Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕರಾವಳಿ ಮೀನುಗಾರಿಕೆಗೆ ಮರಣಶಾಸನ ಬರೆದೇ...

ಕರಾವಳಿ ಮೀನುಗಾರಿಕೆಗೆ ಮರಣಶಾಸನ ಬರೆದೇ ಬಿಟ್ಟಿತು ಈ ಬಜೆಟ್

ರಾಜಾರಾಂ ತಲ್ಲೂರುರಾಜಾರಾಂ ತಲ್ಲೂರು18 Feb 2023 8:30 AM IST
share
ಕರಾವಳಿ ಮೀನುಗಾರಿಕೆಗೆ ಮರಣಶಾಸನ ಬರೆದೇ ಬಿಟ್ಟಿತು ಈ ಬಜೆಟ್

ಮೂರು ವರ್ಷಗಳಿಂದ ಕರಾವಳಿ ಭಾಗದಲ್ಲಿ ಅಲ್ಲಲ್ಲಿ ಗುಪ್ಪೆಹಾಕಿದ ಯೋಜನಾ ಚಿಮ್ತನೆಗಳನ್ನು ಗಮನಿಸುತ್ತಾ ಬಂದವರಿಗೆ, ಈ ಬಾರಿಯ ಬಜೆಟನ್ನು ಗಮನಿಸಿದರೆ, ಅದು ಹೇಳುತ್ತಿರುವುದು ಏನೆಂದು ಸ್ಪಷ್ಟವಾಗುತ್ತದೆ. ಈ ಬಜೆಟ್‌ನಲ್ಲಿ ಕರಾವಳಿಯ ಮೀನುಗಾರಿಕೆಯ ಮರಣಶಾಸನಕ್ಕೆ ಅಂತಿಮ ಸಹಿ ಬಿದ್ದಿದೆ. ಕರಾವಳಿಯ ಸಮುದ್ರ, ಮೀನುಗಾರಿಕೆ, ಒಳನಾಡ ನದಿ ಮಾರ್ಗಗಳು, ಮೀನು ಲಾಜಿಸ್ಟಿಕ್ಸ್ ಮತ್ತು ರಫ್ತಿನ ಲಾಭಗಳೆಲ್ಲವೂ ಆನಿಪಾಲು ಮಾಡಲು ಸ್ವತಃ ಸರಕಾರವೇ ಅವನ್ನೆಲ್ಲ ಹರಿವಾಣದಲ್ಲಿಟ್ಟು ಅವರ ಪದತಲದಲ್ಲಿ ಒಪ್ಪಿಸಿರುವುದಕ್ಕೆ ಈ ಬಜೆಟ್ ಸಾಕ್ಷಿ.

ಇಲ್ಲಿ ಬಜೆಟ್ ಮಂಜೂರು ಮಾಡಿರುವ ಯೋಜನೆ ಗಳಲ್ಲಿ ಯಾವುದಕ್ಕೆಲ್ಲ ಸ್ಥಳೀಯ ಮೀನುಗಾರ ಸಮುದಾಯದ ಬೇಡಿಕೆ ಇತ್ತು ಎಂಬುದನ್ನು ಗಮನಿಸುತ್ತಾ ಬನ್ನಿ. ಇಲ್ಲಿನ ಹೆಚ್ಚಿನ ಯೋಜನೆಗಳು ಮೀನುಗಾರರು ಕಾಡಿ ಬೇಡಿ, ಒತ್ತಾಯಿಸಿ ಬೇಡಿಕೆ ಸಲ್ಲಿಸಿಹಠಮಾಡಿ ಪಡೆದದ್ದಲ್ಲ. ಬದಲಾಗಿ ಧುತ್ತೆಂದು ತನ್ನಿಂತಾನೆ ಅವತರಿಸಿದ್ದು; ಬಯಸದೇ ಬಂದವರ! ಇದೆಲ್ಲ ಹೇಗಾಯಿತು ಎಂದು ಯೋಚಿಸಿ. ಆಗ ನಿಮಗೆ ಇಲ್ಲಿನ ಮೀನುಗಾರ ಸಮುದಾಯದವರು ಇನ್ನು ಕೆಲವೇ ವರ್ಷಗಳಲ್ಲಿ ಕೇವಲ ಕಾರ್ಮಿಕರಾಗಿ ಉಳಿಯಲಿದ್ದು, ವ್ಯವಹಾರ ಮತ್ತು ಅದರ ಲಾಭಗಳು ಹೇಗೆ ಕಾರ್ಪೊರೇಟೀಕರಣದ ಭಾಗವಾಗಲಿವೆ ಎಂಬುದು ಅರ್ಥವಾಗುತ್ತದೆ.

