದೆ,  ಯಾರದೋ ಮುಂದೆ ಕೈಯೊಡ್ಡಬೇಕಿಲ್ಲ,  ಬ್ಯಾಂಕುಗಳ ದಾಖಲೆ, ಪರಿಶೀಲನೆಗಳ ಜಂಜಾಟವಿಲ್ಲ ,ಎಂಬುದು ಕಷ್ಟಕಾಲದಲ್ಲಿ ಎಂಥದೋ ಭರವಸೆ ಮೂಡಿಸುತ್ತದೆ. ಆದರೆ ಅವು ತರುವ ಇಂಥ ಅಪಾಯಗಳ ಬಗ್ಗೆ ಎಚ್ಚರವಾಗದೇ ಇದ್ದಲ್ಲಿ, ಬದುಕೇ ಅಯೋಮಯವಾಗಲೂಬಹುದು.

ಈಚಿನ ವರ್ಷಗಳಲ್ಲಿ ಇದು ತೀರಾ ಹೆಚ್ಚಿದೆ. ಸುಶಿಕ್ಷಿತರೇ ದೊಡ್ಡ ಸಂಖ್ಯೆಯಲ್ಲಿ ಇದರಲ್ಲಿ ಸಿಲುಕುತ್ತಿದ್ದಾರೆ.  ಕೋವಿಡ್ ಸಂಕಟ ಕಾಲದ ದುರುಪಯೋಗ ಮಾಡಿಕೊಂಡ ಇಂಥ ವಂಚನೆಯ ಜಾಲ ಎಷ್ಟೋ ಜನರನ್ನು ಬೆದರಿಸಿ, ಕಿರುಕುಳ ಕೊಟ್ಟು, ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿ ಮಾಡಿಕೊಂಡಿದೆ. ಬಹಳಷ್ಟು ಆ್ಯಪ್ಗಳು ಅವುಗಳನ್ನು ಇನ್ಸ್ಟಾಲ್ ಮಾಡುವ ಮೊದಲು ಫೋನ್ ಬಳಕೆದಾರನ ಮೆಸೇಜ್, ಇಮೇಜಸ್, ಕಾಂಟ್ಯಾಕ್ಟ್, ಕಡೆಗೆ ಕ್ಯಾಮರಾಕ್ಕೂ ಪ್ರವೇಶ ಪಡೆಯಲು ಒಪ್ಪಿಗೆ ಕೇಳುತ್ತವೆ. 
ದುಡ್ಡಿನ ತುರ್ತಿನಲ್ಲಿದ್ದವರು ಎಲ್ಲದಕ್ಕೂ ಓಕೆ ಅಂದು ಬಿಡ್ತಾರೆ.  

ಒಮ್ಮೆ ಅದಕ್ಕೆ ಒಪ್ಪಿಗೆ ಕೊಟ್ಟ ಮೇಲೆ ಮುಗಿಯಿತು. ನಕಲಿ ಲೋನ್ ಆ್ಯಪ್ಗಳಂತೂ ದುಡ್ಡು ಕೊಡುವ ಮೊದಲು ಅತಿ ಹೆಚ್ಚು ಅನುಮತಿಗಳನ್ನು ಕೇಳುತ್ತವೆ.

ಇಂಥ ಕಾನೂನು ಬಾಹಿರ ಲೋನ್ ಆ್ಯಪ್‌ಗಳಲ್ಲಿ ಸಾಲ ಪಡೆದರೆ ಆ ಸ್ಮಾರ್ಟ್‌ಫೋನ್‌ಗಳಲ್ಲಿರುವ ಎಲ್ಲಾ ಕಾಂಟ್ಯಾಕ್ಟ್ ಗಳು ಆ್ಯಪ್ ಗಳ ಆಪರೇಟರ್‌ಗೆ ಹೋಗುತ್ತವೆ. ಸಾಲಗಾರ ಸಾಲ ಅಥವಾ ಸಾಲದ ಕಂತು ಪಾವತಿಸದೇ ಇದ್ದಾಗ, ಕೇಳಿದಷ್ಟು ಬಡ್ಡಿ ಕೊಡದೇ ಇದ್ದಾಗ ಅವು ತಮ್ಮ ಅಸಲೀ ಮುಖ ತೋರಿಸತೊಡಗುತ್ತವೆ. 

ಭಾರತೀಯ ರಿಸರ್ವ್ ಬ್ಯಾಂಕ್ ಭಾರತದಲ್ಲಿ ಆಪರೇಟ್ ಆಗುವ ಇಂಥ ಸುಮಾರು 600ರಷ್ಟು ಕಾನೂನು ಬಾಹಿರ ಲೋನ್ ಆ್ಯಪ್ ಗಳನ್ನು ಗುರುತಿಸಿದೆ. 

ಇಂಥ ಆ್ಯಪ್ಗಳ ವಿರುದ್ಧ ಸಾವಿರಾರು ದೂರುಗಳು ಬರುತ್ತಲೇ ಇರುತ್ತವೆ. 2021-22ರಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್  ಭಾರತದಾದ್ಯಂತ ಇಂತಹ ಸುಮಾರು 9,103 ಬ್ಯಾಂಕ್ ವಂಚನೆ ಪ್ರಕರಣಗಳನ್ನು ದಾಖಲಿಸಿದೆ.

