ಕಾರ್ಕಳ : ಬೆಕ್ಕನ್ನು ರಕ್ಷಿಸಲು ಹೋಗಿ ಬಾವಿಗೆ ಬಿದ್ದ ವ್ಯಕ್ತಿಯ ರಕ್ಷಣೆ

ಕಾರ್ಕಳ : ಬಾವಿಯೊಳಗೆ ಬಿದ್ದ ಬೆಕ್ಕನ್ನು ರಕ್ಷಿಸಲು ಮುಂದಾದ ವ್ಯಕ್ತಿಯು ಹಗ್ಗ ತುಂಡಾಗಿ ಬಾವಿಯೊಳಗೆ ಬಿದ್ದು ಅಪಾಯಕ್ಕೆ ಸಿಲುಕಿದ ಘಟನೆ ನಂದಳಿಕೆ ಗ್ರಾಮದ ಕಕ್ಕೆಪದವು ಸಮೀಪ ನಡೆದಿದೆ.
ಬೆಳ್ಮಣ್ ಜಂತ್ರ ನಿವಾಸಿ ಭೋಜ ಎಂಬವರು ತಮ್ಮ ಪರಿಚಯಸ್ಥರ ಮನೆಯ ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸುವ ಸಲುವಾಗಿ ಸೀರೆಯನ್ನು ಜೋಡಿಸಿ ಬಾವಿಗೆ ಇಳಿದ ಸಂದರ್ಭ ಸೀರೆ ತುಂಡಾಗಿ ಬಾವಿಗೆ ಬಿದ್ದಿದ್ದಾರೆ. ನಂತರ ಬಾವಿಯಿಂದ ಮೇಲಕ್ಕೆ ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇವರನ್ನು ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿ ಬಾವಿಗೆ ಇಳಿದು ಭೋಜರನ್ನು ಸುರಕ್ಷಿತವಾಗಿ ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಠಾಣಾಧಿಕಾರಿ ಮೋನಿಷ್, ಚಂದ್ರಶೇಖರ್, ಕೇಶವ್, ನಿತ್ಯಾನಂದ, ಸಂಜಯ್ ಪಾಲ್ಗೊಂಡಿದ್ದರು. ಸಮಾಜ ಸೇವಕ ಕೆದಿಂಜೆ ಸುಪ್ರೀತ್ ಶೆಟ್ಟಿ, ಹರಿ ಆಚಾರ್ಯ ಹಾಗೂ ಸ್ಥಳೀಯರು ಸಹಕರಿಸಿದರು.
Next Story