ಇಲ್ಲಿ ಬಜೆಟ್ ಘೋಷಣೆಗಳು ಮತ್ತು ಅದರ ಫಲಿತಾಂಶ ತಾತ್ಪರ್ಯಗಳನ್ನು ವಿವರಿಸಿದ್ದೇನೆ.

ಘೋಷಣೆ: ಸೀಮೆಎಣ್ಣೆ ಬಿಟ್ಟು ಎರಡು ವರ್ಷಗಳಲ್ಲಿ ಎಲ್ಲ ಮೀನುಗಾರರೂ ಪೆಟ್ರೋಲ್/ಡೀಸೆಲ್ ಆಧರಿತ ಇಂಜಿನ್ ಅಳವಡಿಸಬೇಕು. ಅದಕ್ಕಾಗಿ ಖರೀದಿಗೆ 50 ಸಾವಿರ ಸಹಾಯಧನ.ಈ ವರ್ಷ ಅದಕ್ಕಾಗಿ 40ರೂ. ಕೋಟಿ ಮೀಸಲು (ಅಂದರೆ ಅಂದಾಜು 8,000 ಸೀಮೆ ಎಣ್ಣೆ  ಬೋಟುಗಳು). ಎರಡು ವರ್ಷ ಮಾತ್ರ ಸೀಮೆ ಎಣ್ಣೆ ಸಹಾಯಧನ ಮುಂದುವರಿಕೆ. ರಿಯಾಯಿತಿ ಡೀಸೆಲ್ ಮಿತಿ 2 ಲಕ್ಷ ಕಿಲೋ ಲೀಟರಿಗೆ ಹೆಚ್ಚಳ. ಸೀಮೆ ಎಣ್ಣೆ ಸಹಾಯಧನ ಆಃಖಿ ಮೂಲಕ ಪಾವತಿ.ಮಲ್ಪೆ ಮತ್ತೆರಡು ಕಡೆ ಬೋಟ್ ಬಿಲ್ಡಿಂಗ್ ಗಾರ್ಡ್? ಖಾಸಗಿಯವರಿಂದ.

ಫಲಿತಾಂಶ: ಈಗ ಸೀಮೆ ಎಣ್ಣೆ ನಂಬಿ ಮೀನುಗಾರಿಕೆ ನಡೆಸುತ್ತಿರುವ ಎಲ್ಲ ಮೀನುಗಾರರೂ ಇನ್ನು ಎರಡು ವರ್ಷದ ಒಳಗೆ ಪೆಟ್ರೋಲ್/ಡೀಸೆಲ್ ಆಧರಿತ ಮೋಟರ್ ಬೋಟ್ ಅಳವಡಿಸಿ ಮೀನುಗಾರಿಕೆ ಮಾಡಬಹುದು. ಮೂರರಿಂದ ಹದಿನೈದು ಲಕ್ಷ ಬೆಲೆಬಾಳಬಹುದಾದ ಈ ಬೋಟುಗಳಿಗೆ ಸರಕಾರ ಐವತ್ತು ಸಾವಿರ ಸಹಾಯಧನ ಕೊಡುತ್ತದೆ. ಸಾಧ್ಯ ಆಗಲಿಲ್ಲ ಎಂದಾದರೆ ತಲೆಬಿಸಿ ಬೇಡ. ಆನಿಗಳ ಹೊಸ ಕಂಪೆನಿಯಲ್ಲಿ ಕೆಲಸ ಖಾಲಿ ಇರುತ್ತದೆ.ಅಪ್ಪಿತಪ್ಪಿಯಾರಾದರೂ ಪೆಟ್ರೋಲ್/ಡೀಸೆಲ್ ಬೋಟ್ ಮಾಡಿಸುವುದಿದ್ದರೆ, ಅದನ್ನೂ ಅವರಿಗೇ ದುಡ್ಡು ತೆತ್ತುಮಾಡಿಸಿಕೊಳ್ಳಿ.

