Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಬಡವರ ರಾಜ ಶಿವಾಜಿ ಮಹಾರಾಜ

ಬಡವರ ರಾಜ ಶಿವಾಜಿ ಮಹಾರಾಜ

ಇಂದು ಶಿವಾಜಿ ಜಯಂತಿ

ರಂಜಾನ್ ದರ್ಗಾರಂಜಾನ್ ದರ್ಗಾ19 Feb 2023 10:09 AM IST
share
ಬಡವರ ರಾಜ ಶಿವಾಜಿ ಮಹಾರಾಜ
ಇಂದು ಶಿವಾಜಿ ಜಯಂತಿ

ಜಹಗೀರದಾರ, ದೇಶಮುಖ, ವತನದಾರ (ಗೌಡ), ಕುಲಕರ್ಣಿ ಮುಂತಾದವರು ಜನರ ಮಾಲಕರಲ್ಲ ರಾಜ್ಯದ ನೌಕರರು ಎಂದು ಸಾರಿದ ಮೊದಲ ದೊರೆ ಶಿವಾಜಿ. ಈ ಗ್ರಾಮಾಧಿಕಾರಿಗಳು ರೈತಾಪಿ ಜನರನ್ನು ಪೀಡಿಸಿದರೆ ಕಠಿಣ ಶಿಕ್ಷೆಗೆ ಗುರಿ ಮಾಡುವಂಥ ಆದೇಶಗಳನ್ನು ಹೊರಡಿಸಿದ. ರೈತರು ಮತ್ತು ರಾಜ್ಯಾಡಳಿತದ ಮಧ್ಯೆ ನೇರ ಸಂಬಂಧ ಕಲ್ಪಿಸಿದ ಶ್ರೇಯಸ್ಸು ಶಿವಾಜಿಗೆ ಸಲ್ಲುತ್ತದೆ. ಜನರು ಮೊದಲ ಬಾರಿಗೆ ಈ ಅನನ್ಯವಾದ ಹೊಸ ವ್ಯವಸ್ಥೆಯನ್ನು ಅನುಭವಿಸಿದರು. ‘‘ನಮ್ಮಂಥ ಕಟ್ಟಕಡೆಯ ಮನುಷ್ಯರಿಗೂ ಇಷ್ಟೊಂದು ಮರ್ಯಾದೆ ಇದೆಯೇ?’’ ಎಂದು ಆಶ್ಚರ್ಯಪಟ್ಟರು.

ಶಿವಾಜಿ ಪಟ್ಟಾಭಿಷೇಕ ನಡೆದದ್ದು ಹೇಗೆ?

ಶಿವಾಜಿ ಶೂದ್ರ ಎಂಬ ತಕರಾರು ಪಟ್ಟಾಭಿಷೇಕದ ಸಂದರ್ಭದಲ್ಲಿ ಪ್ರಬಲವಾಯಿತು. ಶೂದ್ರ ರಾಜನಿಗೆ ಪಟ್ಟಾಭಿಷೇಕ ಮಾಡಲಿಕ್ಕಾಗದು, ‘ಛತ್ರಪತಿ ಶಿವಾಜಿ’ ಎಂದು ಕರೆಯಲಿಕ್ಕಾಗದು ಎಂದು ಮಹಾರಾಷ್ಟ್ರದ ಬ್ರಾಹ್ಮಣರು ವಾದಿಸಿದರು. ಹೀಗೆ  ಪಟ್ಟಾಭಿಷೇಕದ ಸಂದರ್ಭದಲ್ಲಿ ವೈದಿಕರ ಅಡತಡೆಗಳನ್ನು ಶಿವಾಜಿ ಎದುರಿಸಬೇಕಾಯಿತು. ಈ ಸಮಸ್ಯೆಯ ನಿವಾರಣೆಗಾಗಿ ಕಾಶಿಯಲ್ಲಿದ್ದ ಗಾಗಾ ಭಟ್ಟನನ್ನು ಕರೆಸಲಾಯಿತು. ಶಿವಾಜಿ ಮೂಲ ರಜಪೂತ ವಂಶದಲ್ಲಿದೆ ಎಂದು ಆತ ಪ್ರತಿಪಾದಿಸಿದ.

ರಾಜಧಾನಿ ರಾಯಗಢದಲ್ಲಿ 1674ನೇ ಜೂನ್ 6ರಂದು ಗಾಗಾ ಭಟ್ಟರ ನೇತೃತ್ವದಲ್ಲಿ ಶಿವಾಜಿ ಮಹಾರಾಜನ ಮೊದಲ ಪಟ್ಟಾಭಿಷೇಕವಾಯಿತು. ಈ ಸಮಾರಂಭದಲ್ಲಿ 50 ಸಾವಿರ ಜನ ಪಾಲ್ಗೊಂಡಿದ್ದರು. ದೇಶದ ವಿವಿಧ ಭಾಗಗಳಿಂದ 11 ಸಾವಿರದಷ್ಟು ಬ್ರಾಹ್ಮಣರು ಕುಟುಂಬ ಸಮೇತ ಪಟ್ಟಾಭಿಷೇಕ ಸಮಾರಂಭಕ್ಕೆ ಬಂದು ಶಿವಾಜಿಯ ಅತಿಥಿಗಳಾಗಿ 4 ತಿಂಗಳವರೆಗೆ ಉಳಿದಿದ್ದರು.

ಪಟ್ಟಾಭಿಷೇಕದಲ್ಲಿ ಹೋಮ ಹವನಗಳು ನಡೆದವು. ಚಿನ್ನ, ಬೆಳ್ಳಿ, ವಸ್ತು, ವಡವೆ ಮತ್ತು ಚಿನ್ನದ ನಾಣ್ಯಗಳಿಂದ ಮಹಾರಾಜರ ತುಲಾಭಾರವಾಯಿತು. ಅವನ್ನೆಲ್ಲ ಬ್ರಾಹ್ಮಣರಿಗೆ ದಾನ ರೂಪದಲ್ಲಿ ಕೊಟ್ಟರು. ಯುದ್ಧದಲ್ಲಿ ನಡೆದಿರಬಹುದಾದ ಬ್ರಹ್ಮಹತ್ಯಾ ದೋಷಗಳಿಗಾಗಿ ಪ್ರಾಯಶ್ಚಿತ್ತ ರೂಪದಲ್ಲಿ ಇನ್ನೂ ಹೆಚ್ಚು ಹಣವನ್ನು ಬ್ರಾಹ್ಮಣರು ದಾನ ರೂಪದಲ್ಲಿ ಪಡೆದರು. ಆನಂತರ ‘ಪಾಪ ಪರಿಹಾರ’ವಾಯಿತು ಎಂದು ನುಡಿದರು. ಈ ಪಟ್ಟಾಭಿಷೇಕದ ನಂತರ ಶಿವಾಜಿ ಛತ್ರಪತಿ ಎನಿಸಿಕೊಂಡರು.

