ದೇಶದ ಅಭಿವೃದ್ಧಿ, ಬದುಕನ್ನು ರೂಪಿಸುವಲ್ಲಿ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸುತ್ತಾ ಬಂದಿದೆ: ಎಸ್.ಸಡಗೋಪನ್
ಕರ್ಣಾಟಕ ಬ್ಯಾಂಕ್ ಶತಮಾನೋತ್ಸವಕ್ಕೆ ಚಾಲನೆ ಮತ್ತು ಸಂಸ್ಥಾಪಕರ ದಿನಾಚರಣೆ

ಮಂಗಳೂರು: ದೇಶದ ಅಭಿವೃದ್ಧಿಯಲ್ಲಿ ನಮ್ಮ ಬದುಕನ್ನು ರೂಪಿಸುವಲ್ಲಿ ತಂತ್ರಜ್ಞಾನ ಪ್ರಾಚೀನ ಕಾಲದಿಂದಲೂ ಬೆಳೆದು ಬಂದ ಜ್ಞಾನದ ಪರಂಪರೆ ವಿಶಿಷ್ಟ ಪಾತ್ರವನ್ನು ನಿರ್ವಹಿಸುತ್ತಾ ಬಂದಿದೆ ಎಂದು ಐಐಟಿ ಬೆಂಗಳೂರಿನ ವಿಶ್ರಾಂತ ನಿರ್ದೇಶಕ ಎಸ್.ಸಡಗೋಪನ್ ತಿಳಿಸಿದ್ದಾರೆ.
ಕರ್ಣಾಟಕ ಬ್ಯಾಂಕ್ ಸಂಸ್ಥಾಪಕರ ದಿನಾಚರಣೆಯ ಸಂದರ್ಭದಲ್ಲಿ ಬ್ಯಾಂಕಿನ ಶತಮಾನೋತ್ಸವ ಸಮಾರಂಭದಲ್ಲಿಂದು ತಂತ್ರಜ್ಞಾನ ಮತ್ತು ಬದುಕು ಎಂಬ ವಿಷಯದ ಬಗ್ಗೆ ಅವರು ಸಂಸ್ಥಾಪಕರ ದಿನದ ಉಪನ್ಯಾಸ ನೀಡಿದರು.
ಕೃಷಿಯಲ್ಲಿ ಮುಖ್ಯವಾಗಿ ತಂತ್ರಜ್ಞಾನದ ಬಳಕೆಯಾಗಿರುವುದರಿಂದ ಭತ್ತ, ಗೋದಿ ಇಳುವರಿಯಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಭಾರತ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಹಾಲು ಉತ್ಪಾದನೆ ಮಾಡುವ ದೇಶ. ಭಾರತ, ಐ.ಟಿ., ಉಡುಪುಗಳನ್ನು ತಯಾರಿಸುವ ಕೈಗಾರಿಕೆ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡುತ್ತಿದೆ. ಆರೋಗ್ಯ, ಸಾರಿಗೆ, ಸಂಪರ್ಕ, ಸಂವಹನ, ಶಿಕ್ಷಣ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ತಂತ್ರಜ್ಞಾನ ನಮ್ಮ ಬದುಕಿನಲ್ಲಿ ಸೌಲಭ್ಯಗಳನ್ನು ಒದಗಿಸಿದೆ. ಆದರೆ ದೇಶದಲ್ಲಿ ಪ್ರಾಚೀನ ಕಾಲದಲ್ಲಿಯೂ ಶಿಕ್ಷಣ, ಆರೋಗ್ಯ, ಖಗೋಳ ವಿಜ್ಞಾನ ಕ್ಷೇತ್ರ ಕ್ಕೆ ಸಂಬಂಧಿಸಿದಂತೆ ಅಮೂಲ್ಯವಾದ ಜ್ಞಾನದ ಸಂಪತ್ತು ಇತ್ತು. ಆದರೆ ಈ ಅಮೂಲ್ಯವಾದ ಜ್ಞಾನದ ಸಂಪತ್ತನ್ನು ನಾವು ಪರಿಗಣಿಸದೆ ಇದ್ದರೆ ನಮ್ಮ ಮೂರ್ಖತನವಾಗಬಹುದು ಎಂದು ಸಡಗೋಪನ್ ತಿಳಿಸಿದ್ದಾರೆ.