ಘೋಷಣೆ: ರಾಜ್ಯದ ಕರಾವಳಿಯಲ್ಲಿ 62 ಮೀನುಗಾರಿಕಾ FFPO ಗಳನ್ನು ಸ್ಥಾಪಿಸಲಾಗುತ್ತಿದೆ ಮತ್ತು 12,175ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸಲಾಗುತ್ತಿದೆ.

ಫಲಿತಾಂಶ: ಈ FFPO ಗಳು ಕೃಷಿ FPOಗಳಂತೆಯೇ ಕಾರ್ಪೊರೇಟ್ ಸಂಸ್ಥೆಗಳಿಗೆ ಮಾನವ ಸಂಪನ್ಮೂಲಗಳನ್ನು ನಿಯಂತ್ರಿಸಿ, ಮುಂಗೈಗೆ ತಾಗಿಸುವ ಲಾಭದ ಆಸೆಗೆ ಶ್ರಮ ಹಾಕುವುದಕ್ಕೆ ಬಳಸಿಕೊಂಡು, ತಮ್ಮ ವ್ಯಾಪಾರ ಕುದುರಿಸಿಕೊಳ್ಳುವುದಕ್ಕೆ ಇರುವ ಸುಗಮ ಹಾದಿಗಳು. ಮೀನುಗಾರರು ಇನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರು.

ಘೋಷಣೆ: ಮೀನುಗಾರರ ದೋಣಿಗಳಿಗೆ 17ಕೋಟಿ ರೂ. ವೆಚ್ಚದಲ್ಲಿ GPS ಅಳವಡಿಕೆ. ಆಳ ಸಮುದ್ರದಲ್ಲಿ ಸಂಕಷ್ಟಕ್ಕೆ ಒಳಗಾದರೆ ಸುಲಭ ಪತ್ತೆ.

ಫಲಿತಾಂಶ: ಇದು ಎರಡಲಗಿನ ಕತ್ತಿ. ಹೇಗೆ ಮೀನುಗಾರರು ಎಲ್ಲಿದ್ದಾರೆಂದು ಪತ್ತೆ ಆಗುತ್ತದೆಯೋ, ಅದೇ ರೀತಿಯಲ್ಲಿ ಸಾಂಪ್ರದಾಯಿಕ ಮೀನುಗಾರರ ಮೀನುಗಾರಿಕೆ ಸಂಬಂಧಿ ಸಾಂಪ್ರದಾಯಿಕ ಚಲನವಲನ ಕೌಶಲ ಡೇಟಾಗಳು ಆಸಕ್ತಿ ಉಳ್ಳವರ ಪಾಲು.ಬಿಗ್ಡೇಟಾ ಈಗ ಮಹಾಸಂಪತ್ತು.

ಘೋಷಣೆ: ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಸಾಂಪ್ರದಾಯಿಕ ಮೀನುಗಾರರಿಗೆಂದು ಕೃತಕ ಬಂಡೆಗಳನ್ನು (artificial reef) ಸ್ಥಾಪಿಸಲಾಗುವುದು! ಕರಾವಳಿ ಪ್ರದೇಶದಲ್ಲಿ ಕಾಂಡ್ಲ ಅರಣ್ಯೀಕರಣ.

