ದ್ವಿತೀಯ ಟೆಸ್ಟ್: ಆಸ್ಟ್ರೇಲಿಯ ವಿರುದ್ದ ಭಾರತ 262 ರನ್ ಗೆ ಆಲೌಟ್
ಅಕ್ಷರ್ ಪಟೇಲ್ ಅರ್ಧಶತಕ, ಲಿಯೊನ್ ಗೆ 5 ವಿಕೆಟ್ ಗೊಂಚಲು

ಅಕ್ಷರ್ ಪಟೇಲ್ ಅರ್ಧಶತಕ, ಲಿಯೊನ್ ಗೆ 5 ವಿಕೆಟ್ ಗೊಂಚಲು
ಹೊಸದಿಲ್ಲಿ, ಫೆ.18: ಆಲ್ ರೌಂಡರ್ ಅಕ್ಷರ್ ಪಟೇಲ್ ಅಮೋಘ ಬ್ಯಾಟಿಂಗ್(74 ರನ್, 115 ಎಸೆತ)ನೆರವಿನಿಂದ ಆತಿಥೇಯ ಭಾರತ ತಂಡ ಆಸ್ಟ್ರೇಲಿಯ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 83.3 ಓವರ್ ಗಳಲ್ಲಿ 262 ರನ್ ಗೆ ಆಲೌಟಾಗಿದೆ.
ಭಾರತವು ಒಂದು ಹಂತದಲ್ಲಿ 139 ರನ್ ಗಳಿಸುವಷ್ಟರಲ್ಲಿ 7 ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ಜೊತೆಯಾದ ಅಕ್ಷರ್ ಹಾಗೂ ಆರ್.ಅಶ್ವಿನ್(37 ರನ್, 71 ಎಸೆತ)8ನೇ ವಿಕೆಟಿಎಗ 114 ರನ್ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು.
262 ರನ್ ಗೆ ಆಲೌಟಾದ ಭಾರತ ಮೊದಲ ಇನಿಂಗ್ಸ್ ನಲ್ಲಿ 1 ರನ್ ಹಿನ್ನಡೆ ಕಂಡಿತು.
ಆಸ್ಟ್ರೇಲಿಯದ ಪರ ಸ್ಪಿನ್ನರ್ ಲಿಯೊನ್(5-67)ಐದು ವಿಕೆಟ್ ಗೊಂಚಲು ಪಡೆದರೆ, ಮುರ್ಫಿ(2-53) ಹಾಗೂ ಕುನ್ಹೆಮನ್(2-72)ತಲಾ 2 ವಿಕೆಟ್ ಗಳನ್ನು ಉರುಳಿಸಿದರು.
Next Story