ಕರಾಚಿ: ಠಾಣೆಗೆ ದಾಳಿ ಪ್ರಕರಣ; 3 ಉಗ್ರರ ಸಹಿತ 7 ಮಂದಿ ಮೃತ್ಯು
![ಕರಾಚಿ: ಠಾಣೆಗೆ ದಾಳಿ ಪ್ರಕರಣ; 3 ಉಗ್ರರ ಸಹಿತ 7 ಮಂದಿ ಮೃತ್ಯು ಕರಾಚಿ: ಠಾಣೆಗೆ ದಾಳಿ ಪ್ರಕರಣ; 3 ಉಗ್ರರ ಸಹಿತ 7 ಮಂದಿ ಮೃತ್ಯು](https://www.varthabharati.in/sites/default/files/images/articles/2023/02/18/367646-1676735138.jpeg)
ಇಸ್ಲಮಾಬಾದ್, ಫೆ.18: ಪಾಕಿಸ್ತಾನದ ಬಂದರು ನಗರ ಕರಾಚಿಯ ಪೊಲೀಸ್ ಠಾಣೆಯ ಮೇಲೆ ಶುಕ್ರವಾರ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 3 ಉಗ್ರರ ಸಹಿತ 7 ಮಂದಿ ಮೃತಪಟ್ಟಿದ್ದಾರೆ ಎಂದು ಪ್ರಾಂತೀಯ ಅಧಿಕಾರಿಯನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ಶನಿವಾರ ವರದಿ ಮಾಡಿದೆ.
ಗ್ರೆನೇಡ್ ಹಾಗೂ ಇತರ ಆಯುಧಗಳಿಂದ ಶಸ್ತ್ರಸಜ್ಜಿತವಾಗಿದ್ದ ಮೂವರು ಆತ್ಮಾಹುತಿ ಬಾಂಬರ್ಗಳು ಪೊಲೀಸ್ ಠಾಣೆಯ ಗೇಟ್ಗೆ ರಾಕೆಟ್ ಎಸೆದು ಸ್ಫೋಟಿಸಿದ ಬಳಿಕ ಠಾಣೆಯ ಆವರಣ ಪ್ರವೇಶಿಸಿದ್ದರು. ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಪೊಲೀಸರು, ಓರ್ವ ಭದ್ರತಾ ಸಿಬಂದಿ ಹಾಗೂ ನೈರ್ಮಲ್ಯ ಕೆಲಸಗಾರ ಸಾವನ್ನಪ್ಪಿದ್ದು ಮೂವರೂ ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಪಾಕಿಸ್ತಾನದ ಆಂತರಿಕ ಸಚಿವ ರಾಣಾ ಸನಾವುಲ್ಲಾ ಹೇಳಿರುವುದಾಗಿ ವರದಿಯಾಗಿದೆ.
ಈ ದಾಳಿಯ ಹೊಣೆಯನ್ನು ತೆಹ್ರೀಕೆ ತಾಲಿಬಾನ್ ಪಾಕಿಸ್ತಾನ್ ವಹಿಸಿಕೊಂಡಿತ್ತು.
Next Story