ಫಲಿತಾಂಶ: ಸಮುದ್ರ ಕೊರೆತ ಎಂದು ದಂಡೆಗೆ ಬಂಡೆಗಳನ್ನು ಹಾಕಿದ ಬಳಿಕ, ಈಗ ಸಮುದ್ರದಲ್ಲಿ ಕೃತಕ ಬಂಡೆಗಳ ಸ್ಥಾಪನೆ. ಸಮುದ್ರ ತೀರದಲ್ಲಿ ಕಾಂಡ್ಲವನ. ಹಾಗಾಗಿ ಇನ್ನು ಆಳಕಡಲಿಗೆಲ್ಲ ನೀವು ಹೋಗುವುದು ಬೇಡ ಪಾಪ. ಅದಕ್ಕೆ ಬೇರೆ ಜನ ಬರಲಿದ್ದಾರೆ. ಇನ್ನು ಈ ಕೃತಕ ಬಂಡೆಗಳ ರೀಫ್, ಸಮುದ್ರದ ತಟದ ಬಳಿಯಲ್ಲಿ ಹೂಳೆತ್ತಿ, ಸರಕು ಬೋಟುಗಳುಒಳನಾಡನದಿ ಮಾರ್ಗ ಹಿಡಿಯಲು ಮಾಡಿದ ಬೇಕೂಡ ಆಗಿರಬಹುದು- ಕಾದುನೋಡಿ. ಕಲ್ಲಿದ್ದಲು ಬಟು ಹಾದು ಹೋಗುವಾಗ ಅಲ್ಲೇಂಡೆಯ ಮೇಲೆ ಸಾಂಪ್ರದಾಯಿಕ ಗಾಳಹಾಕಿ ಕುಳಿತು ಬೋಟನಲ್ಲಿರುವವರಿಗೆ ಹಾಯ್-ಬಾಪ್ ಹೇಳಿದರಾಯಿತು!!

ಘೋಷಣೆ: 8 ಮೀನುಗಾರಿಕಾ ಬಂದರುಗಳಲ್ಲಿ ಹೂಳೆತ್ತಿ, ಮೀನುಗಾರಿಕಾ ದೋಣಿಗಳ ಸುಗಮ ಸಂಚಾರಕ್ಕೆ ಅವಕಾಶ. ಗುರುಪುರ ಮತ್ತು ನೇತ್ರಾವತಿ ನದಿ ಪಾತ್ರದಲ್ಲಿ ಜಲಸಾರಿಗೆ ಸಂಪರ್ಕಕ್ಕಾಗಿ ಖಾಸಗಿ ಸಹಭಾಗಿತ್ವದಲ್ಲಿ ಬಾರ್ಜ್ ಸೇವೆ. ಮಂಗಳೂರು ಮತ್ತು ಹಂಗಾರಕಟ್ಟೆಯಲ್ಲಿ ಲೈಟ್ ಕಾರ್ಗೋ ಟ್ರಾನ್ಸ್‌ಪೋರ್ಟ್ ಬೋಟ್ ಸೇವೆಗಳ ಆರಂಭ. ಮಂಗಳೂರು, ಕಾರವಾರ, ಗೋವಾ, ಮುಂಬೈ ಸಮುದ್ರಯಾನಕ್ಕೆ ಖಾಸಗಿ ಸಹಭಾಗಿತ್ವದಲ್ಲಿ ವಾಟರ್ ವೇ ಅಭಿವೃದ್ಧಿ.