ಮೊದಲ ರಾಜ್ಯಾಭಿಷೇಕದ 13ನೇ ದಿನಕ್ಕೆ ತಾಯಿ ಜೀಜಾಬಾಯಿ ತೀರಿಕೊಂಡಳು. ಮುಂದೆ ಸ್ವಲ್ಪದಿನಕ್ಕೆ ಕಾಶೀಬಾಯಿ ಎಂಬ ಪತ್ನಿ ತೀರಿಕೊಂಡಳು. ಪಟ್ಟಾಭಿಷೇಕ ದೋಷಪೂರ್ಣವಾಗಿದೆ ಎಂದು ನಿಶ್ಚಲಪುರಿ ಗೋಸಾವಿ ಎಂಬ ಯಜುರ್ವೇದಿ ತಾಂತ್ರಿಕ ತಕರಾರು ತೆಗೆದ. ಹೀಗಾಗಿ ಮೊದಲ ರಾಜ್ಯಾಭಿಷೇಕ ನಡೆದ ಮೂರು ತಿಂಗಳೊಳಗಾಗಿ ಮತ್ತೊಂದು ಸಲ ಪಟ್ಟಾಭಿಷೇಕ ಮಾಡಲಾಯಿತು. ಈ ಎರಡೂ ಪಟ್ಟಾಭಿಷೇಕಗಳಿಂದಾಗಿ ಮತ್ತು ಬ್ರಾಹ್ಮಣರಿಗೆ ಕೊಟ್ಟ ದಾನ ಧರ್ಮಗಳಿಂದಾಗಿ ಭಾರೀ ಸಂಪತ್ತು ಹರಿದುಹೋಯಿತು. ಅಷ್ಟೊತ್ತಿಗಾಗಲೇ ರಾಜ್ಯದ ಖಜಾನೆ ಸಂಪೂರ್ಣ ಖಾಲಿಯಾಗಿತ್ತು!

ಮರಾಠಾ ಸಾಮ್ರಾಜ್ಯವನ್ನು ಕಟ್ಟಲು ಇಡೀ ಬದುಕನ್ನು ಒತ್ತೆಯಿಟ್ಟ ಶಿವಾಜಿ, ಅದನ್ನು ಛತ್ರಪತಿಯಾಗಿ ಅನುಭವಿಸಿದ್ದು ಆರು ವರ್ಷ ಮಾತ್ರ. ಶಿವಾಜಿ 1680ನೇ ಎಪ್ರಿಲ್ 3ರಂದು ತೀರಿಕೊಂಡ.

 ಜಾತ್ಯತೀತ ಭಾವನೆ, ಸಮಾನತೆ, ಸಹೋದರತ್ವ ಮುಂತಾದವು ಶಿವಾಜಿಯ ಸದ್ಗುಣಗಳಾಗಿದ್ದವು. ಶಿವಾಜಿಯ ಹಿಂದವೀ ಸ್ವರಾಜ್ಯದಲ್ಲಿ ದಲಿತರು, ಹಿಂದುಳಿದವರು, ಆದಿವಾಸಿಗಳು ಮತ್ತು ಮುಸ್ಲಿಮರು ಇತರರಂತೆ ಸಮಾನ ಗೌರವದೊಂದಿಗೆ ಬದುಕುತ್ತಿದ್ದರು. ಶಿವಾಜಿಯ ವ್ಯಕ್ತಿತ್ವಕ್ಕೆ ಮಾರುಹೋಗಿದ್ದ ಇವರೆಲ್ಲ ಶಿವಾಜಿಗಾಗಿ ಎಂಥ ತ್ಯಾಗಕ್ಕೂ ಸಿದ್ಧರಾಗಿದ್ದರು. 

ಛತ್ರಪತಿ ಶಿವಾಜಿ ಮಹಾರಾಜ ಹಿಂದವೀ ಸ್ವರಾಜ್ಯಕ್ಕಾಗಿ ತನ್ನ ಬದುಕನ್ನು ಮುಡಿಪಾಗಿಟ್ಟ ವೀರ. ಕೇವಲ 50 ವರ್ಷಗಳ ಬದುಕಿನಲ್ಲಿ ಆತ ಸಾಧಿಸಿದ್ದು ಆಶ್ಚರ್ಯ ಹುಟ್ಟಿಸುವಂಥದ್ದು.

ಶಿವಾಜಿ 1627ನೇ ಎಪ್ರಿಲ್ 19ರಂದು ಪುಣೆ ಬಳಿಯ ಶಿವನೇರಿದುರ್ಗದಲ್ಲಿ ಜನಿಸಿದ. ತಂದೆ ಶಹಾಜಿ ಭೋಸ್ಲೆ ಪುಣೆಯ ಜಹಗೀರದಾರರಾಗಿದ್ದು ವಿಜಯಪುರದ ದೊರೆ ಮುಹಮ್ಮದ್ ಆದಿಲಶಾಹಿಯ ಸೈನ್ಯಾಧಿಕಾರಿಯಾಗಿದ್ದರು. ತಾಯಿ ಜೀಜಾಬಾಯಿ, ಮಲತಾಯಿ ತುಕಾಬಾಯಿ ಮೋಹಿತೆ. ಸಮರ್ಥ ರಾಮದಾಸರು ಇವರ ಗುರುಗಳಾಗಿದ್ದರು. ದಾದಾಜಿ ಕೋಂಡದೇವ ಇವರಿಗೆ ಆಡಳಿತ ವಿದ್ಯೆ ಕಲಿಸಿದರು.

1680ನೇ ಎಪ್ರಿಲ್ 3ರಂದು ನಿಧನವಾಗುವವರೆಗೆ ‘ಹಿಂದವೀ ಸ್ವರಾಜ್ಯ’ದ ಪ್ರಜೆಗಳ ಏಳ್ಗೆಗಾಗಿ ಚಿಂತಿಸಿದ ಮಹಾಪುರುಷ ಶಿವಾಜಿ. ‘ಹಿಂದವೀ ಸ್ವರಾಜ್ಯ’ ಎಂದರೆ ಭಾರತೀಯ ಮೂಲನಿವಾಸಿಗಳ ಸ್ವರಾಜ್ಯ. ರೈತರು, ಆದಿವಾಸಿಗಳು ಮತ್ತು ಒಟ್ಟಾರೆ ದುಡಿಯುವ ಜನರ ಸ್ವರಾಜ್ಯ ಎಂದು ಇದರ ಅರ್ಥ. ‘ಹಿಂದವೀ ಸ್ವರಾಜ್ಯ’ದ ಮೂಲ ಉದ್ದೇಶ ಪ್ರಜೆಗಳ ಹಿತವನ್ನು ಕಾಪಾಡುವುದಾಗಿತ್ತು.

