ಉಡುಪಿ: ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನಲ್ಲಿ ವಾಚಸ್ ಪ್ರಿವೀವ್ ಇವೆಂಟ್

ಉಡುಪಿ, ಫೆ.18: ಉಡುಪಿಯ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನಲ್ಲಿ ಶನಿವಾರ ನಡೆದ ವಾಚಸ್ ಪ್ರಿವೀವ್ ಇವೆಂಟ್ ಕಾರ್ಯಕ್ರಮದಲ್ಲಿ ನವೀನ ಮಾದರಿಯ ಬ್ರಾಂಡೆಡ್ ವಾಚ್‌ಗಳನ್ನು ಅನಾವರಣಗೊಳಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಸದಸ್ಯ ಮಿಥುನ್ ಆರ್.ಹೆಗ್ಡೆ, ಉದ್ಯಮಿ ಇಕ್ಬಾಲ್ ಸಂಶುದ್ದೀನ್ ಕಟಪಾಡಿ, ಹೊಟೇಲ್ ಉದ್ಯಮಿ ಚೇತನ್ ಶೆಟ್ಟಿ ವಿವಿಧ ಕಂಪೆನಿಗಳ ಹೊಸ ವಾಚ್‌ಗಳನ್ನು ಬಿಡುಗಡೆಗೊಳಿಸಿ ಶುಭಹಾರೈಸಿದರು.
ಸುಲ್ತಾನ್ ಉಡುಪಿ ಶಾಖಾ ಮೆನೇಜರ್ ಮುಹಮ್ಮದ್ ಅಜ್ಮಲ್ ಸ್ವಾಗತಿಸಿದರು. ಸೇಲ್ಸ್ ಮೆನೇಜರ್ ಇಲ್ಯಾಸ್ ವಯನಾಡ್, ವಾಚ್ ಇಂಚಾರ್ಜ್ ಅಬ್ದುಲ್ ರಶೀದ್ ಮುಲ್ಕಿ, ಅಸಿಸ್ಟೇಂಟ್ ಸೇಲ್ಸ್ ಮನೇಜರ್ ಮುಹಮ್ಮದ್ ಶಾಮೀಲ್ ಖಾದರ್, ಸಿಬ್ಬಂದಿ ವರ್ಗ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.






.jpeg)



