Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ರಾಜಶೇಖರರ ಬುದ್ಧ ದರ್ಶನ

ರಾಜಶೇಖರರ ಬುದ್ಧ ದರ್ಶನ

ಕೆ.ಸಿ.ಎಸ್.ಕೆ.ಸಿ.ಎಸ್.19 Feb 2023 12:04 AM IST
share
ರಾಜಶೇಖರರ ಬುದ್ಧ ದರ್ಶನ

ಮುನ್ನೂರಕ್ಕೂ ಹೆಚ್ಚು ಕೃತಿಗಳನ್ನು ಬರೆದಿರುವ ಅವರು ಎಲ್ಲವನ್ನೂ ಪ್ರಕಟಿಸಿರುವುದು ಸ್ವಂತ ಖರ್ಚಿನಲ್ಲಿ. ನೂರಾರು ಸಂಪುಟಗಳಲ್ಲಿ ಬೌದ್ಧಸಾಹಿತ್ಯವನ್ನು ಕನ್ನಡಕ್ಕೆ ತಂದ ಮಹತ್ವಪೂರ್ಣ ಸಾಧನೆ ಅವರದು. ಕೆಲವು ಸಂಪುಟಗಳನ್ನು ಇಂಗ್ಲಿಷಿನಲ್ಲಿಯೂ ಪ್ರಕಟಿಸಿದ್ದಾರೆ. ಇಷ್ಟೆಲ್ಲವನ್ನೂ ಬರೆದರೂ ಪ್ರಚಾರದಿಂದ ದೂರ. ಇವತ್ತಿಗೂ ಅವರು ಎಲೆಮರೆಯ ಕಾಯಿ.


'ಬುದ್ಧ ತನ್ನ ತಾ ಗೆದ್ದವನೇ ಸಂಗ್ರಾಮ ವಿಜೇತನೆಂದ', 'ಬುದ್ಧ ಜ್ಞಾನದ ಔಷಧಕ್ಕೆ ಸಂಭಾವನೆ ಇಲ್ಲೆಂದ', 'ಬುದ್ಧ ನಿನ್ನ ಅಂತರಂಗದ ಧ್ವನಿಯೇ ಭಾಗ್ಯವೆಂದ', 'ಬುದ್ಧ ಹೀಗೆ ಬದುಕಿ ಮೃತ್ಯುವನ್ನು ಜಯಿಸಿರೆಂದ', 'ಬುದ್ಧನ ಸಂಧಿಸಿದ ಆಮ್ರಪಾಲಿ ಗಂಗೆಯಂತಾದಳು'
ಬುದ್ಧನನ್ನು ಹೀಗೆ ಮೊಗೆಮೊಗೆದು ಕೊಡುವ, ಅವನ ತತ್ವಗಳ ದರ್ಶನ ಮಾಡಿಸುವ, ಅರಿವಿನ ಪೂರ್ಣಿಮೆಯತ್ತ ಕರೆಯುವ ಇಂಥ ಹಲವಾರು ಕೃತಿಗಳ ಸಾಹಸಿಯ ಹೆಸರು ಸಿ.ಎಚ್.ರಾಜಶೇಖರ.
ರಾಜಶೇಖರ ಅವರು ಮೂಲತಃ ಪತ್ರಕರ್ತರು. ಮೂಡಿಗೆರೆಯಲ್ಲಿ ಪೂರ್ಣಚಂದ್ರ ತೇಜಸ್ವಿಯವರ ತೋಟದ ಪಕ್ಕವೇ ತಮ್ಮದೂ ತೋಟವಿತ್ತೆನ್ನುತ್ತಾರೆ. ತೇಜಸ್ವಿಯವರ ಸಹವಾಸದಲ್ಲಿ ಸುಮಾರು 27 ವರ್ಷ ಕಳೆದಿರುವುದನ್ನು ನೆನೆಯುವ ರಾಜಶೇಖರರು, ತಮ್ಮ ಅಕ್ಷರಪ್ರೀತಿಯನ್ನು ಬೌದ್ಧಸಾಹಿತ್ಯವನ್ನು ಕನ್ನಡದಲ್ಲಿ ಕೊಡಲು ಧಾರೆಯೆರೆಯುವುದಕ್ಕೂ ತೇಜಸ್ವಿಯವರೇ ಪ್ರೇರಣೆ ಎನ್ನುತ್ತಾರೆ.