 ರೈತರ ಬದುಕು ಸುಧಾರಿಸಿದರೆ ತನ್ನ ಸಾಮ್ರಾಜ್ಯದ ಪ್ರಜೆಗಳ ಏಳ್ಗೆ ಆಗುವುದು ಎಂಬ ಸತ್ಯವನ್ನು ಆತ ಅರಿತವನಾಗಿದ್ದ. ಆದ್ದರಿಂದ ಶಿವಾಜಿಯ ಕನಸಿನ ‘ಹಿಂದವೀ ಸ್ವರಾಜ್ಯ’, ಭಾರತದಲ್ಲಿ ಜನಮುಖಿ ರಾಜಕೀಯ ವ್ಯವಸ್ಥೆಯನ್ನು ತರುವ ವಿಚಾರದಲ್ಲಿ ಮೊದಲ ಯಶಸ್ವೀ ಪ್ರಯೋಗವಾಯಿತು. ದುಡಿಯುವ ವರ್ಗದ ಸಹಾಯದಿಂದ ರಾಜ್ಯ ಸ್ಥಾಪನೆ ಮಾಡಿದ ಮೊದಲ ರಾಜನಾಗಿ ಶಿವಾಜಿ ಮಹಾರಾಜ ಅಮರನಾಗಿದ್ದಾನೆ.

ಸ್ವಧರ್ಮ ಪ್ರೀತಿ, ಪರಧರ್ಮ ಗೌರವ, ಜಾತಿ ಮತ ಪಂಥ ವರ್ಣ ಮತ್ತು ಧರ್ಮಗಳ ಭೇದವಿಲ್ಲದೆ ರಾಜ್ಯದ ಪ್ರಜೆಗಳನ್ನೆಲ್ಲ ಸಮಭಾವದಿಂದ ಕಾಣುವುದು, ಮಹಿಳೆಯರ ಘನತೆ ಕಾಪಾಡುವುದು, ಬಡವರು ಮತ್ತು ಅಸಹಾಯಕರ ಬಗ್ಗೆ ವಿಶೇಷ ಕಾಳಜಿ, ಸೈನ್ಯದಲ್ಲಿ ಜನಪರ ಮೌಲ್ಯಗಳ ಮೂಲಕ ಶಿಸ್ತು ಸಾಧಿಸುವುದು, ರಾಜ, ಅಧಿಕಾರಿಗಳು ಮತ್ತು ಸೈನಿಕರು ಸೇರಿ ‘‘ನಾವೆಲ್ಲ ಇರುವುದು ನಿಮಗಾಗಿ’’ ಎಂಬ ಭಾವವನ್ನು ಪ್ರಜೆಗಳಲ್ಲಿ ಮೂಡಿಸುವುದು ಮುಂತಾದವುಗಳನ್ನು ಶಿವಾಜಿ ಮಹಾರಾಜ ಅಲ್ಪಾವಧಿಯಲ್ಲೇ ಸಾಧಿಸಿದ್ದು ಪವಾಡ ಸದೃಶವಾಗಿದೆ.

ಶಿವಾಜಿಗಾಗಿ ತ್ಯಾಗಕ್ಕೆ ಸಿದ್ಧರಾಗಿದ್ದ ಜನ:

ಶಿವಾಜಿ ಜಾತ್ಯತೀತತೆಯನ್ನು ಪಾಲಿಸುತ್ತಿದ್ದ. ಈ ಕಾರಣದಿಂದಲೇ ದಲಿತರು, ಮುಸ್ಲಿಮರು ಮತ್ತು ಬುಡಕಟ್ಟು ಜನರು ಅವನಿಗೆ ಅತಿಯಾದ ನಿಷ್ಠೆ ತೋರುತ್ತಿದ್ದರು. ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಶಿವಾಜಿಯ ರಕ್ಷಣೆ ಮಾಡುತ್ತಿದ್ದರು.

ಔರಂಗಝೇಬನ ನಿಷ್ಠಾವಂತ ಸರ್ದಾರ ರಾಜೇ ಜಯಸಿಂಹನ ಎದುರು ಶಿವಾಜಿ ಮಹಾರಾಜ ಸೋಲು ಅನುಭವಿಸಬೇಕಾಯಿತು. ಅವರನ್ನು ಆಗ್ರಾದ ಸೆರೆಮನೆಯಲ್ಲಿಡಲಾಯಿತು. ಆ ಸಂದರ್ಭದಲ್ಲಿ ಹುಸಿ ಶಿವಾಜಿಯನ್ನು ಸಿದ್ಧಗೊಳಿಸಿ ಶಿವಾಜಿ ಮಹಾರಾಜರನ್ನು ಪಾರುಮಾಡಲಾಯಿತು. ಆಗ ಸಾವು ಎದುರಿಸಲು ಕೊನೆಗೆ ಉಳಿದವರೆಂದರೆ ಮದಾರಿ ಮೆಹತರ್ ಮತ್ತು ಹಿರೋಜಿ ಫರ್ಝಂದ್. ಶಿವಾಜಿಗಾಗಿ ಅವರು ಹುತಾತ್ಮರಾದರು. ಜನರ ಸಹಭಾಗಿತ್ವ ಅನನ್ಯವಾದುದು ಎಂಬುದಕ್ಕೆ ಇದೊಂದು ಉದಾಹರಣೆ.

