ಚುನಾವಣಾ ಆಯೋಗವು ಪ್ರಧಾನಿಯ ಗುಲಾಮ: ಉದ್ಧವ್ ಠಾಕ್ರೆ ಕಿಡಿ

ಹೊಸದಿಲ್ಲಿ: ಶಿವಸೇನೆ ಪಕ್ಷದ ಹೆಸರು ಮತ್ತು ಅದರ ಚಿಹ್ನೆಯನ್ನು ತಮ್ಮ ಎದುರಾಳಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣಕ್ಕೆ ಸೇರುತ್ತದೆ ಎಂದು ಚುನಾವಣಾ ಆಯೋಗ ಘೋಷಿಸಿದ ಬೆನ್ನಲ್ಲೇ ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದ್ದಾರೆ.
"ಚುನಾವಣಾ ಆಯೋಗ, ಪ್ರಧಾನಿ ಮೋದಿಯ ಗುಲಾಮ, ಈ ಹಿಂದೆ ಯಾವತ್ತೂ ನಡೆಯದೇ ಇರುವಂತಹದ್ದನ್ನು ಮಾಡಿದೆ," ಎಂದು ತಮ್ಮ ನಿವಾಸ ಮಾತೋಶ್ರೀ ಹೊರಗೆ ಸೇರಿದ್ದ ತಮ್ಮ ಅಪಾರ ಬೆಂಬಲಿಗರನ್ನುದ್ದೇಶಿಸಿ ಉದ್ಧವ್ ಮಾತನಾಡಿದರು
"ಪಕ್ಷದ ಚಿಹ್ನೆಯನ್ನು ಕದಿಯಲಾಗಿದೆ ಮತ್ತು ಕಳ್ಳನಿಗೆ ಪಾಠ ಕಲಿಸಬೇಕಿದೆ," ಎಂದು ಹೇಳುವ ಮೂಲಕ ಉದ್ಧವ್ ಅವರು ಮಹಾರಾಷ್ಟ್ರ ಸಿಎಂ ಅವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
Next Story