ಉಪ್ಪಿನಂಗಡಿ: MEIF ವತಿಯಿಂದ SSLC ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ

ಉಪ್ಪಿನಂಗಡಿ: ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ದ.ಕ, ಉಡುಪಿ ಜಿಲ್ಲೆ (MEIF) ವತಿಯಿಂದ ಉಭಯ ಜಿಲ್ಲೆಗಳಲ್ಲಿ ಹಮ್ಮಿಕೊಂಡ ಸರಣಿ SSLC ತರಬೇತಿ ಆಂದೋಲನದ 6ನೇ ಕಾರ್ಯಾಗಾರವು ಉಪ್ಪಿನಂಗಡಿಯ ಅರಫಾ ವಿದ್ಯಾಕೇಂದ್ರದಲ್ಲಿ ಶನಿವಾರ ನಡೆಯಿತು.
ಅರಫಾ ವಿದ್ಯಾ ಕೇಂದ್ರದ ಅಧ್ಯಕ್ಷ ಕೆ. ಪಿ.ಎ. ಸಿದ್ದೀಕ್ ಹಾಜಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. MEIF ಈಸ್ಟ್ ಝೋನ್ ಉಪಾಧ್ಯಕ್ಷ ಕೆ.ಎಂ. ಮುಸ್ತಫಾ ಸುಳ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಗಾರದ ಕನ್ವೀನರ್ ಶೇಕ್ ರಹ್ಮತುಲ್ಲಾಹ್ ಬುರೂಜ್ ಸ್ವಾಗತಿಸಿ, MEIF ಮ್ಯಾನೇಜರ್ ಮುಹಮ್ಮದ್ ಸವಾದ್ ವಂದಿಸಿದರು.
ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸಿ, ಪರೀಕ್ಷೆ ಎದುರಿಸುವ ವಿಧಾನಗಳು ಹಾಗೂ ವಿಶೇಷವಾಗಿ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಸರಳ ಕಲಿಕಾ ಕಲೆಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ರಾಷ್ಟ್ರೀಯ ತರಬೇತಿದಾರ ಪ್ರೊ.ರಾಜೇಂದ್ರ ಭಟ್ ಅವರು ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯಾಗಾರ ನೆರವೇರಿಸಿದರು.
ಮಂಶರ್ ಪಾರ ಮೆಡಿಕಲ್ ಕಾಲೇಜು ಇದರ ಪ್ರಾಂಶುಪಾಲ ಹೈದರ್ ಮಾರ್ಧಲ,ಅರಫಾ ವಿದ್ಯಾ ಕೇಂದ್ರದ ಸಂಚಾಲಕ ಶರೀಕ್, ಪ್ರಾಂಶುಪಾಲ ಹಬೀಬ್ ರಹ್ಮಾನ್, ಅರಫಾ ಶಾಬಿಕ್ ಉಪಸ್ಥಿತರಿದ್ದರು. ಶಿಕ್ಷಕಿ ಆರಿಫಾ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಾಗಾರದಲ್ಲಿ ಉಪ್ಪಿನಂಗಡಿ, ಬೆಳಂದೂರು, ಬೆಳ್ತಂಗಡಿ, ಆತೂರು ಪ್ರದೇಶಗಳ ಸುಮರು 200ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಉಪ್ಪಿನಂಗಡಿಯ ಅರಫಾ ವಿದ್ಯಾ ಕೇಂದ್ರವು ವಹಿಸಿತ್ತು.






.jpeg)