ದೇಶದಲ್ಲಿ ಸ್ವಾತಂತ್ರ್ಯ ನಂತರ ವೇಗವಾಗಿ ಬೆಳೆಯುತ್ತಿರುವ ಜನ ಸಂಖ್ಯೆಗೆ ಆಹಾರ ಒದಗಿಸುವ ಸವಾಲು ಎದುರಾಯಿತು. ಈ ನಿಟ್ಟಿನಲ್ಲಿ ಮುಖ್ಯ ವಾಗಿ ಕೃಷಿ ಕ್ಷೇತ್ರದಲ್ಲಿ ಆಹಾರವನ್ನು 5 ಪಟ್ಟು ಹೆಚ್ಚಿಸುವ ನಿಟ್ಟಿನಲ್ಲಿ ಹೆಚ್ಚು ಇಳುವರಿ ಕೊಡುವ ತಳಿಗಳನ್ನು ಬೆಳೆಸಲಾಯಿತು.ಜೈವಿಕ ಅಂಗಾಂಶ ತಳಿಗಳ ಬಗ್ಗೆ ವಿವಾದಗಳಿದ್ದರೂ ಆಹಾರ ಉತ್ಪಾದನೆಯಲ್ಲಿ ಈ ತಂತ್ರಜ್ಞಾನದ ಕೊಡುಗೆಯೂ ಇದೆ. ಬಾಕ್ರ ನಂಗಲ್ ನಂತಹ ಅಣೆಕಟ್ಟಿನ ನಿರ್ಮಾಣದ ಮೂಲಕ ನೀರಾವರಿಗೆ ಸಾಕಷ್ಟು ಕೊಡುಗೆ ದೊರೆಯಿತು. ಆದರೆ ಸ್ವಾತಂತ್ರ್ಯ ಪೂರ್ವದಲ್ಲಿ ಕರಿಕಾಲ ಚೋಳ ನ ಕಾಲದಲ್ಲಿ ನಿರ್ಮೀಸಿದ ಕಲ್ಲಾಣೆ ಅಣೆಕಟ್ಟು ಇಂದಿಗೂ ನೀರುಣಿಸುತ್ತಿದೆ ಅದು ಈ ದೇಶದ ಪ್ರಾಚೀನ ಜ್ಞಾನ ಪರಂಪರೆಯ ಕೊಡುಗೆ. ದೇಶದಲ್ಲಿ ಸಾಕಷ್ಟು ಕಟ್ಟಡಗಳು ನಿರ್ಮಾಣವಾಗಿದೆ. ತಂಜಾವೂರಿನ ದೇವಸ್ಥಾನ, ಗೋಪುರಗಳನ್ನು ನಿರ್ಮಿಸಿದ ವಾಸ್ತು ಶಿಲ್ಪ, ಕುತುಬ್ ಮೀನಾರ್ ನ್ನು ತುಕ್ಕು ನಿರೋಧಕವಾಗಿ ನಿರ್ಮಿಸಿದ ಈ ದೇಶದ ತಂತ್ರಜ್ಞಾನವನ್ನು ನಾವು ನಿರ್ಲಕ್ಷಿಸುವಂತಿಲ್ಲ. ಭಾರತದ ಪ್ರಾಚೀನ ಪರಂಪರೆಯಲ್ಲಿ ಉತ್ತಮ ವಾಗಿರುವುದನ್ನು ಸ್ವೀಕರಿಸುವ ಬಗ್ಗೆ ಪೂರ್ವಾಗ್ರಹ, ಕೀಳರಿಮೆ ಹೊಂದಬೇಕಾಗಿಲ್ಲ ಎಂದವರು ತಿಳಿಸಿದ್ದಾರೆ.
ದೇಶದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ರೋಬೋಟೆಕ್ ತಂತ್ರಜ್ಞಾನದವರೆಗೆ ಬೆಳೆದಿದೆ. ಆದರೆ ದೇಶದಲ್ಲಿ ಶುಶ್ರುತ, ಯೋಗ, ಪ್ರಾಣಾಯಾಮ ಆರೋಗ್ಯ ಕ್ಷೇತ್ರದಲ್ಲಿ ಬೆಳೆದು ಬಂದ ಜ್ಞಾನ ದ ಪರಂಪರೆಯಾಗಿದೆ ಎಂದವರು ತಿಳಿಸಿದ್ದಾರೆ.