ಪನಾಳಗಢದ ಕಾಳಗದಲ್ಲಿ ಶಿವಾಜಿ ಸೈನ್ಯಕ್ಕೆ ಸೋಲುಂಟಾಗುವ ಪರಿಸ್ಥಿತಿ ಉಂಟಾಯಿತು. ಆಗ ಹಡಪದ ಸಮಾಜದ ಶಿವಾ ನಾವಿ ಎಂಬಾತ ಶಿವಾಜಿಯ ವೇಷ ಧರಿಸಿ ವೈರಿಗಳಿಗೆ ಸೆರೆ ಸಿಕ್ಕ. ಆ ಸಂದರ್ಭದಲ್ಲಿ ಶಿವಾಜಿ ವಿಶಾಲಗಢಕ್ಕೆ ಪಾರಾಗಲು ಸಾಧ್ಯವಾಯಿತು. ಶಿವಾ ನಾವಿ ನಗುನಗುತ್ತ ಮರಣ ದಂಡನೆಗೆ ಒಳಗಾದ. ಹೀಗೆ ಶಿವಾಜಿಗಾಗಿ ಜನಸಾಮಾನ್ಯರು ಪ್ರಾಣಾರ್ಪಣೆಗೂ ಸಿದ್ಧರಾಗಿದ್ದರು.

ಜಹಗೀರದಾರಿ ಪದ್ಧತಿಗೆ ಕಡಿವಾಣ:

ಭಾರತದಲ್ಲಿ ಜಮೀನುದಾರಿ ಪದ್ಧತಿಯನ್ನು ಕಡೆಗಣಿಸಿ ರೈತಾಪಿ ಪದ್ಧತಿಯನ್ನು ತರಲು ಪ್ರಯತ್ನಿಸಿದ ಮೊದಲ ಜನಪರ ರಾಜನಾಗಿ ಶಿವಾಜಿ ಕಂಗೊಳಿಸುತ್ತಾನೆ. ಅಂತೆಯೇ ಜನರು ಪ್ರೀತಿ ಮತ್ತು ಸಮರ್ಪಣಾಭಾವದಿಂದ ‘ಶಿವಾಜಿ ಮಹಾರಾಜ’ ಎಂದು ಕರೆದರು.

ಜಹಗೀರದಾರ, ದೇಶಮುಖ, ವತನದಾರ (ಗೌಡ), ಕುಲಕರ್ಣಿ ಮುಂತಾದವರು ಜನರ ಮಾಲಕರಲ್ಲ ರಾಜ್ಯದ ನೌಕರರು ಎಂದು ಸಾರಿದ ಮೊದಲ ದೊರೆ ಶಿವಾಜಿ. ಈ ಗ್ರಾಮಾಧಿಕಾರಿಗಳು ರೈತಾಪಿ ಜನರನ್ನು ಪೀಡಿಸಿದರೆ ಕಠಿಣ ಶಿಕ್ಷೆಗೆ ಗುರಿ ಮಾಡುವಂಥ ಆದೇಶಗಳನ್ನು ಹೊರಡಿಸಿದ. ರೈತರು ಮತ್ತು ರಾಜ್ಯಾಡಳಿತದ ಮಧ್ಯೆ ನೇರ ಸಂಬಂಧ ಕಲ್ಪಿಸಿದ ಶ್ರೇಯಸ್ಸು ಶಿವಾಜಿಗೆ ಸಲ್ಲುತ್ತದೆ.

ಜನರು ಮೊದಲ ಬಾರಿಗೆ ಈ ಅನನ್ಯವಾದ ಹೊಸ ವ್ಯವಸ್ಥೆಯನ್ನು ಅನುಭವಿಸಿದರು. ‘‘ನಮ್ಮಂಥ ಕಟ್ಟಕಡೆಯ ಮನುಷ್ಯರಿಗೂ ಇಷ್ಟೊಂದು ಮರ್ಯಾದೆ ಇದೆಯೇ?’’ ಎಂದು ಆಶ್ಚರ್ಯಪಟ್ಟರು. ರಾಜ ಮತ್ತು ಪ್ರಜೆಗಳ ಮಧ್ಯೆ ಅನ್ಯೋನ್ಯ ಸಂಬಂಧ ಬೆಳೆಯಿತು. ಜನಸಾಮಾನ್ಯರು ಶಿವಾಜಿ ರಾಜ್ಯವನ್ನು ತಮ್ಮ ರಾಜ್ಯ ಎಂದು ತಿಳಿದುಕೊಳ್ಳುವಷ್ಟರ ಮಟ್ಟಿಗೆ ಈ ಸಂಬಂಧ ಬೆಳೆಯಿತು. ಶಿವಾಜಿಗಾಗಿ ಜನ ಯಾವುದೇ ರೀತಿಯ ತ್ಯಾಗಕ್ಕೂ ಸಿದ್ಧರಾದರು.

ಪುಣೆಯು ಶಿವಾಜಿ ಮಹಾರಾಜರ ತಂದೆಯಾದ ಶಹಾಜಿಯ ಜಹಗೀರಾಗಿತ್ತು. ಮೊಗಲರು ಮತ್ತು ಆದಿಲಶಾಹಿಗಳ ಗಡಿ ಪ್ರದೇಶದಲ್ಲಿ ಪುಣೆ ಇದ್ದ ಕಾರಣ ಅನೇಕ ಸಲ ಮೊಗಲರ ದಾಳಿಗಳಿಗೆ ತುತ್ತಾಗಿ ಗ್ರಾಮಗಳು ಧ್ವಂಸಗೊಂಡು ಹಾಳು ಬಿದ್ದಿದ್ದವು. ಶಿವಾಜಿ ಅವುಗಳ ಪುನರ್ ನಿರ್ಮಾಣ ಮಾಡಿದ. ಹೊಸದಾಗಿ ಹೊಲ ಮಾಡುವವನಿಗೆ ಬೀಜ ಮತ್ತು ಕೃಷಿ ಸಲಕರಣೆಗಳನ್ನು ನೀಡುವ ಮೂಲಕ ಒಕ್ಕಲುತನವನ್ನು ಪ್ರೋತ್ಸಾಹಿಸಿದ. ಹೊಸದಾಗಿ ಉಳುಮೆ ಮಾಡುವ ರೈತರಿಂದ ಅತಿ ಕಡಿಮೆ ಕಂದಾಯ ವಸೂಲಿ ಮಾಡುವ ವ್ಯವಸ್ಥೆ ಮಾಡಿದ. ಬೆಳೆ ಬರುವ ತನಕ ಆಹಾರಧಾನ್ಯ ಒದಗಿಸಿದ. ರೈತರಿಗೆ ಸಾಲ ಕೊಡುವ ವ್ಯವಸ್ಥೆ ಮಾಡಿದ. ನಂತರ ನಾಲ್ಕು ವರ್ಷಗಳಲ್ಲಿ ರೈತರಿಗೆ ಹೊರೆಯಾಗದಂತೆ ಸಾಲ ಮರುಪಾವತಿ ಮಾಡಲು ಅಧಿಕಾರಿಗಳಿಗೆ ತಿಳಿಸಿದ. ರೈತರಿಗೆ ಕಿರುಕುಳ ಕೊಡದಂತೆ ಅಧಿಕಾರಿಗಳನ್ನು ಎಚ್ಚರಿಸಿದ.