ಇವೆಲ್ಲದರ ವಿವರಣೆಗೆ ಹೋಗುವ ಮೊದಲು ಒಂದು ಮಾತು ಹೇಳಬೇಕು. ರಾಜಶೇಖರ ಅವರು ಇಂದು ಅತ್ಯಂತ ಸಂಕಟದ ಸ್ಥಿತಿಯಲ್ಲಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಎಂಎನ್‌ಡಿ ಅಂದರೆ ಮೋಟಾರ್ ನ್ಯೂರಾನ್ ಕಾಯಿಲೆಯಿಂದ ಬಳಲುತ್ತಿರುವ ಅವರಿಗೆ ಮಾತನಾಡಲು ಆಗದು. ಮೊಬೈಲ್ ಸಂದೇಶಗಳ ಮೂಲಕವೇ ಹತ್ತಿರದವರೊಡನೆ ಅಲ್ಪಸ್ವಲ್ಪಸಂಪರ್ಕ ಹೊಂದಿರುವುದು ಸಾಧ್ಯ. ಮೆದುಳು ಮತ್ತು ನರಗಳ ಮೇಲೆ ಪರಿಣಾಮ ಬೀರುವ ಈ ಕಾಯಿಲೆಯಿಂದಾಗಿ ಅವರ ಕೈಕಾಲುಗಳ ಮೇಲಿನ ಸ್ವಾಧೀನವೂ ಸಂಪೂರ್ಣವಿಲ್ಲ. ಕೋಟಿಗೆ ಒಬ್ಬರಿಗೆ ಬರುವ ಕಾಯಿಲೆ ಇದೆನ್ನಲಾಗುತ್ತದೆ. ಅವರ ಪತ್ನಿ ರೇಣುಕಮ್ಮ ಕ್ಯಾನ್ಸರ್ ಕಾಯಿಲೆಯಿಂದ ಇತ್ತೀಚೆಗೆ ತೀರಿಕೊಂಡರು. ಮಗಳ ಆರೈಕೆಯಲ್ಲಿ ಬದುಕು ಸಾಗುತ್ತಿದೆ. ಇಂಥ ಸ್ಥಿತಿಯಲ್ಲಿಯೂ ಅವರ ಮನಸ್ಸಿನ ತುಂಬ ಇರುವುದು ಬುದ್ಧ ಬುದ್ಧ ಬುದ್ಧ.
ಚಿಕ್ಕಮಗಳೂರಿನವರಾದ ರಾಜಶೇಖರರ ತಂದೆ ಸಿ.ಡಿ.ಹನುಮಂತಯ್ಯ ಸ್ವಾತಂತ್ರ್ಯ ಹೋರಾಟಗಾರರು. ತಾಯಿ ಹೆಚ್.ಆರ್.ದೊಡ್ಡಮ್ಮ. ಪತ್ರಕರ್ತರಾಗಿ ಸುಮಾರು 36 ವರ್ಷ ಕೆಲಸ ಮಾಡಿದ್ದಾರೆ ರಾಜಶೇಖರ್. ಮುಖ್ಯವಾಗಿ ಲಂಕೇಶ್ ಪತ್ರಿಕೆಗೆ. ಲಂಕೇಶ್ ಅವರು ಇರುವವರೆಗೂ ಜಿಲ್ಲಾ ವರದಿಗಾರರಾಗಿದ್ದರು. ಗೌರಿ ಲಂಕೇಶ್ ಅವರೊಂದಿಗೂ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿದ್ದಾರೆ. ಅಲ್ಲದೆ, ಮುಂಗಾರು, ಸಂವಾದ, ಸುದ್ದಿ ಸಂಗಾತಿ, ಪ್ರಜಾವಾಣಿ, ಸುಧಾ, ಮಯೂರ, ಉದಯವಾಣಿ ಹೀಗೆ ಹಲವಾರು ಪತ್ರಿಕೆಗಳಲ್ಲಿ ಇವರ ಧಾರಾವಾಹಿಗಳು ಪಕ್ರಟವಾಗಿದ್ದುದನ್ನು ನೆನಪು ಮಾಡಿಕೊಳ್ಳುತ್ತಾರೆ.
