ತಮಿಳು ಹಾಸ್ಯನಟ ಮೈಲ್‌ಸ್ವಾಮಿ ಹೃದಯಾಘಾತದಿಂದ ನಿಧನ

ಚೆನ್ನೈ: ತಮಿಳಿನ ಖ್ಯಾತ ಹಾಸ್ಯನಟ ಮೈಲ್‌ಸ್ವಾಮಿ ರವಿವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಅವರಿಗೆ 57 ವರ್ಷ ವಯಸ್ಸಾಗಿತ್ತು.
ಮೈಲ್‌ಸ್ವಾಮಿ ತಮ್ಮ ಹಾಸ್ಯ ಪಾತ್ರಗಳಿಗೆ ಹೆಸರುವಾಸಿಯಾಗಿದ್ದರು ಹಾಗೂ ತಮಿಳಿನಲ್ಲಿ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಧೂಲ್, ವಸೀಗರ, ಗಿಲ್ಲಿ, ಗಿರಿ, ಉತ್ತಮಪುತಿರನ್, ವೀರಂ, ಕಾಂಚನ, ಹಾಗೂ ಕಂಗಲಾಲ್ ಕೈದು ಸೇಯ್ ಚಿತ್ರಗಳಲ್ಲಿನ ನಟನೆಯಿಂದ ಗಮನ ಸೆಳೆದಿದ್ದರು.
ಅತ್ಯುತ್ತಮ ಹಾಸ್ಯನಟನೆಗಾಗಿ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ.
Next Story