ಎಲ್ಲ ರೈತರ ಭೂಮಿಯನ್ನು ಅಳತೆ ಮಾಡಿ ಕಂದಾಯವನ್ನು ನಿಗದಿ ಪಡಿಸಲಾಯಿತು. ಬರಗಾಲದಲ್ಲಿ ಕಂದಾಯ ವಸೂಲಿಯನ್ನು ನಿಲ್ಲಿಸಲಾಯಿತು. ಬರಗಾಲದಿಂದ ತತ್ತರಿಸಿದ ರೈತರಿಗೆ ಶಿವಾಜಿ ಸಹಾಯ ಹಸ್ತ ಚಾಚಿದ.

ಯಾವ ಸೈನ್ಯವೂ ರೈತನ ಫಸಲನ್ನು ನಾಶ ಮಾಡಬಾರದು. ಪ್ರಜೆಗಳ ಹುಲ್ಲಿಗೂ ಸೈನಿಕರು ಕೈ ಹಚ್ಚಬಾರದು. ಕುದುರೆಗೆ ಬೇಕಾದ ಹುಲ್ಲನ್ನು ರೈತರಿಗೆ ಹಣ ಕೊಟ್ಟು ಕೊಳ್ಳಬೇಕು. ಆಹಾರ ಧಾನ್ಯ ಮತ್ತು ಹುಲ್ಲಿಗಾಗಿ ಹಣ ಕೊಡಲಾಗಿದೆ. ಪ್ರಜೆಗಳಿಗೆ ಯಾವುದೇ ರೀತಿಯಿಂದ ಕಿರುಕುಳ ಕೊಡಬಾರದು ಎಂದು ಆದೇಶಿಸಿದ.

ದೋಣಿ, ಹಡಗು ನಿರ್ಮಿಸಲು ಬೇಕಾದ ಮಾವು ಮತ್ತು ಹಲಸಿನ ಮರಗಳನ್ನು ಕೂಡ ಕಡಿಯಬಾರದು. ಪ್ರಜೆಗಳು ಮಕ್ಕಳಂತೆ ಈ ಫಲ ಕೊಡುವ ಮರಗಳನ್ನು ಬೆಳೆಸಿರುತ್ತಾರೆ ಎಂಬುದನ್ನು ಮರೆಯಬಾರದು ಎಂದು ಶಿವಾಜಿ ಹೇಳಿದ್ದು ಪ್ರಜೆಗಳ ಬಗ್ಗೆ ಅವರಿಗಿರುವ ಕಾಳಜಿಯ ಪ್ರತೀಕವಾಗಿದೆ.

ಕೃಷಿಕ ಭೂಷಣ:

ಗೌಡರ ಮತ್ತು ಜಮೀನುದಾರರ ಅವ್ಯವಸ್ಥೆಯನ್ನು ಜನಾನುರಾಗಿ ಶಿವಾಜಿ ಸರಿಪಡಿಸಿದ. ಗೌಡರು ಮತ್ತು ಜಮೀನುದಾರರ ಬದಲಿಗೆ ಅಧಿಕಾರಿಗಳನ್ನು ನೇಮಿಸಿ ಕಂದಾಯ ವಸೂಲಿ ಮಾಡಿಸಿದ. ಇದರಿಂದಾಗಿ ಗೌಡರು ಜಮೀನುದಾರರು ಮುಂತಾದ ಗ್ರಾಮೀಣ ಜನರ ಪೀಡಕರಾಗಿದ್ದವರ ಅಧಿಕಾರ ಕಿತ್ತುಕೊಂಡು ಅವರನ್ನು ಹದ್ದುಬಸ್ತಿನಲ್ಲಿಟ್ಟ. ಪ್ರಜೆಗಳನ್ನು ಗುಲಾಮರಾಗಿಸುವ ದೇಶಮುಖ, ದೇಶಪಾಂಡೆ ಅವರಂಥ ಗ್ರಾಮಾಧಿಕಾರಿಗಳ ವಾಡೆ ಮತ್ತು ಬುರುಜುಗಳನ್ನು ನೆಲಸಮಗೊಳಿಸಿದ. ಗ್ರಾಮೀಣ ಜನರ ಹಾಗೆ ಅವರೂ ಸಾಧಾ ಮನೆಯಲ್ಲಿ ಇರಬೇಕೆಂದು ಆಜ್ಞೆ ಹೊರಡಿಸಿದ. ಶಿವಾಜಿಯ ಅಧಿಕಾರಿಗಳು ಕೂಡ ರೈತರ ವಿರುದ್ಧ ಮಾತನಾಡಲು ಹೆದರುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂತೆಯೆ ಜ್ಯೋತಿಬಾ ಫುಲೆ ಅವರು ಶಿವಾಜಿಯನ್ನು ‘ಕೃಷಿಕ ಭೂಷಣ’ ಎಂದು ಕರೆದಿದ್ದಾರೆ.

ಸೈನ್ಯ ಸಂಸ್ಕೃತಿ:

ಶಿವಾಜಿಯ ಬಹಳಷ್ಟು ಸೈನಿಕರು ಯುದ್ಧ ಸಂದರ್ಭದಲ್ಲಿ ಮಾತ್ರ ಸೈನಿಕರಾಗಿರುತ್ತಿದ್ದರು. ಯುದ್ಧ ಇಲ್ಲದ ಕಾಲದಲ್ಲಿ ತಮ್ಮ ಹಳ್ಳಿಗಳಲ್ಲಿ ಕುಟುಂಬದೊಡನೆ ವಾಸಿಸುತ್ತ ಹೊಲ ಗದ್ದೆಗಳನ್ನು ನೋಡಿಕೊಳ್ಳುತ್ತಿದ್ದರು. ಸೈನಿಕರಿಗೆ ಸಂಬಳದ ವ್ಯವಸ್ಥೆ ಮಾಡಿದ್ದು ಶಿವಾಜಿಯ ವೈಶಿಷ್ಟ್ಯವಾಗಿದೆ.