ಇದೆಲ್ಲದರ ನಡುವೆಯೂ ರಾಜಶೇಖರರ ಪೂರ್ಣ ಒಲವಿದ್ದುದು ಬೌದ್ಧ ಸಾಹಿತ್ಯದಲ್ಲಿ. ವಿನಯ ಪಿಟಿಕ 21 ಸಾವಿರ ಸುತ್ತ, ಸುತ್ತ ಪಿಟಿಕ 21 ಸಾವಿರ ಸುತ್ತಗಳು ಮತ್ತು ಅಭಿಧಮ್ಮ ಪಿಟಿಕ 42 ಸಾವಿರ ಸುತ್ತಗಳು ಹೀಗೆ ತ್ರಿಪಿಟಿಕ ಒಟ್ಟು 84 ಸಾವಿರ ಸುತ್ತಗಳದ್ದಾಗಿದೆ. ಬೌದ್ಧ ಸಾಹಿತ್ಯ ಅದೊಂದು ಕೊನೆ ಇಲ್ಲದ ಮಹಾ ಸಾಗರ. ಅದರ ಬಗ್ಗೆ ಬರೆಯಲು ಒಂದು ಜನ್ಮ ಸಾಲದು ಎನ್ನುವ ಅವರು, ತಮ್ಮ ಬದುಕಿನ ಸುಮಾರು 50 ವರ್ಷಗಳನ್ನು ಇದಕ್ಕಾಗಿ ತೊಡಗಿಸಿದ್ದವರು. ಇದು ತನ್ನ ಪಾಲಿನ ಅಳಿಲುಸೇವೆ ಎಂಬ ಭಾವನೆ ಅವರದು.
ತೇಜಸ್ವಿಯವರು ಮತ್ತು ಕುವೆಂಪು ಅವರು ತಾನು ಬುದ್ಧನ ಬಗ್ಗೆ ಬರೆಯಲು ಮೂಲಪ್ರೇರಣೆ ಎನ್ನುವ ರಾಜಶೇಖರರು, ಅಂಬೇಡ್ಕರ್ ಕೃತಿಗಳ ಓದಿನ ಬಳಿಕ ಬೌದ್ಧಸಾಹಿತ್ಯಕ್ಕೆ ಇನ್ನಷ್ಟು ಹತ್ತಿರವಾದೆ ಎನ್ನುತ್ತಾರೆ. ಅವರ ಬರವಣಿಗೆ, ನೋಟ, ಮಾತು ಎಲ್ಲವೂ ಬುದ್ಧಮಯ.

ಬೌದ್ಧಧರ್ಮವನ್ನು ಹೇಗೆ ಅತಿಕ್ರಮಿಸಲಾಯಿತೋ ಹಾಗೆಯೇ ಬೌದ್ಧಸಾಹಿತ್ಯವನ್ನು ಅಡಗಿಸಿಡುವುದೂ ನಡೆಯಿತು. ಹಾಗೆ ಅಡಗಿಸಲಾದ ಅಮೂಲ್ಯ ನಿಧಿಯಂತಿರುವ ಬೌದ್ಧಸಾಹಿತ್ಯದ ಸಾರವನ್ನು ತಮ್ಮ ಮೂಲನಿವಾಸಿ ಬಂಧುಗಳಿಗೆ ಬಡಿಸುವ ಅಪಾರ ಕಳಕಳಿ ಅವರದು. ಅದಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದವರು. ಇದ್ದ ಸರಕಾರಿ ಕೆಲಸ ಬಿಟ್ಟು, ತೋಟ, ಮನೆ, ನಿವೇಶನ ಹೀಗೆ ಅವರೇ ಹೇಳುವಂತೆ ಕೋಟ್ಯಂತರ ಬೆಲೆಬಾಳುವ ಆಸ್ತಿಯನ್ನೆಲ್ಲ ಕಳೆದುಕೊಂಡವರು. ಮುನ್ನೂರಕ್ಕೂ ಹೆಚ್ಚು ಕೃತಿಗಳನ್ನು ಬರೆದಿರುವ ಅವರು ಎಲ್ಲವನ್ನೂ ಪ್ರಕಟಿಸಿರುವುದು ಸ್ವಂತ ಖರ್ಚಿನಲ್ಲಿ. ನೂರಾರು ಸಂಪುಟಗಳಲ್ಲಿ ಬೌದ್ಧಸಾಹಿತ್ಯವನ್ನು ಕನ್ನಡಕ್ಕೆ ತಂದ ಮಹತ್ವಪೂರ್ಣ ಸಾಧನೆ ಅವರದು. ಕೆಲವು ಸಂಪುಟಗಳನ್ನು ಇಂಗ್ಲಿಷಿನಲ್ಲಿಯೂ ಪ್ರಕಟಿಸಿದ್ದಾರೆ. ಇಷ್ಟೆಲ್ಲವನ್ನೂ ಬರೆದರೂ ಪ್ರಚಾರದಿಂದ ದೂರ. ಇವತ್ತಿಗೂ ಅವರು ಎಲೆಮರೆಯ ಕಾಯಿ.