ಫಲಿತಾಂಶ: ಪೆಟ್ರೋಲ್ ಡೀಸೆಲ್ ಬೋಟುಗಳ ಚಲನವಲನ ಮಾತ್ರವಲ್ಲದೇ ಕಲ್ಲಿದ್ದಲು ಸಾಗಾಟಕ್ಕೆ ನದಿ-ಸಮುದ್ರ ಸೇರುವ ಭಾಗಗಳಲ್ಲಿ ಹೂಳೆತ್ತಿ, ಸಾಗಾಟ ಸುಗಮ ಮಾಡಿಕೊಡುವುದು, ಲೈಟ್ ಕಾರ್ಗೋ ಟ್ರಾನ್ಸ್ ಪೋರ್ಟ್ ಎಂದರೆ ಅದರ ಅರ್ಥ ಕಲ್ಲಿದ್ದಲು ಸಾಗಾಣೆೆ. ವಾಟರ್‌ವೇ ಅಭಿವೃದ್ಧಿ ಎಂದರೆ, ಆಸ್ಟ್ರೇಲಿಯಾ ಮತ್ತಿತರ ಕಡೆಗಳಿಂದ ಬರುವ ಆಮದು ಕಲ್ಲಿದ್ದಲು ಮುಂಬ್ಯೆ-ಗುಜರಾತ್‌ಗಳಲ್ಲಿ ಇಳಿಸಿ, ಅಲ್ಲಿಂದ ಸಣ್ಣ ಬೋಟುಗಳ ಮೂಲಕಸಮುದ್ರದಿಂದಒಳನಾಡು ನದಿ ಮಾರ್ಗದಲ್ಲಿ ಗಮ್ಯ ಸ್ಥಾನಗಳಿಗೆ (ಬಳ್ಳಾರಿ, ಪಡುಬಿದ್ರೆ) ತಲುಪಿಸಲು ಸರಕಾರಿ ಖರ್ಚಿನಲ್ಲಿ ವ್ಯವಸ್ಥೆ.ಇಲ್ಲದಿದ್ದರೆ ಗುರುಪುರದಂತಹ ನದೀಮಾರ್ಗದಲ್ಲಿ ಸಂಚಾರಕ್ಕೆ ಬೇಡಿಕೆ ಸಲ್ಲಿಸಿದವರು ಯಾರು?!

ಘೋಷಣೆ: ಕಂಬದ ಕೋಣೆಯಲ್ಲಿ ಮೀನು ರಫ್ತು ಮೌಲ್ಯವರ್ಧನೆಗಾಗಿ ಖಾಸಗಿ ಸಹಭಾಗಿತ್ವದಲ್ಲಿ ಸೀಫುಡ್ ಪಾರ್ಕ್.

ಫಲಿತಾಂಶ: ಆನಿ ಕಂಪನಿಗಳು FFPOಗಳ ಮೂಲಕ ಹಿಡಿಸಿದ ಮೀನುಗಳನ್ನು ಸೀಫುಡ್ ಪಾರ್ಕಿನಲ್ಲಿ ಮೌಲ್ಯವರ್ಧನೆ ಮಾಡಿಸಿ, ರಫ್ತು ಮಾಡುವುದಕ್ಕೆ ವ್ಯವಸ್ಥೆ.

ಘೋಷಣೆ: ಅಂಕೋಲಾದ ಕೇಣಿ ಯಲ್ಲಿ 30 MTPA ಸಾಮರ್ಥ್ಯದ ಮತ್ತು ಪಾವಿನ ಕುರ್ವೆಯಲ್ಲಿ 14 ಒಖಿಂ ಬಂದರುಗಳು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಗೊಳ್ಳಲಿವೆ. ಮಾಜಾಳಿ ಮೀನುಗಾರಿಕಾ ಬಂದರು ಕೇಂದ್ರ ಯೋಜನೆಯಡಿ ಅಭಿವೃದ್ಧಿಗೊಳ್ಳಲಿದೆ.

ಫಲಿತಾಂಶ: ಖಾಸಗಿ ಕಾರ್ಪೋರೇಟ್ ಮೀನುಗಾರಿಕೆಗೆ ವ್ಯವಸ್ಥೆ.

ಘೋಷಣೆ: ಬೈಂದೂರಿನಲ್ಲಿ ಮರೀನಾ ಮೂಲಕ ಪ್ರವಾಸೋದ್ಯಮಕ್ಕೆ ಖಾಸಗಿ ಸಹಭಾಗಿತ್ವ. ಅಖ ಮಾನದಂಡಗಳನ್ನು ಸಡಿಲಗೊಳಿಸಲು ಕೇಂದ್ರ ಒಪ್ಪಿರುವ ಹಿನ್ನೆಲೆಯಲ್ಲಿ, ಕರಾವಳಿ ವಲಯ ನಿರ್ವಹಣೆ ಯೋಜನೆ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ.