ಸೈನಿಕರು ವಿವಿಧ ಕಡೆಗಳಲ್ಲಿ ದಂಡೆತ್ತಿ ಹೋದಾಗ ಲೂಟಿ ಮಾಡಿದ ವಸ್ತು ಒಡವೆಗಳಲ್ಲಿ ಒಂದು ಪಾಲನ್ನು ಪಡೆಯುವ ರೂಢಿ ಇತ್ತು. ಹೀಗಾಗಿ ಅವರು ಹಂಗುಹರಿದು ಲೂಟಿ ಮಾಡುತ್ತ ಹೆಚ್ಚಿನ ಸಾವು ನೋವುಗಳಿಗೆ ಕೂಡ ಕಾರಣರಾಗುತ್ತಿದ್ದರು. ಅವರಿಗೆ ಶಿಸ್ತು ಎಂಬುದೇ ಇರಲಿಲ್ಲ. ಬಹುಪಾಲು ಸೈನಿಕರು ಅತ್ಯಾಚಾರಿಗಳೂ ಆಗಿದ್ದರು. ಲೂಟಿ ಮಾಡುತ್ತ ಹೋಗುವುದೇ ಅವರ ಕೆಲಸವಾಗಿತ್ತು. ವರ್ಷಗಟ್ಟಲೇ ಕುಟುಂಬದಿಂದ ಮತ್ತು ಕೃಷಿಕಾರ್ಯ ಮುಂತಾದವುಗಳಿಂದ ದೂರವಿರುವ ಅವರು ಹೀಗೆ ಪಾಶವೀ ಕೃತ್ಯಗಳಲ್ಲಿ ತೊಡುಗುವುದಕ್ಕೆ ಸಹಾಯಕವಾಗಿದ್ದವು.

ದಾಳಿಯ ಸಂದರ್ಭದಲ್ಲಿ ಸೈನಿಕರು ತಮ್ಮ ಮನಸ್ಸಿಗೆ ಬಂದಂತೆ ಲೂಟಿ ಮಾಡಿಕೊಂಡು ಹೋಗುವ ಮತ್ತು ದಾಳಿಯಲ್ಲಿ ಸಿಕ್ಕ ಹೆಣ್ಣುಮಕ್ಕಳ ಮಾನಹರಣ ಮಾಡುವ ದುಷ್ಟ ಪದ್ಧತಿಯನ್ನು ಶಿವಾಜಿ ನಿಲ್ಲಿಸಿದ. ಸೈನಿಕರು ಮತ್ತು ಪ್ರಜೆಗಳ ಮಧ್ಯೆ ಅವಿನಾಭಾವ ಸಂಬಂಧ ಮೂಡಿಸಿದ್ದು ಶಿವಾಜಿಯ ಹಿರಿಮೆಯಾಗಿದೆ.

ಇಂಥ ಒಂದು ಸಂಬಂಧ 20ನೇ ಶತಮಾನದಲ್ಲಿ ವಿಯಟ್ನಾಂ ದೇಶದಲ್ಲಿ ಕಂಡು ಬಂದಿತು. ವಿಯಟ್ನಾಂ ದೇಶದಲ್ಲಿ ಕುದುರೆಯ ಮೇಲೆ ಕುಳಿತ ವೀರನೊಬ್ಬನ ಮೂರ್ತಿಯನ್ನು ನೋಡಿದ ಭಾರತೀಯರು ಶಿವಾಜಿಯ ಮೂರ್ತಿ ಎಂದೇ ಭಾವಿಸಿದ್ದು ಬಹಳ ಪ್ರಚಾರವಾಯಿತು. ಅದಕ್ಕೆ ಮುಖ್ಯ ಕಾರಣ ಶಿವಾಜಿಯ ಸೈನಿಕರ ಹಾಗೆ ವಿಯಟ್ನಾಂ ಸೈನಿಕರು ಗೆರಿಲ್ಲಾ ಯುದ್ಧದಲ್ಲಿ ಪರಿಣತರು ಮತ್ತು ಪ್ರಜೆಗಳ ಜೊತೆ ಅನ್ಯೋನ್ಯ ಸಂಬಂಧವಿಟ್ಟುಕೊಂಡವರು. ಅಮೆರಿಕ ಮೂರು ದಶಕಗಳ ವರೆಗೆ ಯುದ್ಧ ಮಾಡಿದರೂ ಸೋಲದಂಥವರು! ಶಿವಾಜಿಯ ರಣತಂತ್ರ ಮತ್ತು ಜನಸಮುದಾಯದ ಮೇಲಿನ ಕಾಳಜಿ ಹೀಗೆ ಪ್ರಚಾರವಾದುದು ಹೆಮ್ಮೆಯ ವಿಚಾರವಾಗಿದೆ.

ಹೆಣ್ಣಿನ ಮಾನ:

ಆ ಕಾಲದಲ್ಲಿ ಪಾಳೆಯಗಾರರು, ಮಂತ್ರಿಗಳು, ಜಮೀನುದಾರರು, ದೇಶಮುಖರು, ದೇಸಾಯರು, ಗೌಡರು, ಪಟೇಲರು ಮುಂತಾದ ಶ್ರೀಮಂತ ವರ್ಗದ ಅನೇಕರು ತಮ್ಮ ಪ್ರದೇಶದ ಸುಂದರ ಮಹಿಳೆಯರನ್ನು ಭೋಗವಸ್ತುವಿನಂತೆ ಬಳಸಿಕೊಳ್ಳುತ್ತಿದ್ದರು. ಜನರು ಯಾರ ಬಳಿಗೆ ನ್ಯಾಯಕ್ಕಾಗಿ ಹೋಗಬೇಕಿತ್ತೋ ಅವರೇ ಈ ಅನ್ಯಾಯ ಅತ್ಯಾಚಾರಗಳನ್ನು ಮಾಡುತ್ತಿದ್ದರು. ಶಿವಾಜಿ ಆಡಳಿತದಲ್ಲಿ ಇಂಥ ಘಟನೆಗಳು ನಡೆಯದಂತಾದವು. ಇಂಥ ಅತ್ಯಾಚಾರಿಗಳಿಗೆ ಶಿವಾಜಿ ಕೈ ಕಾಲು ಕತ್ತರಿಸುವ ಮತ್ತು ಕಣ್ಣು ಕೀಳಿಸುವ ಆದೇಶ ನೀಡುತ್ತಿದ್ದ.

ರಾಂಝಾ ಪಾಟೀಲ ಎಂಬ ಗೌಡ ಒಬ್ಬ ರೈತನ ಮಗಳನ್ನು ಹಾಡ ಹಗಲೇ ಎಳೆದುಕೊಂಡು ಹೋಗಿ ಅತ್ಯಾಚಾರ ಮಾಡಿದ. ಆ ಯುವತಿ ಆತ್ಮಹತ್ಯೆ ಮಾಡಿಕೊಂಡಳು. ಈ ವಿಷಯ ಶಿವಾಜಿಯ ಗಮನಕ್ಕೆ ಬಂದಿತು. ಕೂಡಲೇ ಆತನನ್ನು ಬಂಧಿಸಿ ಕೈ ಕಾಲು ಕಡಿಯುವ ಆಜ್ಞೆ ಮಾಡಿದ.