ದೇಶದಲ್ಲಿ ಕಬ್ಬಿಣ, ಉಕ್ಕಿನ ಕಾರ್ಖಾನೆಗಳು ಬೆಳೆದು ಬಂದಿದೆ.ಭವಿಷ್ಯದಲ್ಲಿ ಉಕ್ಕನ್ನುಮರು ಬಳಕೆ ಮಾಡುವ ತಂತ್ರಜ್ಞಾನ ಮುಂಚೂಣಿಗೆ ಬರಲಿದೆ. ದೇಶದಲ್ಲಿ ಅಕ್ಕ ಸಾಲಿಗರು ಚಿನ್ನ ವನ್ನು ಗರಿಷ್ಠ ಉಷ್ಣತೆ ಯಲ್ಲಿ ಕರಗಿಸಿ ಆಭರಣಗಳನ್ನು ತಯಾರಿಸುವ ತಂತ್ರಜ್ಞಾನ ಬಹಳ ಹಿಂದಿನಿಂದಲೂ ಕರಗತ ಮಾಡಿಕೊಂಡಿದ್ದರು.
ಸಾರಿಗೆ ಕ್ಷೇತ್ರದಲ್ಲಿ ಬಸ್ಸು, ರೈಲು,ಮೆಟ್ರೋ, ವೈಮಾನಿಕ ಕ್ಷೇತ್ರದಲ್ಲಿ ಪ್ರಗತಿಗೆ ತಂತ್ರಜ್ಞಾನ ಕಾರಣವಾಗಿದೆ. ಭವಿಷ್ಯದಲ್ಲಿ ಗೂಗಲ್ ಮೂಲಕ ಚಲಿಸುವ ಕಾರು, ಡ್ರೋನ್, ಸೋಲಾರ್ ವಿಮಾನ ಬರಬಹುದು.
ಸಂಪರ್ಕ ಕ್ಷೇತ್ರದಲ್ಲಿ 5ಜಿ ಪ್ರವೇಶವಾಗಿದೆ. ಐ ಪೋನ್ ವಾಗಿ ವೇಗವಾಗಿ ಗ್ರಾಹಕರನ್ನು ತಲುಪುತ್ತಿವೆ. ಇಸ್ರೋ ಸಂಪರ್ಕ ಸಂವಹನ ವನ್ನು ತ್ವರಿತ ಗೊಳಿಸಲು ಉಪಗ್ರಹಗಳನ್ನು ಉಡಾವಣೆ ಮಾಡುತ್ತಿದೆ.ಭಾರತದ ಪ್ರಾಚೀನ ಕಾಳಿದಾಸನ ಕಾವ್ಯದಲ್ಲಿ ಮೇಘದೂತ ಎನ್ನುವ ಪರಿಕಲ್ಪನೆ ನಮ್ಮ ಸಂಪರ್ಕದ ವ್ಯಾಪ್ತಿಯನ್ನು ವಿಸ್ತರಿಸುವ ಚಿಂತನೆಯಾಗಿದೆ ಎಂದವರು ತಿಳಿಸಿದ್ದಾರೆ.
ಸಂಗೀತ ಪರಿಕರಗಳಲ್ಲೂ ಸಾಕಷ್ಟು ಆವಿ ಷ್ಕಾರಗಳಾಗಿದೆ. ಸಂಗೀತ ವನ್ನು ಚಿಕಿತ್ಸೆ ಗಾಗಿಯೂ ಬಳಸಲಾಗುತ್ತದೆ. ಭಾರತದ ಜ್ಞಾನ ಪರಂಪರೆಯಲ್ಲಿ ಸಂಗೀತ ರತ್ನಾಕರ ಸಾರಂಖ ದೇವನ ಕಾಲದಿಂದಲೂ 'ರಾಗ' ಸಂಗೀತ ಕ್ಕೆ ಮಹತ್ವ ವನ್ನು ನೀಡಲಾಗಿದೆ ಎಂದು ದೇಶದ ಜ್ಞಾನ ಪರಂಪರೆ ಆಧುನಿಕ ತಂತ್ರಜ್ಞಾನದ ಜೊತೆ ಬೆಳೆದು ಬಂದಿದೆ ಈ ಬಗ್ಗೆ ಭವಿಷ್ಯದ ಯುವ ಜನಾಂಗದ ತಿಳಿದುಕೊಳ್ಳಬೇಕಾದ ಅಗತ್ಯವಿದೆ ಎಂದವರು ತಿಳಿಸಿದ್ದಾರೆ.
ಸಮಾರಂಭದಲ್ಲಿ ಕರ್ಣಾಟಕ ಬ್ಯಾಂಕ್ ನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಎಸ್. ಮಹಾ ಬಲೇಶ್ವರ ಸ್ವಾಗತಿಸುತ್ತಾ, ಶತಮಾನೋತ್ಸವದ ಸಂದರ್ಭದಲ್ಲಿ ಬ್ಯಾಂಕ್ ನ ಒಂಬತ್ತು ಮಂದಿ ಸಂಸ್ಥಾಪಕರ ಮಂಡಳಿಯನ್ನು ಅಭಿನಂದಿಸುವುದಾಗಿ ತಿಳಿಸಿದರು.