ಫಲಿತಾಂಶ: ಖಾಸಗಿ ಪ್ರವಾಸೋದ್ಯಮದ ಅಬ್ಬರ. ಸ್ಥಳೀಯ ಮೀನುಗಾರರಿಗೆ ಅಲ್ಲಿನ ಬಾರ್, ರೆಸ್ಟೋರೆಂಟ್ ಇತ್ಯಾದಿಗಳಲ್ಲಿ ಕಾರ್ಮಿಕ ಉದ್ಯೋಗದ ಅವಕಾಶ. (ಅಂದಹಾಗೆ, ಮಲ್ಪೆಯಲ್ಲಿ ಇದೇ ಮರೀನಾವನ್ನು ಪ್ರತಿಭಟಿಸಿ ಓಡಿಸಿದವರು ಈಗ ಏನು ಹೇಳುತ್ತಾರೆ ಎಂಬ ಬಗ್ಗೆ ನನಗೆ ಕುತೂಹಲ ಇದೆ.)

ಈ ಎಲ್ಲ ‘‘ಅದ್ಭುತ ಕೊಡುಗೆಗಳು’’ ಮೀನುಗಾರರಿಗೆ ಈ ಬಜೆಟ್ ಮೂಲಕ ಸಿಕ್ಕರೆ ಇದರ ಫಲಿತಾಂಶ - ಇನ್ನು ಐದು ಹತ್ತು ವರ್ಷಗಳಲ್ಲಿ, ಸಾಂಪ್ರದಾಯಿಕ ಮೀನು ಗಾರರೆಲ್ಲ ಯಾರದ್ದೋ ಸಂಬಳಕ್ಕೆ ದುಡಿಯುವ ಕುಶಲ-ಅರೆಕುಶಲ ಕಾರ್ಮಿಕರಾಗುವುದು ಮತ್ತು ಸಮುದ್ರ ತೀರದ ಒಡೆತನವನ್ನು ಕಾರ್ಪೊರೇಟ್ ಕಂಪೆನಿಗಳಿಗೆ, ಪ್ರವಾಸೋದ್ಯಮ ಕಂಪನಿಗಳಿಗೆ ಬಿಟ್ಟುಕೊಡುವುದು.

ಒಂದು ಕಾಲದಲ್ಲಿ MRPL ಪೈಪ್‌ಲೈನ್ ಹಾದುಹೋಗುತ್ತದೆನ್ನುವ ಕಾರಣಕ್ಕೆ ಇಡೀ ಜಿಲ್ಲೆಯನ್ನು ಒಂದಾಗಿಸಿ ಪ್ರತಿಭಟಿಸಿದ ನನ್ನ ಮೀನುಗಾರ ಸಹೋದರರು ಈ ಪ್ರಮಾಣದಲ್ಲಿ ಕಾರ್ಪೊರೇಟ್ ಆಕ್ರಮಣ ಪರೋಕ್ಷ ಹಾದಿಯಲ್ಲಿ ನಡೆದಿರುವಾಗ ಯಾಕೆ ಮೌನಧಾರಣ ಮಾಡಿದ್ದಾರೋ ಅರ್ಥವಾಗುತ್ತಿಲ್ಲ. ನನ್ನ ಪ್ರಕಾರ, ತೀರಾ ಸೌಮ್ಯ ಮಾತುಗಳಲ್ಲಿ ಹೇಳಬೇಕಿದ್ದರೆ, ಈ ಬಜೆಟ್ ಘೋಷಣೆಗಳು ಕರಾವಳಿ ಮೀನುಗಾರಿಕೆಗೆ ಮರಣಶಾಸನ.

share
ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
Next Story
X