41 ಸಂಪುಟಗಳ ಬುದ್ಧ ಸಾಹಿತ್ಯ, 25 ಸಂಪುಟಗಳಲ್ಲಿ ಸಮಗ್ರ ಬುದ್ಧ ಭಾರತ ದರ್ಶನ, 6 ಬುದ್ಧ ಸಂಪುಟಗಳ ಇಂಗ್ಲಿಷ್ ಅನುವಾದ, ಬುದ್ಧನ ತತ್ವ ಸಿದ್ಧಾಂತಗಳ ಮೇಲೆ ಇತರ 14 ಸಾಮಾಜಿಕ ಕೃತಿಗಳು, ಜನಸಾಮಾನ್ಯರಿಗೂ ಬುದ್ಧಸಾಹಿತ್ಯ ಮುಟ್ಟಬೇಕು ಎಂಬ ದೃಷ್ಟಿಯಿಂದ ಇದೇ ಬುದ್ಧಸಾಹಿತ್ಯವನ್ನು ಕುರಿತ 250 ಕಿರು ಹೊತ್ತಿಗೆಗಳು (ಒಂದೊಂದು ಕಿರು ಹೊತ್ತಿಗೆಯೂ 52 ಪುಟಗಳಲ್ಲಿದೆ) ಹೀಗೆ 336 ಕೃತಿಗಳು ಎಂದರೆ ಸಣ್ಣ ಮಾತಲ್ಲ.

ಅವರು ಏನನ್ನಾದರೂ ಹೇಳಲು ಪ್ರಯತ್ನಿಸಿದರೆ, ಮತ್ತೆ ಮತ್ತೆ ಬುದ್ಧನ ತತ್ವಗಳ ಸಾರವನ್ನೇ ಉಲ್ಲೇಖಿಸಲು ಬಯಸುವುದು ಅವರ ಮನಸ್ಸಿನೊಳಗೆ ಇರುವ ಬುದ್ಧನ ಅನುರಣನ ಎಂಥದು ಎಂಬುದನ್ನೇ ಸೂಚಿಸುತ್ತದೆ. ಈ ಜಗತ್ತನ್ನು ಆಳುವ ಶಕ್ತಿ ಕೇವಲ ವಿಚಾರಕ್ಕೆ ಮಾತ್ರ ಇದೆ, ಧರ್ಮ ಎಂದರೆ ಪ್ರಕೃತಿ ನಿಯಮ ಎಂದು ಅರಿತಾಗಲೇ ನಮ್ಮ ಭಯ ಮತ್ತು ಅವಿವೇಕ ನೀಗುವುದು, ಸತ್ಯ ಕಂಡಾಗ ಏಕಾಂಗಿಯಾಗಿಯಾದರೂ ಕೈ ಎತ್ತು, ಮನುಷ್ಯ ಬರಿದೆ ಬದುಕುವುದಕ್ಕಿಂತ ಪ್ರಜ್ಞೆಯಿಂದ ಬದುಕಿದರೆ ಸಾರ್ಥಕ ಎಂಬ ಬುದ್ಧನ ನುಡಿಗಳು ಅವರನ್ನು ನಿರಂತರ ನಡೆಸಿವೆ. ತಮ್ಮ ಈ ನಿಟ್ಟಿನ ಕೆಲಸ ಕೂಡ ಬುದ್ಧನ ನುಡಿಗಳ ಪ್ರೇರಣೆಯಿಂದಲೇ ಶುರುವಾದ ಚಲನೆ ಎಂದು ಅಂದುಕೊಂಡಿದ್ದಾರೆ ಅವರು.