 1678ರಲ್ಲಿ ಸುಖಜಿ ಗಾಯಕವಾಡ ಎಂಬ ಸೇನಾಪತಿ ಮಲ್ಲಮ್ಮನ ಬೆಳವಡಿ ಕೋಟೆಗೆ ಮುತ್ತಿಗೆ ಹಾಕಿದ. ಸಾವಿತ್ರಿಬಾಯಿ ದೇಸಾಯಿ ಎಂಬ ಮಹಿಳೆ ಆ ಕೋಟೆಯ ರಕ್ಷಣಾಧಿಕಾರಿಯಾಗಿದ್ದಳು. ಆ ವೀರ ಮಹಿಳೆ ಕೋಟೆಯ ರಕ್ಷಣೆಗಾಗಿ 27 ದಿನಗಳ ವರೆಗೆ ಹೋರಾಡಿದಳು. ಕೊನೆಗೆ ಸುಖಜಿ ಆ ಕೋಟೆಯನ್ನು ಗೆದ್ದುಕೊಂಡ. ವಿಜಯೋನ್ಮಾದದಿಂದ ಸಾವಿತ್ರಿಬಾಯಿಯ ಮೇಲೆ ಅತ್ಯಾಚಾರ ಮಾಡಿದ. ಶಿವಾಜಿಗೆ ಈ ಸುದ್ದಿ ತಲುಪಿತು. ಆ ಸೇನಾಪತಿಯ ಕಣ್ಣು ಕೀಳಿಸಿ ಜೈಲಿಗಟ್ಟಿದ.

ಔರಂಗಝೇಬನ ಸೇನಾಪತಿ ಷಯಿಸ್ತಾಖಾನ ಭಾರೀ ಸೈನ್ಯದೊಂದಿಗೆ ಪುಣೆಗೆ ಮುತ್ತಿಗೆ ಹಾಕಿದ. ಶಿವಾಜಿ ಗುಪ್ತಸ್ಥಳ ಸೇರಿ ಯುದ್ಧತಂತ್ರವನ್ನು ಹೆಣೆಯುವುದರಲ್ಲಿ ಮಗ್ನರಾದರು. ಶಿವಾಜಿಯ ಲಾಲಮಹಲ್ ಅರಮನೆಯಲ್ಲಿ ಷಯಿಸ್ತಾಖಾನ್ ಬಿಡಾರ ಹೂಡಿದ. ರಾತ್ರಿ ವೇಳೆ ಕಗ್ಗತ್ತಲಲ್ಲಿ ಶಿವಾಜಿ ಲಾಲಮಹಲ್‌ಗೆ ನುಗ್ಗಿ ದಾಳಿ ಮಾಡಿದಾಗ ಷಯಿಸ್ತಾಖಾನ್ ತನ್ನ ಸೈನ್ಯದೊಂದಿಗೆ ಪಲಾಯನ ಮಾಡಬೇಕಾಯಿತು. ಶಿವಾಜಿ ಮತ್ತು ಆತನ ಕೂಟ (ಗೆರಿಲ್ಲಾ) ಯೋಧರ ಸಾಮರ್ಥ್ಯ ಅಪ್ರತಿಮವಾಗಿತ್ತು.

ನೇತಾಜಿ ಪಾಲ್ಕರ್ ಆ ಸಂದರ್ಭದಲ್ಲಿ ಷಹಿಸ್ತಾಖಾನನ ಮಗಳನ್ನು ಬಂಧಿಸಿ ಶಿವಾಜಿಯ ತಾಯಿ ಜೀಜಾಬಾಯಿಯ ಬಳಿ ಕರೆದುಕೊಂಡು ಬಂದಿದ್ದ. ಈ ದೃಶ್ಯ ನೋಡಿ ನೇತಾಜಿ ಮೇಲೆ ಶಿವಾಜಿ ಸಿಟ್ಟಾದ. ಆ ಯುವತಿ ಯನ್ನು ಗೌರವಿಸಿ ತಂದೆ ಷಯಿಸ್ತಾಖಾನ್ ಬಳಿಗೆ ಕಳುಹಿಸಿಕೊಟ್ಟ.

ವಿಜಾಪುರದ ಆದಿಲಶಾಹಿ, ಮುಂಬೈ ಬಳಿಯ ಕಲ್ಯಾಣದ ಕೋಟೆ ರಕ್ಷಣೆಗೆ ಮೌಲಾನಾ ಅಹಮದ್ ಎಂಬ ಅರಬನನ್ನು ಕಿಲ್ಲೇದಾರನಾಗಿ ನೇಮಿಸಿದ್ದ. ಶಿವಾಜಿಯ ಸೈನಿಕರು ಕಲ್ಯಾಣದ ಮೇಲೆ ದಾಳಿ ಮಾಡಿದಾಗ ಅಹಮದ್ ಮತ್ತು ಆತನ ಕುಟುಂಬದವರನ್ನು ಬಂಧಿಸಿದರು. ಆತನ ಸುರಸುಂದರಿ ಸೊಸೆಯನ್ನು ಮಾತ್ರ ಶಿವಾಜಿಯ ಮುಂದೆ ತಂದು ನಿಲ್ಲಿಸಿದರು. ಆಕೆ ಭಯದಿಂದ ನಡಗುತ್ತಿದ್ದಳು.

ಆಗ ಶಿವಾಜಿ ಎದ್ದು ಆಕೆಯ ಬಳಿ ಹೋದ. ನೀನು ಭಯಪಡಬೇಕಿಲ್ಲ. ನನ್ನ ತಾಯಿ ನಿನ್ನ ಹಾಗೆ ಸುಂದರಿಯಾಗಿದ್ದರೆ ನಾನು ಇನ್ನೂ ಲಕ್ಷಣವಾಗಿರುತ್ತಿದ್ದೆ. ನಿನ್ನ ಕುಟುಂಬದವರ ಬಳಿ ಸುರಕ್ಷಿತವಾಗಿ ಕಳುಹಿಸುತ್ತೇನೆ ಎಂದು ಅಭಯ ವಚನ ನೀಡಿದ. ಅವಳಿಗೆ ಉಡುಗೊರೆ ನೀಡಿದ. ಆಕೆಯ ಕಿಲ್ಲೇದಾರ ಮಾವನಿಗೆ ಸತ್ಕರಿಸಿದ. ಅವಳ ಕುಟುಂಬದವರೆಲ್ಲರನ್ನು ಬಿಡುಗಡೆ ಮಾಡಿ ಸೈನಿಕರ ರಕ್ಷಣೆಯೊಂದಿಗೆ ಕಳುಹಿಸಿದ.

