ಕಾಪು: ಸ್ಕೂಟರ್‌ನಲ್ಲಿಟ್ಟಿದ್ದ ಚಿನ್ನದ ಸರ ಕಳವು

ಕಾಪು, ಫೆ.18: ಪಾರ್ಕ್ ಮಾಡಿದ್ದ ಸ್ಕೂಟರ್‌ನಲ್ಲಿಟ್ಟಿದ್ದ ಚಿನ್ನದ ಸರ ಕಳವು ಆಗಿರುವ ಘಟನೆ ಫೆ.17ರಂದು ಸಂಜೆ ವೇಳೆ ಕಾಪು ಮೋರ್ ಅಂಗಡಿ ಸಮೀಪ ನಡೆದಿದೆ.
ಕುಂಜಿಬೆಟ್ಟು ಸಗ್ರಿಯ ಪೂಜಾ ಎಂಬವರು ಕಾಪುವಿಗೆ ಬಂದು, ಸ್ಕೂಟರನ್ನು ಪಾರ್ಕ್ ಮಾಡಿ ಅಂಗಡಿಗೆ ತೆರಳಿದ್ದರು. ಈ ವೇಳೆ ಕಳ್ಳರು, ಸ್ಕೂಟರ್ ಸೀಟಿನ ಲಾಕ್ ಓಪನ್ ಮಾಡಿ ಒಳಗೆ ಇಟ್ಟಿದ್ದ 16 ಗ್ರಾಂ ತೂಕದ ಚಿನ್ನದ ಸರವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಕಳವಾದ ಸೊತ್ತಿನ ಮೌಲ್ಯ ಸುಮಾರು 48,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story