ಮನುವಾದಿಗಳು ಸಾವಿರಾರು ವರ್ಷಗಳಿಂದ ಬುದ್ಧ ಮತ್ತು ಅಶೋಕನ ಸಾಹಿತ್ಯವನ್ನು ಮರೆಮಾಚಿದ್ದನ್ನು, ಬೌದ್ಧಧರ್ಮವನ್ನೇ ಹೈಜಾಕ್ ಮಾಡಿ ತಮ್ಮದೆಂದು ಪರಿವರ್ತಿಸಿಕೊಂಡದ್ದನ್ನು ನೋವಿನಿಂದ ಹೇಳುವ ಅವರು, ಎಸ್.ಎಲ್.ಭೈರಪ್ಪಕಾದಂಬರಿ 'ಸಾರ್ಥ'ದಲ್ಲಿನ ಪ್ರತಿಪಾದನೆಯನ್ನು ನಿರಾಕರಿಸಲೆಂದೇ 'ಸಾರ್ಥ ಮತ್ತು ಬುದ್ಧ ಹಾಗೂ ಬಚ್ಚಿಟ್ಟ ಸತ್ಯಗಳು' ಎಂಬ ಕೃತಿಯನ್ನೂ ಬರೆದಿದ್ದಾರೆ. ಬೌದ್ಧರು ಅನ್ಯರ ಋಣ ತೀರಿಸಿದವರಾದರೆ, ಅವರ ಧರ್ಮವನ್ನು ಅತಿಕ್ರಮಿಸಿ ತಮ್ಮದೆಂದು ಬಿಂಬಿಸಿದ ವೈದಿಕರ ಬದುಕು ಬೌದ್ಧರ ಸಮಾಧಿಯ ಮೇಲೆ ನಿಂತಿದೆ ಎನ್ನುತ್ತಾರೆ ರಾಜಶೇಖರ್.
ಈಗಲೂ ಅವರ ಮನಸ್ಸಲ್ಲಿರುವ ಬಯಕೆ, ಇನ್ನಷ್ಟು ಬೌದ್ಧಸಾಹಿತ್ಯವನ್ನು ಕೊಡಬೇಕು ಎಂಬುದು. ತಮಗಾಗಿ ಏನನ್ನೂ ಬಯಸದ ಅವರು, ಮುದ್ರಣ ಕಾಣದ ಕೃತಿಗಳಿಗೆ ಹಣದ ನೆರವು ನೀಡಬಲ್ಲ ದಾನಿಗಳಿಗಾಗಿ ನಿರೀಕ್ಷಿಸುತ್ತಿದ್ದಾರೆ. ಅದನ್ನೊಂದು ಬದ್ಧತೆಯಾಗಿ ತೆಗೆದುಕೊಂಡಿರುವ ಅವರ ಜೀವನಪ್ರೀತಿಯಲ್ಲಿ ಮತ್ತೆ ಕೇಳಿಸುವುದು ಅದೇ ಬುದ್ಧಸ್ವರ: ''ಒಳೆಯದನ್ನೇ ಮಾಡಿ, ಕೇಡು ಮಾಡದಿರಿ.''
ತಮ್ಮ ಅತಿ ಕಷ್ಟಕಾಲದಲ್ಲೂ ರಾಜಶೇಖರರಲ್ಲಿ ಧನ್ಯತಾ ಭಾವವಿರುವುದು ಬದುಕಿನುದ್ದಕ್ಕೂ ಬುದ್ಧನ ಈ ತತ್ವ ಪಾಲಿಸಿದ್ದೇನೆ ಎಂಬ ಕಾರಣಕ್ಕೆ

share
ಕೆ.ಸಿ.ಎಸ್.
ಕೆ.ಸಿ.ಎಸ್.
Next Story
X