ಹಿಗಿದ್ದೂ ಮೋಸಕ್ಕೊಳಗಾಗುವುದು ನಿಲ್ಲುತ್ತಿಲ್ಲ. ಯಾಕೆಂದರೆ ತುರ್ತಿನಲ್ಲಿ ಸಣ್ಣ ಸಾಲ ಸುಲಭವಾಗಿ ಸಿಕ್ಕಿಬಿಡುತ್ತದೆಂಬ ಆಸೆ 
ಬಹಳಷ್ಟು ಮಂದಿಯನ್ನು ಇಂಥ ಆ್ಯಪ್ಗಳ ಕಡೆಗೆ ಸೆಳೆಯುತ್ತದೆ.

ಆದರೆ ಹುಷಾರಾಗಿರುವುದು ಅಗತ್ಯ. ನಿಮ್ಮ ಮಾಹಿತಿಯನ್ನು ಬ್ಯಾಂಕ್ ಅಥವಾ ಹಣಕಾಸು ಕಂಪನಿ ಎಂದು ತೋರಿಸಿಕೊಳ್ಳುವ ಯಾವುದೋ ನಕಲಿ ಜಾಲದೊಂದಿಗೆ ಶೇರ್ ಮಾಡಿಕೊಳ್ಳಬೇಡಿ ಎಂದು ಅಧಿಕೃತ ಬ್ಯಾಂಕುಗಳು ಎಚ್ಚರಿಸುತ್ತಲೇ ಇರುತ್ತವೆ.

ಯಾವುದೇ ಅಂಥ ಆ್ಯಪ್ ಡೌನ್‌ಲೋಡ್ ಮಾಡುವ ಮೊದಲು ಅದು ಎಷ್ಟು ಅಧಿಕೃತ ಅನ್ನೋದನ್ನ ತಿಳಿದುಕೊಳ್ಳಬೇಕು.
ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಲೇಕೂಡದು.

ವಿಶ್ವಾಸಾರ್ಹವಲ್ಲದ ಆ್ಯಪ್ಗಳೊಂದಿಗೆ KYC ದಾಖಲೆಗಳನ್ನು ಎಂದಿಗೂ ಹಂಚಿಕೊಳ್ಳಬಾರದು. ನಿಮ್ಮ ಡೇಟಾವನ್ನು ಕದಿಯಬಹುದಾದ ಅನಧಿಕೃತ ಆ್ಯಪ್ಗಳನ್ನು ಬಳಸದಿರುವುದೇ ಬಹುದೊಡ್ಡ ಸುರಕ್ಷತಾ ಮಾರ್ಗ.

ಗೂಗಲ್ ಪ್ಲೇ ಸ್ಟೋರ್ನಲ್ಲಿ ಸುಲಭ ಸಾಲ ಕೊಡುವ ನೂರಾರು ಆ್ಯಪ್ಗಳನ್ನು ಕಾಣಬಹುದು. ಅವುಗಳಲ್ಲಿ ಆರ್‌ಬಿಐ ಅನುಮೋದಿತ ಆ್ಯಪ್‌ಗಳು ಕೆಲವೇ ಕೆಲವು ಮಾತ್ರ. ಉಳಿದೆಲ್ಲವೂ ನಕಲಿ ಆ್ಯಪ್ಗಳು.  ಅಂತಹ ಆ್ಯಪ್ಗಳಿಂದ ಸಾಲ ತೆಗೆದುಕೊಳ್ಳುವುದು ಅಪಾಯಕಾರಿ. ಅವು ಅತಿ ಹೆಚ್ಚಿನ ಬಡ್ಡಿದರ ಹಾಕುತ್ತವೆ. ಇಎಂಐ ಪಾವತಿಸಲು ಸಾಧ್ಯವಾಗದಿದ್ದಾಗ ಕಿರುಕುಳ ಕೊಡುತ್ತವೆ. 
ಕಡೆಗೆ ಬ್ಲ್ಯಾಕ್‌ಮೇಲ್ ಗೂ ಇಳಿಯುತ್ತವೆ. ಹಾಗಾಗಿ ಎಷ್ಟೇ ಕಷ್ಟವಿದ್ದರೂ ಇಂಥ ಆ್ಯಪ್ಗಳಿಂದ ದೂರವಿರುವುದೇ ಒಳ್ಳೆಯದು.

ನಿಮ್ಮ ಆದಾಯದ ಸ್ಥಿತಿಗತಿ ಕೇಳದೆ ಸುಲಭವಾಗಿ ನಿಮಗೆ ಲೋನ್ ಕೊಡುತ್ತೇವೆ ಎಂದು ಒಂದು ಆಪ್ ಹೇಳಿದರೆ ಆ ಆಪ್ ಬಗ್ಗೆ ಜಾಗರೂಕರಾಗಿರಿ. ಅದರ ಹತ್ತಿರಕ್ಕೂ ಸುಳಿಯಬೇಡಿ. ತುರ್ತು ಅಗತ್ಯಕ್ಕೆ ನಿಮ್ಮ ಆಪ್ತರಲ್ಲೇ ಸಹಾಯ ಕೇಳಿ. 

ಒಂದೊಮ್ಮೆ ಆ ಆಪ್ ಗಳ ಜಾಲದಲ್ಲಿ ಸಿಲುಕಿಯೇ ಬಿಟ್ಟರೆ ಮುಜುಗರ ಪಡದೆ ಆಪ್ತರಿಗೆ, ಸೈಬರ್ ಪೊಲೀಸರಿಗೆ ಕೂಡಲೇ ಮಾಹಿತಿ ಕೊಡಿ.

share
Next Story
X