ಬ್ಯಾಂಕ್ ಕಳೆದ ಪ್ರತಿ ವರ್ಷದಲ್ಲೂ ಲಾಭಗಳಿಸುತ್ತಾ ಬಂದಿದೆ. ಕೆಬಿಎಲ್ ಗ್ರಾಹಕರಿಗೆ ಕಾಲ ಕಾಲದಲ್ಲಿ ತಂತ್ರಜ್ಞಾನದ ಸೌಲಭ್ಯ ದೊಂದಿಗೆ ಷೇರು ದಾರರಿಗೆ ಗರಿಷ್ಠ ಡಿವಿಡೆಂಡ್ ನ್ನು ನೀಡುತ್ತಾ,ಸಿಎಸ್ ಆರ್ ನಿಧಿಯಿಂದ ಸಮಾಜಕ್ಕೆ ಸಾಕಷ್ಟು ನೆರವು ನೀಡುತ್ತಾ ಬಂದಿದೆ. ದಕ್ಷಿಣ ಕನ್ನಡದಲ್ಲಿ ಹುಟ್ಟಿದ 5 ಬ್ಯಾಂಕ್ ಗಳಲ್ಲಿ 3 ರಾಷ್ಟ್ರೀಕೃತ ಬ್ಯಾಂಕ್ ಗಳು ಇತರ ಬ್ಯಾಂಕ್ ಗಳೊಂದಿಗೆ ಸಂಯೋಜನೆ ಗೊಂಡಿದೆ.ಕರ್ಣಾಟಕ ಬ್ಯಾಂಕ್ ಈ ಜಿಲ್ಲೆಯಲ್ಲಿ ಉಳಿದುಕೊಂಡು ಶತಮಾ ನೋತ್ಸವದ ಆಚರಿಸುತ್ತಿದೆ ಎಂದವರು ತಿಳಿಸಿದ್ದಾರೆ.
ಸಮಾರಂಭದಲ್ಲಿ ಬ್ಯಾಂಕ್ ನ ಅಧ್ಯಕ್ಷ ಪಿ.ಪ್ರದೀಪ್ ಕುಮಾರ್ ಅಧ್ಯಕ್ಷ ತೆವಹಿಸಿ ಮಾತನಾಡುತ್ತಾ ಬ್ಯಾಂಕ್ ನ ಅಭಿವೃದ್ಧಿ ಸಾಮೂಹಿಕ ಪಾಲ್ಗೋಳ್ಳುವಿಕೆಯಿಂದ ಸಾಧ್ಯವಾಗಿದೆ. ಈ ರೀತಿ ಬ್ಯಾಂಕ್ ನ ಬೆಳವಣಿಗೆಗೆ ಕಾರಣರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.
ವೀಣಾ ಟಿ.ಎನ್. ಪ್ರಾರ್ಥಿಸಿದರು. ಬ್ಯಾಂಕಿನ ಕಾರ್ಯ ನಿರ್ವಾಹಕ ನಿರ್ದೇಶಕ ಶೇಖರ್ ರಾವ್ ವಂದಿಸಿದರು. ಎಲ್ರಾಯ್ ಮೊನಿಸ್ ಸಭಾ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ವಿದ್ವಾನ್ ವಿದ್ವಾನ್ ಆರ್ ಕುಮಾರೇಶ್, ವಿದ್ವಾನ್ ಡಾ.ಜಯಂತಿ ಕುಮಾರೇಶ್ ರವರ ವೀಣಾ ವಾದನ, ವಿದ್ವಾನ್ ಕೆ.ಯು.ಜಯಚಂದ್ರ ರಾವ್ ಅವರ ಮೃದಂಗ, ವಿದ್ವಾನ್ ಪ್ರಮಥ್ ಕಿರಣ್ ಅವರ ತಬಲ ಸಾಥ್ ನೊಂದಿಗೆ ಕರ್ನಾಟಕ ಸಂಗೀತ ಕಚೇರಿ ನಡೆಯಿತು. ಬಾಲಚಂದ್ರ ವೈವಿ.ಸಂಗೀತ ಕಚೇರಿ ಕಾರ್ಯಕ್ರಮ ನಿರೂಪಿಸಿದರು.