ಮಹಿಳೆಯರನ್ನು ಹೇಗೆ ನಡೆಸಿಕೊಳ್ಳಬೇಕು, ಸೆರೆ ಸಿಕ್ಕ ವೀರರನ್ನು ಹೇಗೆ ನೋಡಿಕೊಳ್ಳಬೇಕು ಎಂಬ ಪರಿಜ್ಞಾನ ಇಲ್ಲವೇ ಎಂದು, ಹಾಗೆ ಕರೆದುಕೊಂಡು ಬಂದ ಸೈನಿಕರಿಗೆ ಪ್ರಶ್ನಿಸಿದ.

ಸ್ತ್ರೀಯರ ಬಗ್ಗೆ ಶಿವಾಜಿ ಬಹಳ ಗೌರವ ತೋರಿಸುತ್ತಿದ್ದ. ಸೈನಿಕರು ಶಿಸ್ತು ಮೀರಬಾರದು. ಸ್ತ್ರೀಯರ ಮೇಲೆ ಅತ್ಯಾಚಾರ ಮಾಡಬಾರದು. ಅವರನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂದು ಕಟ್ಟಪ್ಪಣೆ ಮಾಡಿದ್ದ. ಯುದ್ಧದಲ್ಲಿ ಯಾವುದೇ ಮಹಿಳೆ ಸಿಕ್ಕರೂ ಅವಳನ್ನು ಸ್ಪರ್ಶಿಸಲು ಕೂಡ ಸಾಧ್ಯವಾಗದಂತಹ ಆಜ್ಞೆಯನ್ನು ಹೊರಡಿಸಿದ ಕೀರ್ತಿ ಶಿವಾಜಿಗೆ ಸಲ್ಲುತ್ತದೆ.

ಸರ್ವಧರ್ಮ ಸಮಭಾವ:

ತನ್ನ ಧರ್ಮದಂತೆ ಇತರರ ಧರ್ಮವೂ ಶ್ರೇಷ್ಠ. ದೇವರ ಆರಾಧನಾ ಪದ್ಧತಿ ಭಿನ್ನವಾಗಿದ್ದರೂ ಅದರ ಉದ್ದೇಶ ಒಂದೇ ಅದು ದೇವರಿಗೆ ವಿಧೇಯನಾಗಿರುವುದು ಎಂಬ ಶಿವಾಜಿಯ ಮಾತು ಇಂದಿನ ಭಾರತದ ಸ್ಥಿತಿಗೆ ದಾರಿದೀಪವಾಗಿದೆ.

 1669ನೇ ನವೆಂಬರ್ 2 ರಂದು ತನ್ನ ಒಂದು ಪತ್ರದಲ್ಲಿ ರಘುನಾಥ ಪಂಡಿತರಾವ್ ಎಂಬ ಅಧಿಕಾರಿ ಶಿವಾಜಿ ಮಹಾರಾಜರ ಆಜ್ಞೆಯನ್ನು ಹೀಗೆ ಉಲ್ಲೇಖಿಸಿದ್ದಾನೆ. ‘‘ಜನ ತಮ್ಮ ತಮ್ಮ ಧರ್ಮ ಪಾಲಿಸಬೇಕು. ಅದರಲ್ಲಿ ಉಳಿದವರು ಹಸ್ತಕ್ಷೇಪ ಮಾಡಬಾರದು ಎಂದು ಶ್ರೀಮಂತ ಮಹಾರಾಜ ರಾಜೇ (ಶಿವಾಜಿ ಮಹಾರಾಜರು) ಆದೇಶಿಸಿದ್ದಾರೆ.’’

 ಸೂರತ್ ದಾಳಿಯ ಸಂದರ್ಭದಲ್ಲಿ ಅಲ್ಲಿನ ಹಝರತ್ ಬಾಬಾ ದರ್ಗಾಕ್ಕೆ ಹಾನಿ ಮಾಡಬಾರದು ಎಂದು ಶಿವಾಜಿ ಸೈನಿಕರಿಗೆ ಎಚ್ಚರಿಸಿದ. ಆ ದರ್ಗಾಕ್ಕೆ ಅರ್ಪಿಸಲು ಕಾಣಿಕೆಗಳನ್ನು ಕಳಿಸಿದ್ದ. ಸೂರತ್ ನಗರದಲ್ಲಿನ ಫಾದರ್ ಅಂಬ್ರೋಸ್ ಪಿಂಟೊ ಅವರ ಆಶ್ರಮಕ್ಕೆ ಕೂಡ ಯಾವುದೇ ತೆರನಾದ ಹಾನಿ ಸಂಭವಿಸಬಾರದು ಎಂದು ಎಚ್ಚರಿಸಿದ್ದ.

ಸೆರೆ ಸಿಕ್ಕವರನ್ನು ಎಂದೂ ಹೀನಾಯವಾಗಿ ನಡೆಸಿಕೊಳ್ಳುತ್ತಿರಲಿಲ್ಲ. ಗೆದ್ದ ಪ್ರದೇಶಗಳಲ್ಲಿನ ಬಡವರಿಗೆ ಯಾವುದೇ ರೀತಿಯ ತೊಂದರೆ ಮಾಡಬಾರದೆಂದು ಸೈನಿಕರಿಗೆ ಆದೇಶಿಸಿದ್ದ.

ಖಾಫಿಖಾನ್ ಎಂಬ ಮುಸ್ಲಿಮ್ ಚರಿತ್ರೆಕಾರ ಶಿವಾಜಿ ಬಗ್ಗೆ ಹೀಗೆ ಬರೆದಿದ್ದಾನೆ: ‘ಶಿವಾಜಿ ಸೈನಿಕರ ಬಗ್ಗೆ ಮಾಡಿದ ಕಟ್ಟುನಿಟ್ಟಿನ ನಿಯಮವೆಂದರೆ, ಸೈನಿಕರು ಯುದ್ಧಕ್ಕೆ ಹೋದ ಕಡ

share
ರಂಜಾನ್ ದರ್ಗಾ
ರಂಜಾನ್ ದರ್ಗಾ
Next Story
X